ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಂಗ ನಿನ್ನ ಕೊಂಡಾಡುವ | ಜಗನ್ನಾಥವಿಠಲ | Ranga Ninna Kondaduva | Jagannatha Vithala


 

ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha dasaru (Jagannatha vittala)


ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ 
ಸಂಗ ಸುಖವನಿತ್ತು ಕಾಯೋ ಕರುಣಾ ಸಾಗರ  |ಪಾಂಡು|  ||ಪ||

ಅರಿಯರೊ ನೀನಲ್ಲದೆ ಬೇರನ್ಯ ದೇವರ ಮರೆಯರೋ |     
ನೀ ಮಾಡಿದ ಅನಿಮಿತ್ತುಪಕಾರ |ಪಾಂಡು|  || ೧ ||

ತೊರೆಯರೋ ನಿನ್ನಂಘ್ರಿ ಸೇವ ಪ್ರತಿವಾಸರ  
ಅರಿಯರೋ ಪರತತ್ವವಲ್ಲದ ಇತರ ವಿಚಾರ |ಪಾಂಡು|  || ೨ ||

ಮೂಕಬಧಿರರಂತಿಪ್ಪರೋನೋಳ್ಪ ಜನಕೆ | 
ಕಾಕುಯುಕುತಿಗಳನ್ನವರು ತಾರರೋ ಮನಕೆ |ಪಾಂಡು|  || ೩ ||

ಸ್ವೀಕರಿಸರೋ ದೇವ ಅನರ್ಪಿತ ಒಂದು ಕಾಲಕ್ಕೆ |    
ಆ ಕೈವಲ್ಯದ ಭೋಗ ಸುಖಗಳು ಅವರಿಗೆ ಬೇಕೇ |ಪಾಂಡು|  || ೪ ||   

ಜಯಾಜಯಲಾಭಾಲಾಭ ಮಾನಾಪಮಾನ | 
ಭಯಾಭಯ ಸುಖದುಃಖ ಲೋಷ್ಠ ಕಾಂಚನ |ಪಾಂಡು|  || ೫ || 

ಪ್ರಿಯಾಪ್ರಿಯ ನಿಂದಾಸ್ತುತಿಗಳೆಲ್ಲ ಅನುದಿನ |
ಶ್ರೀಯರಸನ ಚಿಂತಿಸುವರೋ ನಿನ್ನ ಅಧೀನ |ಪಾಂಡು|  || ೬ ||  

ಈಶಿತವ್ಯರೆಂಬೋರೆ ಏಕಾಂತ ಭಕ್ತರು |  
ದೇಶ ಕಾಲೋಚಿತ ಧರ್ಮ ಕರ್ಮಾಸಕ್ತರು |ಪಾಂಡು|  || ೭ || 

ಆಶಾಕ್ರೋಧಲೋಭ ಮೋಹಪಾಶಮುಕ್ತರು |
ಈ ಸುಜನರೆಲ್ಲಾ ಶಾಪಾನುಗ್ರಹಶಕ್ತರು |ಪಾಂಡು|  || ೮ ||  

ಕಂಡ ಕಂಡಲ್ಲೆಲ್ಲಾ ವಿಶ್ವರೂಪಕಾಂಬರೊ
ಉಂಡು ಉಣಿಸಿದ್ದೆಲ್ಲಾ ನಿನ್ನ ಯಜ್ಞವೆಂಬರೊ |ಪಾಂಡು|  || ೯ || 

ಬಂಡುಣಿಯಂದದಿ ನಾಮಾಮೃತವ ಸವಿವರೊ |
ಹೆಂಡಿರು ಮಕ್ಕಳು ನಿನ್ನ ತೊಂಡರೆಂಬರೋ |ಪಾಂಡು|  || ೧೦ ||  

ಬಿಡರು ತಮ್ಮ ಸ್ವಧರ್ಮಗಳೇನು ಬಂದರು |
ಬಡರು ದೈನ್ಯ ಒಬ್ಬರಿಗು ಲೋಕವಂದ್ಯರು |ಪಾಂಡು|  || ೧೧ ||  

ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು |
ಕೊಡುವರು ಬೇಡಿದಿಷ್ಟಾರ್ಥ ನಿತ್ಯಾನಂದರು |ಪಾಂಡು|  || ೧೨ || 

ನಗುವರೋ ರೋಧಿಸುವರೋ ನಾಟ್ಯವಾಡುವರೋ |
ಬಗೆಯರೋ ಬಡತನ ಭಾಗ್ಯ ಭಾಗವತರು |ಪಾಂಡು|  || ೧೩ || 

ತೆಗೆಯರೋ ನಿನ್ನಲ್ಲಿ ಮನವನೊಮ್ಮೆಯಾದರೋ |   
ಜಗನ್ನಾಥವಿಠಲ ನಿನ್ನವರೇನು ಧನ್ಯರೋ |ಪಾಂಡು|  || ೧೪ || 

raMga ninna koMDADuva maMgaLAtmara 
saMga suKavanittu kAyO karuNA sAgara |pAMDu| ||pa||
 
ariyaro nInallade bEranya dEvara mareyarO | 
nI mADida animittupakAra |pAMDu| ||1|| 
 
toreyarO ninnaMGri sEve prativAsara 
ariyarO paratatvavallada itara vicAra |pAMDu| ||2|| 
 
mUkabadhiraraMtipparOnOLpa janake | 
kAkuyukutigaLannavaru tArarO manake |pAMDu| ||3|| 
 
svIkarisarO dEva anarpita oMdu kAlakke | 
A kaivalyada BOga suKagaLu Avarige bEkE |pAMDu| ||4||
 
jayAjayalABAlABa mAnApamAna | 
BayABaya suKaduHKa lOShTha kAMcana |pAMDu| ||5|| 
 
priyApriya niMdAstutigaLella anudina | 
SrIyarasana ciMtisuvarO ninna adhIna |pAMDu| ||6||
 
ISitavyareMbore EkAMta Baktaru 
dESa kAlOcita dharma karmAsaktaru |pAMDu|  ||7|| 
 
ASAkrOdhalOBa mOhapASamuktaru | 
I sujanarElla SApAnugrahaSaktaru |pAMDu|  ||8|| 
 
kaMDakaMDallellA viSvarUpakAMbaro 
uMDu uNisiddellA ninna yaj~javeMbaro |pAMDu|  ||9|| 
 
baMDuNiyaMdadi nAmAmRutava savivaro | 
heMDiru makkaLu ninna toMDareMbarO |pAMDu| ||10||

biDaru tamma svadharmagaLEnu baMdaru | 
baDaru dainya obbarigu lOkavaMdyaru |pAMDu| ||11|| 
 
piDiyaru ninna dvEShigaLiMdEnu baMdaru | 
koDuvaru bEDidiShTArtha nityAnaMdaru |pAMDu| ||12|| 
 
naguvarO rOdhisuvarO nATyavADuvarO | 
bageyarO baDatana BAgya BAgavataru |pAMDu| ||13|| 
 
tegeyarO ninnalli manavanommeyAdarO | 
jagannAthaviThala ninnavarEnu dhanyarO |pAMDu| ||14||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru