ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಹರಿಪಾದ ಸ್ತೋತ್ರ ಸುಳಾದಿ | ವಾದಿರಾಜರು | Sri Haripaada Stotra Suladi | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರೀ ಹರಿಪಾದ ಸ್ತೋತ್ರ ಸುಳಾದಿ

ಹರಿಪಾದ ನೆನೆವಂಗೆ ಅರಿಗಳ ಭಯವಿಲ್ಲ
ಹರಿಪಾದ ನೆನೆವಂಗೆ ದುರಿತ ಭಯವಿಲ್ಲ
ಹರಿಪಾದ ನೆನೆವಂಗೆ ನರಕದ ಭಯವಿಲ್ಲ
ಹರಿಪಾದ ನೆನೆವಂಗೆ ಮಾಯದ ಭಯವಿಲ್ಲ
ಹರಿಪಾದ ನೆನೆವಂಗೆ ಭವದ ಭಯವಿಲ್ಲ
ಹರಿಪಾದ ನೆನೆವಂಗೆ ವಿಷಯ ಭಯವಿಲ್ಲ
ಹರಿಪಾದ ನೆನೆವಂಗೆ ಜನನ ಭಯವಿಲ್ಲ
ಹರಿಪಾದ ನೆನೆವಂಗೆ ಮರಣದ ಭಯವಿಲ್ಲ
ಬರಿದೆ ಮಾತೇ ಅಲ್ಲ ಸಿರಿಹಯವದನನು 
ಕರೆದು ಮುಕ್ತಿಯನ್ನಿತ್ತು ಅನುಗಾಲ ಸಲಹುವ || ೧ ||

ಆವ ಧ್ರುವನ ನೋಡಿ ಸುರಲೋಕದಲಿ
ಭೂವಿಭೀಷಣನ ನೋಡಿರಯ್ಯ
ಅವನಿ ಕೆಳಗೆ ಬಲಿಯುತ್ಸವ ನೋಡಿ
ಈ ಹಯವದನನ ಭಜಕರೇ ಸಾಕ್ಷಿ || ೨ ||

ಹತ್ತಾವತಾರದಿ ಭಕುತರ ಭಯವೆಲ್ಲ
ಕಿತ್ತಿ ಭಕುತರ ಕಾಯ್ದ ಕಥೆಯ ಕೇಳಿರಯ್ಯ
ಮತ್ತಾರು ತೋರಿರೈ ಭೃತ್ಯರೆಂಬಸುಗಳಿಗೆ
ಹೆತ್ತ ತಾಯಿಯೆಂಬ ವಾರುತೆ ಕೇಳಯ್ಯ
ಕರ್ತೃ ಹಯವದನನು ಭವವೆಂಬ ಕತ್ತಲೆ
ಬತ್ತಿಪ ರವಿಯೆಂದು ಚಿತ್ತದಲ್ಲಿ ನೆರೆ ನಂಬು || ೩ ||

ದ್ರೌಪದಿ ಭಯವ ಪರಿಹರಿಸಿದರಾರೈ
ಆ ಪರೀಕ್ಷಿತನ ರಕ್ಷಿಸಿದವನಾರೈ
ತಾಪಸರೊಡೆಯ ಶ್ರೀಪತಿ ಹಯವದನನು
ತಾಪಂಗಳನು ಕಳೆದು ತರ್ಕೈಸಿಕೊಂಬ || ೪ ||

ಕರಿಯ ಕಾಯ್ದವನ ಪಾದವ ನಂಬು
ಗಿರಿಯ ಎತ್ತಿದವನ ಪಾದವ ನಂಬು
ಉರಿಯ ನುಂಗಿದವನ ಪಾದವ ನಂಬು
ಪುರಹರನುಳುಪಿದವನ ನೆರೆನಂಬು ಕರಿ
ಸಿರಿ ಹಯವದನನ ಶರಣರಿಗೆ ಭಯವಿಲ್ಲ || ೫ ||

ಜತೆ

ಶ್ರೀರಮಣ ಹಯವದನನ ನಂಬಿದ ಸಾರ 
ಹೃದಯರ ಚರಣ ಸೇವೆ ಮಾಳ್ಪುದೇ ಸಾಕ್ಷಿ || ೬ ||

shrI haripaada stOtra suLaadi

haripaada nenevaMge arigaLa bhayavilla
haripaada nenevaMge durita bhayavilla
haripaada nenevaMge narakada bhayavilla
haripaada nenevaMge maayada bhayavilla
haripaada nenevaMge bhavada bhayavilla
haripaada nenevaMge viShaya bhayavilla
haripaada nenevaMge janana bhayavilla
haripaada nenevaMge maraNada bhayavilla
baride maatE alla sirihayavadananu 
karedu muktiyannittu anugaala salahuva || 1 ||

Ava dhruvana nODi suralOkadali
bhUvibhIShaNana nODirayya
avani keLage baliyutsava nODi
I hayavadanana bhajakarE saakShi || 2 ||

hattaavataaradi bhakutara bhayavella
kitti bhakutara kaayda katheya kELirayya
mattaaru tOrirai bhRutyareMbasugaLige
hetta taayiyeMba vaarute kELayya
kartRu hayavadananu bhavaveMba kattale
battipa raviyeMdu cittadalli nere naMbu || 3 ||

droupadi bhayava pariharisidaraarai
A parIkShitana rakShisidavanaarai
taapasaroDeya shrIpati hayavadananu
taapaMgaLanu kaLedu tarkaisikoMba || 4 ||

kariya kaaydavana paadava naMbu
giriya ettidavana paadava naMbu
uriya nuMgidavana paadava naMbu
puraharanuLupidavana nerenaMbu kari
siri hayavadanana sharaNarige bhayavilla || 5 ||

jate

shrIramaNa hayavadanana naMbida saara 
hRudayara charaNa sEve maaLpudE saakShi || 6 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru