ರಾಮ ಹರೇ ಜೈ ಜೈ ರಾಮ ಹರೇ
ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ
ರಾಮ ಹರೇ ಹರೇ ರಾಮ ಹರೇ
ಕೃಷ್ಣ ಹರೇ ಹರೇ ಕೃಷ್ಣ ಹರೇ|
ಕೌಸಲ್ಯಜ ರವಿವಂಶೋದ್ಭವ
ಸುರಸಂಸೇವಿತಾಪದ ರಾಮ ಹರೇ|
ಕಂಸಾದ್ಯಸುರರ ಧ್ವಂಸಗೈದ
ಯದುವಂಶೋದ್ಭವ ಶ್ರೀಕೃಷ್ಣ ಹರೇ ||೧||
ಮುನಿಮಕರಕ್ಷಕ ಧನುಜರಶಿಕ್ಷಕ
ಫಣಿಧರಸನ್ನುತ ರಾಮ ಹರೇ|
ಘನ ವರ್ಣಾಂಗ ಸುಮನಸರೊಡೆಯ
ಶ್ರೀವನಜಾಸನಪಿತ ಕೃಷ್ಣ ಹರೇ ||೨||
ತಾಟಕೆ ಖರ ಮಧುಕೈಟಭಾರಿ
ಪಾಪಾಟವಿ ಸುರಮುಖ ರಾಮ ಹರೇ|
ಆಟದಿ ಫಣಿ ಮ್ಯಾಲ್ನಾಟ್ಯವನಾಡಿದ
ಖೇಟವಾಹ ಶ್ರೀ ಕೃಷ್ಣ ಹರೇ ||೩||
ಶಿಲೆಯ ಪಾದ ರಜದಲಿ ಸ್ತ್ರೀ ಮಾಡಿದ
ಸುಲಲಿತ ಮಹಿಮ ಶ್ರೀರಾಮ ಹರೇ|
ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ
ಚೆಲುವೆ ಮಾಡಿದ ಶ್ರೀಕೃಷ್ಣ ಹರೇ ||೪||
ಹರಧನು ಭಂಗಿಸಿ ಹರುಷದಿ
ಜಾನ್ಹಕಿ ಕರವಪಿಡಿದ ಶ್ರೀರಾಮ ಹರೇ|
ಸಿರಿ ರುಕ್ಮಿಣಿಯನು ತ್ವರದಲ್ಲೇ ವರಿಸಿದ
ಕರುಣಾಕರ ಶ್ರೀಕೃಷ್ಣ ಹರೇ ||೫||
ಜನಕಪೇಳೆ ಲಕ್ಷ್ಮಣ ಸೀತಾಸಹ
ವನಕೆ ತೆರಳಿದ ಶ್ರೀರಾಮ ಹರೇ|
ವನಕೆ ಪೋಗಿ ತನ್ನನುಗರೊಡನೆ
ಗೋವನು ಪಾಲಿಪ ಶ್ರೀಕೃಷ್ಣ ಹರೇ ||೬||
ಚದುರೆ ಶಬರಿಯಿತ್ತ ಬದರಿಯ ಫಲವನ್ನು
ಮುದದಿ ಸೇವಿಸಿದ ಶ್ರೀರಾಮ ಹರೇ|
ವಿದುರನ ಕ್ಷೀರಕೆ ಒದಗಿ ಪೋದ
ನಮ್ಮ ಪದುಮನಾಭ ಶ್ರೀಕೃಷ್ಣ ಹರೇ ||೭||
ಸೇವಿತ ಹನುಮ ಸುಗ್ರೀವನಸಖ
ಜಗತ್ಪಾವನ ಪರತರ ರಾಮ ಹರೇ|
ದೇವಕಿ ವಸುದೇವರ ಸೆರೆಯ ಬಿಡಿಸಿದ
ದೇವ ದೇವ ಶ್ರೀಕೃಷ್ಣ ಹರೇ ||೮||
ಧರೆಯೊಳಜ್ಞ ಜನರನು ಮೋಹಿಪುದಕೆ
ಹರನ ಪೂಜಿಸಿದ ಶ್ರೀರಾಮ ಹರೇ|
ಹರನ ಪ್ರಾರ್ಥಿಸಿ ವರವನ್ನು ಪಡೆದ
ಚರಿತ್ರೆ ಅಗಾಧವು ಶ್ರೀಕೃಷ್ಣ ಹರೇ ||೯||
ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ|
ಗಿರಿಯನ್ನು ತನ್ನ ಕಿರುಬೆರಳಲೆತ್ತಿ
ಗೋಪರನು ಕಾಯ್ದ ಶ್ರೀಕೃಷ್ಣ ಹರೇ ||೧೦||
ಖಂಡಿಸಿ ದಶಶಿರ ಚಂಡಾಡಿದ
ಕೋದಂಡಪಾಣಿ ಶ್ರೀರಾಮ ಹರೇ|
ಪಾಂಡುತನಯರಿಂ ಚಂಡಕೌರವರ
ದಿಂಡುಗೆಡಹಿದ ಶ್ರೀಕೃಷ್ಣ ಹರೇ ||೧೧||
ತವಕದಲಯೋಧ್ಯಪುರಕೈದಿದ
ತನ್ಯುವತಿಯೊಡನೆ ಶ್ರೀರಾಮ ಹರೇ|
ರವಿಸುತ ತನಯಗೆ ಪಟ್ಟವ ಕಟ್ಟಿದ
ಭವತಾರಕ ಶ್ರೀಕೃಷ್ಣ ಹರೇ ||೧೨||
ಭರತನು ಪ್ರಾರ್ಥಿಸಲ್ ಅರಸತ್ವವ
ಸ್ವೀಕರಿಸಿದ ತ್ವರದಲ್ಲಿ ರಾಮ ಹರೇ|
ವರ ಧರ್ಮಾಧ್ಯರ ಧರೆಯೊಳು ಮೆರೆಸಿದ
ಪರಮ ಕೃಪಾಕರ ಕೃಷ್ಣ ಹರೇ ||೧೩||
ಅತುಳ ಮಹಿಮ ಸದ್ಯತಿಗಳ ಹೃದಯದಿ
ಸತತ ವಿರಾಜಿಪ ರಾಮ ಹರೇ|
ಸಿತವಾಹನ ಸಾರಥಿ ಎನಿಸಿದ ಸುರತತಿ
ಪೂಜಿತಪದ ಕೃಷ್ಣ ಹರೇ ||೧೪||
ರಾಮ ರಾಮನೆಂದು ನೇಮದಿ ಭಜಿಪರ
ಕಾಮಿತ ಫಲದ ಶ್ರೀರಾಮ ಹರೇ|
ಪ್ರೇಮದಿ ಭಕ್ತರ ಪಾಲಿಪ
ಶ್ರೀವರದೇಶ ವಿಠಲ ಶ್ರೀಕೃಷ್ಣ ಹರೇ ||೧೫||
rAma harE jai jai rAma harE
kRuShNa harE jai jai kRuShNa harE
rAma harE harE rAma harE
kRuShNa harE harE kRuShNa harE|
kausalyaja ravivaMSOdBava
surasaMsEvitApada rAma harE|
kaMsAdyasurara dhvaMsagaida
yaduvaMSOdBava SrIkRuShNa harE ||1||
munimakarakShaka dhanujaraSikShaka
PaNidharasannuta rAma harE|
Gana varNAMga sumanasaroDeya
SrIvanajAsanapita kRuShNa harE ||2||
tATake Kara madhukaiTaBAri
pApATavi suramuKa rAma harE|
ATadi PaNi myAlnATyavanADida
KETavAha SrI kRuShNa harE ||3||
Sileya pAda rajadali strI mADida
sulalita mahima SrIrAma harE|
balu vakrAgidda abaleya kShaNadali
cheluve mADida SrIkRuShNa harE ||4||
haradhanu BaMgisi haruShadi
jAnhaki karavapiDida SrIrAma harE|
siri rukmiNiyanu tvaradallE varisida
karuNAkara SrIkRuShNa harE ||5||
janakapELe lakShmaNa sItAsaha
vanake teraLida SrIrAma harE|
vanake pOgi tannanugaroDane
gOvanu pAlipa SrIkRuShNa harE ||6||
chadure shabariyitta badariya Palavannu
mudadi sEvisida SrIrAma harE|
vidurana kShIrake odagi pOda
namma padumanABa SrIkRuShNa harE ||7||
sEvita hanuma sugrIvanasaKa
jagatpAvana paratara rAma harE|
dEvaki vasudEvara sereya biDisida
dEva dEva SrIkRuShNa harE ||8||
dhareyoLaj~ja janaranu mOhipudake
harana pUjisida SrIrAma harE|
harana prArthisi varavannu paDeda
charitre agAdhavu SrIkRuShNa harE ||9||
girigaLiMda varaSaradhi baMdhisida
parama samartha SrIrAma harE|
giriyannu tanna kiruberaLaletti
gOparanu kAyda SrIkRuShNa harE ||10||
KaMDisi daSaSira chaMDADida
kOdaMDapANi SrIrAma harE|
pAMDutanayariM caMDakauravara
diMDugeDahida SrIkRuShNa harE ||11||
tavakadalayOdhyapurakaidida
tanyuvatiyoDane SrIrAma harE|
ravisuta tanayage paTTava kaTTida
bhavatAraka SrIkRuShNa harE ||12||
Baratanu prArthisal arasatvava
svIkarisida tvaradalli rAma harE|
vara dharmAdhyara dhareyoLu meresida
parama kRupAkara kRuShNa harE ||13||
atuLa mahima sadyatigaLa hRudayadi
satata virAjipa rAma harE|
sitavAhana sArathi enisida suratati
pUjitapada kRuShNa harE ||14||
rAma rAmaneMdu nEmadi Bajipara
kAmita Palada SrIrAma harE|
prEmadi Baktara pAlipa
SrIvaradESa viThala SrIkRuShNa harE ||15||