VIDEO
ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru
ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ || ೧ ||
ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ || ೨ ||
ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ|
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ || ೩ ||
ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ|
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ || ೪ ||
ವಿಷ್ಣು ತೀರ್ಥದಲ್ಲಿ ಶ್ರೀವಿಷ್ಣು ಇದ್ದಾನೆ ರಾಮರಾಮ||
ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿ ರಾಮರಾಮ || ೫ ||
ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ|
ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ || ೬ ||
ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ|
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ || ೭ ||
ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ|
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ || ೮ ||
ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ|
ಶ್ರೀಧರನ ದಯದಿ ಹೃದಯವಾಸನ ಕಂಡೆ ರಾಮರಾಮ || ೯ ||
ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ|
ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ || ೧೦ ||
ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ|
ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ|| ೧೧ ||
ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ|
ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ || ೧೨ ||
ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ|
ಸಂಕರ್ಷಣನ ದಯದಿ ಸಕಲ ತೀರ್ಥದಿ ಮಿಂದೆ ರಾಮರಾಮ || ೧೩ ||
ವಸುಧೆಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ|
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ || ೧೪ ||
ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನ ದಯದಿ ವೃದ್ಧಗಂಗೆಯಲಿ ಮಿಂದೆ ರಾಮರಾಮ || ೧೫ ||
ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ|
ಅಲಕನಂದದಿ ಮಿಂದೆ ಅನಿರುದ್ಧನ ದಯದಿ ರಾಮರಾಮ || ೧೬ ||
ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ|
ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ || ೧೭ ||
ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ|
ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ||೧೮ ||
ನಿರ್ಮಲ ಗಂಗೆಯಲಿ ನರಸಿಂಹನಿದ್ದಾನೆ ರಾಮರಾಮ|
ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ||೧೯ ||
ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ|
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ ||೨೦ ||
ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ|
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ ||೨೧ ||
ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ|
ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ||೨೨ ||
ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ|
ಶ್ರೀಹರಿಯ ದಯದಿಂದ ಹರಿವ ನದಿಯಲಿ ಮಿಂದೆ ರಾಮರಾಮ || ೨೩ ||
ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ|
ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ || ೨೪ ||
ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ|
ಭಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ || ೨೫ ||
kASiya hAdiyali kESavaniddAne rAmarAma
kESavana dayadi kASiyAtreya kaMDe rAmarAma || 1 ||
badarikASramadalli nArAyaNaniddAne rAmarAma
badarikASrama kaMDe nArAyaNana dayadi rAmarAma || 2 ||
prayAga nadiyalli mAdhavaniddAne rAmarAma|
prayAga nadi miMde mAdhavana dayadi rAmarAma || 3 ||
gOkuladalli SrI gOviMdaniddAne rAmarAma|
gOkulavanu kaMDe gOviMdana dayadi rAmarAma || 4 ||
viShNu tIrthadalli SrIviShNu iddAne rAmarAma||
viShNu tIrthadi miMde viShNuvina dayadi rAmarAma || 5 ||
matsyatIrthadalli madhusUdananiddAne rAmarAma|
matsyatIrthadi miMde madhusUdanana dayadi rAmarAma || 6 ||
trivENiyalli trivikramaniddAne rAmarAma|
trivikramana dayadi trivENiyalli miMde rAmarAma || 7 ||
vAmana nammanu olidu kAyuvanaMte rAmarAma|
vAmanana dayadi BUvaikuMThava kaMDe rAmarAma || 8 ||
SrIdhara namma hRudayadalliddAne rAmarAma|
SrIdharana dayadi hRudayavAsana kaMDe rAmarAma || 9 ||
RuShigaLASramadalli hRuShikESaniddAne rAmarAma|
hRuShikESana dayadi RuShigaLASrama kaMDe rAmarAma || 10 ||
padmanABadalli padmanABaniddAne rAmarAma|
padmanABana dayadi padmanABava kaMDe rAmarAma|| 11 ||
sAdhu bRuMdadalli dAmOdaraniddAne rAmarAma|
sAdhu bRuMdava kaMDe dAmOdarana dayadi rAmarAma || 12 ||
sakala tIrthadalli saMkarShaNaniddAne rAmarAma|
saMkarShaNana dayadi sakala tIrthadi miMde rAmarAma || 13 ||
vasudheya mElella vAsudEvaniddAne rAmarAma|
vAsudEvana dayadi vasudheyellava kaMDe rAmarAma || 14 ||
vRuddhagaMgeyalli pradyumnaniddAne rAmarAma
pradyumna dayadi vRuddhagaMgeyali miMde rAmarAma || 15 ||
alakanaMdeyalli aniruddhaniddAne rAmarAma|
alakanaMdadi miMde aniruddhana dayadi rAmarAma || 16 ||
puNyakShEtradalli puruShOttamaniddAne rAmarAma|
puNyakShEtrava kaMDe puruShOttamana dayadi rAmarAma || 17 ||
vaitaraNiyalli adhOkShajaniddAne rAmarAma|
vaitaraNidATide adhOkShajana dayadi rAmarAma ||18 ||
nirmala gaMgeyali narasiMhaniddAne rAmarAma|
nirmala gaMgeya miMde narasiMhana dayadi rAmarAma ||19 ||
vaikuMThagiriyalli acyutaniddAne rAmarAma|
vaikuMThagiri kaMDe acyutana dayadi rAmarAma ||20 ||
jAhnaviyalli janArdananiddAne rAmarAma|
janArdanana dayadi jAhnaviyali miMde rAmarAma ||21 ||
uDupi kShEtradalli upEMdraniddAne rAmarAma|
uDupi kShEtrava kaMDe upEMdrana dayadi rAmarAma ||22 ||
hariyuva nadiyalli SrI hariyiddAne rAmarAma|
shrIhariya dayadiMda hariva nadiyali miMde rAmarAma || 23 ||
kRuShNayeMdare kaShTavu parihAra rAmarAma|
kRuShNana dayadi sakala kaShTa biTTitu rAmarAma || 24 ||
BaktilippatnAlku nAma pELuvarige rAmarAma|
Bakti muktiya nIva vijayaviThThalarEya rAmarAma || 25 ||