ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಂಗ ನಿನಗಾರೇನೆಂದರು | ಹಯವದನ | Ranga Ninagarenu | Vadirajaru


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ರಂಗ ನಿನಗಾರೇನೆಂದರು ಮರೆತು ನಿದ್ರೆಗೈದೆಯಾ
ನೀ ಮಾಧವ ಸ್ವಾಮಿ || ಪ ||

ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದ
ಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆ
ಅಕ್ಕರದಿಂದಲಿ ಮಗನ ಅತಿಮುದ್ದನಾಡಿ
ಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ || ೧ ||

ಹಳ್ಳಿಯ ಮಕ್ಕಳು ಎನ್ನ ಬೈದರಮ್ಮ
ಕಳ್ಳನೆಂದು ಎನ್ನಕೂಡೆ ಆಡಲೊಲ್ಲರು
ಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮ್ಮಯ್ಯ
ಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ || ೨ ||

ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲ
ಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರು
ಮಗುವೆಂದೆನಿಸಿಕೊಂಡು ಮನೆಯೊಳಗಾಡೈ
ಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ || ೩ ||

raMga ninagaarEneMdaru maretu nidregaideyaa
nI maadhava svaami || pa ||

bikki bikkiyaLuta baMda gOpiya kaMda
ukkihariva kaNNanIra toDedaLeshOde
akkaradiMdali magana atimuddanaaDi
makkaLa maaNikyave nI maneyoLagaaDai || 1 ||

haLLiya makkaLu enna baidaramma
kaLLaneMdu ennakUDe ADalollaru
mellane baiyutta baralu kallaliTTarammayya
alliMdaMji aLuta naanu ODuta baMde || 2 ||

baagila gollaru gOpagOpiyarella
hagalugaLLa haalu beNNe cOraneMdaru
maguveMdenisikoMDu maneyoLagaaDai
hOgunnaMta uDupiyalli muddu hayavadanaraaya || 3 ||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru