ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಂಪಾಪುರ ನಿವಾಸ | ಜಗನ್ನಾಥ ವಿಠಲ | Pampapura Nivasa | Jagannatha Vithala


 

ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha dasaru (Jagannatha vittala)


ಪಂಪಾಪುರ ನಿವಾಸ | ಪ್ರಮಥರೀಶ
ತ್ವಂಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ||ಪ||

ಕೈಲಾಸ ಸದ್ಮಗಜ ಚೈಲ ಭೂಷಣನೆ 
ಮನೋ ಮೈಲಿಗೆಯ ಪರಿಹರಿಸೋ ನೀಲಕಂಠ ||
ಕಾಲಕಾಲಗಳಲ್ಲಿ ಕಾಲನಿಯಾಮಕನ 
ಲೀಲೆಗಳ ಸ್ತುತಿಪ ಸುಖ ನಾಲಿಗೆಗೆ ಕೊಡು ಸತತ ||೧||

ಪಾರ್ವತಿ ರಮಣನೆ ನೀ ಮೋಹ ಶಾಸ್ತ್ರವ 
ರಚಿಸಿ ಶಾರ್ವರಿಚರರ ಮೋಹಿಸಿದೆ ಹಿಂದೆ ||
ದೂರ್ವಾಸ ಶುಕ ಮುನಿಯೇ ಜೈಗೀಶ ರೂಪಿನಲಿ |
ಈರ್ವಗೆಯ ಪರಿಚರ್ಯದಲಿ ಹರಿಯ ಮೆಚ್ಚಿಸಿದೆ ||೨||

ಸುರನದೀ ಧರ ನಿನ್ನ ಚರಿತೆಗಳ ವರ್ಣಿಸಲು |
ಸುರಪಮುಖ ಸುಮನಸದ್ಯರಿಗಸದಳಾ ||
ಸ್ಮರನ ಪಿತ ಶ್ರೀ ಜಗನ್ನಾಥ ವಿಠಲನ ಸಂ
ಸ್ಮರಣೆಯನು ಕೊಟ್ಟು ಉದ್ಧರಿಸು ಭವದಿಂದಾ ||೩||

paMpApura nivAsa | pramatharISa
tvaMpAhi pAhi tripurAri trinEtra ||pa||

kailAsa sadmagaja caila bhooShaNane 
manO mailigeya pariharisO nIlakaMTha ||
kAlakAlagaLalli kAlaniyAmakana 
lIlegaLa stutipa suKa nAligege koDu satata ||1||

pArvati ramaNane nI mOha SAstrava 
racisi SArvaricarara mOhiside hiMde ||
dUrvAsa Suka muniyE jaigISa rUpinali |
Irvageya paricaryadali hariya mecciside ||2||

suranadIdhara ninna caritegaLa varNisalu |
surapamuKa sumanasadyarigasadaLA ||
smarana pita SrI jagannAtha viThalana saM
smaraNeyanu koTTu uddharisu BavadiMdA ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru