ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಭಜಿಸಬಾರದೇ ಮನವೇ | ಮಹಿಪತಿ | Bhajisabarade Manave | Mahipati Dasaru |


 ಸಾಹಿತ್ಯ : ಶ್ರೀ ಮಹಿಪತಿ ದಾಸರು

Kruti: Sri Mahipati Dasaru


ಭಜಿಸಬಾರದೇ ಮನವೇ ಭಜಿಸಬಾರದೇ || ಪ ||
ಭಜಿಸಲೇಕಭಾವದಿಂದ | ನಿಜವಗೊಲಿದ ಹರಿ ಮುಕುಂದ || ಅಪ ||

ನಿಜವ ಬಿಟ್ಟು ದಣಿವುದ್ಯಾಕೆ | ಜಗಪತಿಗೊಂದಿಸದೆ ತಾನು
ಭಜನೆ ಮುಖ್ಯವೆಂದು ಸುಜನರೆಲ್ಲ ಪೇಳುತ್ತಿರಲಿಕ್ಕಾಗಿ || ೧ ||

ಪ್ರೀತಿಯಿಂದ ಅರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣ ತಾನು
ನೀತಿ ಹಿತವ ಭಕ್ತಿಯೋಗದಲ್ಲಿ ಸಾರುತ್ತಿರಲಿಕ್ಕಾಗಿ || ೨ ||

ಪ್ರಕಟ ಭಾವಕ್ಕೊಲಿವ ನೋಡಿ ಅಖಿಲದೊಳು ಸುಲಭದಿಂದ
ಭಕುತಿ ಸುಖವನಿತ್ತು ಸಲಹುತಿಹ ಮಹಿಪತಿ ಸ್ವಾಮಿಯನ್ನು || ೩ ||

bhajisabaaradE manavE bhajisabaaradE || pa ||
bhajisalEkabhaavadiMda | nijavagolida hari mukuMda || apa ||

nijava biTTu daNivudyaake | jagapatigoMdisade taanu
bhajane muKyaveMdu sujanarella pELuttiralikkaagi || 1 ||

prItiyiMda arjuna nODi gIteyalli shrIkRuShNa taanu
nIti hitava bhaktiyOgadalli saaruttiralikkaagi || 2 ||

prakaTa bhaavakkoliva nODi akhiladoLu sulabhadiMda
bhakuti sukhavanittu salahutiha mahipati svaamiyannu || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru