ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ | ಹಯವದನ | Hyange Mechide Hengala | Hayavadana


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ
ಹಲವು ರೂಪ ತಾಳಿದವನ || ಪ ||

ರಾಗಮಿಗಿಲು ಲಕುಮಿ ರಮಣ
ಭೋಗಿರಾಜಶಯನನ || ಅಪ ||

ಜಲದಿ ಚರಿಸುತಿಹನು ಸತತ
ಒಲಿದು ಶಿರವ ನೆಗೆಹಿ ನೋಡ
ಸಲೆವಿಕಾರ ಕೋರೆಹಲ್ಲ
ಚಲ ಮಹೋಗ್ರ ರೂಪನ
ನೆಲವನೆಳೆದು ತಾಯ ತಲೆಯ ತರಿದು ಕರಡಿ ಕಪಿಯೊಳಾಡಿ
ಒಲಿದು ಗೋವು ಕಾಯ್ದು ಬತ್ತಲೆ ತೋಳಲಿ ತುರಗವೇರ್ದನ || ೧ ||

ಸೊಗಡು ಗಂಧವೆಸೆವ ತನುವು
ತೆಗೆದ ಬಾಯಿ ಕುಗ್ಗಿದ ಬೆನ್ನು
ಅಗೆದು ನೆಲವ ಬಗೆದು ರೌದ್ರ
ಹೊಗೆಯ ತೋರ್ವ ವದನನ
ವಿಗಡವಿಪ್ರ ರಾಜವೈರಿ ಬಗೆಯಬಡದಾರಣ್ಯವಾಸಿ
ನಗವ ಬೆರಳ ತುದಿಯಲೆತ್ತಿ ಜಗದ ಲಜ್ಜೆಯ ತೊರೆದ ಕಲ್ಕಿಯ || ೨ ||

ಮಿಡಿದು ಹೊಳೆವ ಚಂಚಲಚಿತ್ತ
ಕಡು ಕಠಿಣ ದೇಹದವನ
ಹಿಡಿದ ರೋಮಮಯ ಶರೀರ
ಕಿಡಿಯನುಗುಳ್ವ ನಯನನ
ಬಿಡದೆ ದಾನ ಬೇಡಿ ಕೊಡಲಿ ಪಿಡಿದು ಮೃಡನ ಧನುವ ಮುರಿದು
ಜಡಿದು ಅಗ್ರಪೂಜೆಗೊಂಡ ಕಡುನಿರ್ವಾಣ ಹಯವದನನ || ೩ ||

hyaaMge meccide heMgaLaranne
halavu rUpa taaLidavana || pa ||

raagamigilu lakumi ramaNa
bhOgiraajashayanana || apa ||

jaladi carisutihanu satata
olidu shirava negehi nODa
salevikaara kOrehalla
chala mahOgra rUpana
nelavaneLedu taaya taleya taridu karaDi kapiyoLaaDi
olidu gOvu kaaydu battale tOLali turagavErdana || 1 ||

sogaDu gaMdhaveseva tanuvu
tegeda baayi kuggida bennu
agedu nelava bagedu roudra
hogeya tOrva vadanana
vigaDavipra raajavairi bageyabaDadaaraNyavaasi
nagava beraLa tudiyaletti jagada lajjeya toreda kalkiya || 2 ||

miDidu hoLeva caMcalacitta
kaDu kaThiNa dEhadavana
hiDida rOmamaya sharIra
kiDiyanuguLva nayanana
biDade daana bEDi koDali piDidu mRuDana dhanuva muridu
jaDidu agrapUjegoMDa kaDunirvaaNa hayavadanana || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru