ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹಯವದನನ ಪಾದದ್ವಯ| ಶ್ರೀ ವಾದಿರಾಜರು | Hayavadanana Pada | Sri Vadirajaru


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಹಯವದನನ ಪಾದದ್ವಯವ ನೆನೆಯದವ
ಜಯಿಸುವನೆಂತೋ ಸಂಸ್ಕೃತಿ ಫಲವ || ಪ ||

ಕಾಗೆಯಂತಾದರು ಬಿದ್ದರು ಎದ್ದರು
ಯೋಗದೊಳಿದ್ದರು ಬಿದ್ದವನೆ
ಆಗಮವನು ತಂದು ಅಜನಿಗೆ ಬೋಧಿಸಿ-
ದಾ ಗುಣನಿಧಿಯನರ್ಚಿಸದವನು || 1 ||

ಬೂದಿಗೆ ವಾದಿಸಿ ಮಣ್ಣಮೇಲುಣ್ಣಲು
ಸಾಧಿಪುದೇನವ ಶ್ರಾವಕ ವ್ರತವ
ಬೂದಿಯ ಮಾಡಿದ ಮಣ್ಣಿನ ಗಂಡನ
ಹಾದಿಯನೊಲ್ಲದ ಹಂಚುನರ || 2 ||

ಉಟ್ಟುದ ಬಿಟ್ಟು ತನ್ನಟ್ಟಲು ಬಟ್ಟೆಯ
ಕಷ್ಟ ತಾ ಬಟ್ಟು ಕಂಗೆಟ್ಟನೈಸೆ
ಸೃಷ್ಟಿಸಿ ಸಲಹುವ ಹಯವದನನ ಪರಿ -
ತುಷ್ಟಿಗೆ ಪುಟ್ಟದ ದುಷ್ಟಪಶು || 3 ||


hayavadanana paadadvayava neneyadava
jayisuvaneMtO saMskRuti Palava || pa ||

kaageyaMtaadaru biddaru eddaru
yOgadoLiddaru biddavane
Agamavanu taMdu ajanige bOdhisi-
daa guNanidhiyanarcisadavanu || 1 ||

bUdige vaadisi maNNamEluNNalu
saadhipudEnava shraavaka vratava
bUdiya maaDida maNNina gaMDana
haadiyanollada haMcunara || 2 ||

uTTuda biTTu tannaTTalu baTTeya
kaShTa taa baTTu kaMgeTTanaise
sRuShTisi salahuva hayavadanana pari -
tuShTige puTTada duShTapashu || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru