ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪ್ರಾಣನ ನೋಡಿರೈ | ಹಯವದನ | Pranana Nodirai with Lyrics | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಪ್ರಾಣನ ನೋಡಿರೈ 
ಮುಖ್ಯಪ್ರಾಣನ ಪಾಡಿರೈ || ಪ ||
ಕ್ಷೋಣಿಯೊಳಗೆ ಎಣೆರಹಿತ 
ಪಾವನಚರಿತ ಸದ್ಗುಣಭರಿತ || ಅಪ ||

ಮರ್ಕಟರೂಪಿಲೆ ಅವತರಿಸಿದ
ಅಂಜನೆಸುತನೊ ಮಹ ಅದ್ಭುತನೋ
ತರಣಿ ಮಂಡಲಕೆ ಮುಟ್ಟಿ ಹಾರಿದ
ಬಲದ ಶ್ರುತಿಯೊ ವಿಕ್ರಮ ಗತಿಯೊ
ಸುರರಾಯುಧ ನೆಗ್ಗಿಸಿದ 
ಕಪಿಯಗ್ರಣಿಯೊ ವಜ್ರದ ಖಣಿಯೊ
ಶರಣವಂದಿತ ಚರಿತ
ಮೂರ್ಲೋಕ ಗುರುವೋ ಕಲ್ಪತರುವೋ || ೧ ||

ರಾಮಪದಾಂಬುಜ ಬಿಂಬಪರಾಗ 
ಮಧುಪನೊ ದೇವಾಧಿಪನೊ
ತಾಮಸ ರಾವಣನೆದೆಗೊತ್ತಿದ
ಈ ಕರವೊ ಸಿಡಿಲಬ್ಬರವೋ
ಪ್ರೇಮದಿ ರಣದೊಳಗ್ಹಾರಿ
ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊ
ರೋಮಕೆ ಸಿಲ್ಕದ ಹನುಮನ
ಬಾಲದ ಸರಳೊ ದೈತ್ಯರಿಗುರುಳೊ || ೨ ||

ಕ್ಷಣದೊಳು ಸಂಜೀವನ ಗಿರಿಯನೆ ತಂದ
ತಪವೊ ತಾ ನೃಪಹಿತವೊ
ವನಜನಾಭನ ಪಾದ ಪಡೆದಂಥ
ಪದವೊ ಸಾಗರ ಮದವೊ
ನೆನೆಯಲು ದುರಿತನಿವಾರಣ
ಕರುಣಾವಾರಿಧಿಯೊ ಭಕ್ತರ ಸುಧೆಯೊ
ಅನುದಿನದಲ್ಲಿ ಹಯವದನನ
ನೆನೆಯುವ ದಯವೋ ಗತಿ ಆಶ್ರಯವೋ || ೩ ||

praaNana nODirai 
muKyapraaNana paaDirai || pa ||
kShONiyoLage eNerahita 
paavanacarita sadguNabharita || apa ||

markaTarUpile avatarisida
aMjanesutano maha adbhutanO
taraNi maMDalake muTTi haarida
balada shrutiyo vikrama gatiyo
suraraayudha neggisida 
kapiyagraNiyo vajrada KaNiyo
sharaNavaMdita carita
mUrlOka guruvO kalpataruvO || 1 ||

raamapadaaMbuja biMbaparaaga 
madhupano dEvaadhipano
taamasa raavaNanedegottida
I karavo siDilabbaravO
prEmadi raNadoLag~haari
rathavanodda maarutiyo puNya mUrutiyo
rOmake silkada hanumana
baalada saraLo daityariguruLo || 2 ||

kShaNadoLu saMjIvana giriyane taMda
tapavo taa nRupahitavo
vanajanaabhana paada paDedaMtha
padavo saagara madavo
neneyalu duritanivaaraNa
karuNaavaaridhiyo bhaktara sudheyo
anudinadalli hayavadanana
neneyuva dayavO gati AshrayavO || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru