ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕರುಣಿಸಿ ಕೇಳು ಕಂದನ ಮಾತ | ಹಯವದನ | Karunisi Kelu | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)

Kruti:Sri Vadirajaru (Hayavadana)



ಕರುಣಿಸಿ ಕೇಳು ಕಂದನ ಮಾತ
ಗರುಡವಾಹನನೆ ಗಂಗೆಯ ಪೆತ್ತ ಹರಿಯೆ ||ಪ||

ಇತ್ತ ಬಾರೆಂಬುವರಿಲ್ಲ ಇರವ ಕೇಳುವರಿಲ್ಲ
ಹತ್ತಿಲಿ ಕುಳ್ಳಿರು ಎಂಬ ದಾತರಿಲ್ಲ
ತತ್ತರಗೊಳ್ಳುತಲಿದೆ ತಾವರೆಯೆಲೆಯೊಳನೀರಿನಂತೆ
ಹತ್ತು ನೂರಾರು ನಾಮವುಳ್ಳ ಶ್ರೀಹರಿಯೆ ನೀ ಕೇಳೊ ||೧||

ಇಂದು ಬಂಧನವಿಲ್ಲ ಇದ್ದವ ಕೇಳುವುದಿಲ್ಲ
ಒಂದು ಸುತ್ತಿಗೆ ಬಟ್ಟೆಯಾದರೂ ಇಲ್ಲ ಈ
ಬೆಂದೊಡಲಿಗೆ ಒಬ್ಬ ಅಯ್ಯೋ ಎಂಬುವನಿಲ್ಲ
ಬಿಂದುಮಾತ್ರದಲ್ಲಿ ಸುಖವ ಕಾಣೆ ಹರಿಯೆ ||೨||

ಎಲ್ಲಿಯೂ ಧಾರಣೆಗೊಂದು ನೆರೆಳನು ಕಾಣೆ
ಅಲ್ಲವತಿಂದಿಲಿಯಂತೆ ಬಳಲುತಿದ್ದೆ
ಫುಲ್ಲಲೋಚನ ಪೂರ್ಣ ಹಯವದನ
ಸಲ್ಲುವ ನಾಣ್ಯವ ಮಾಡಿ ಸಲಹೋ ಎನ್ನ ಹರಿಯೆ ||೩|| 

karuNisi kELu kaMdana maata
garuDavaahanane gaMgeya petta hariye ||pa||

itta baareMbuvarilla irava kELuvarilla
hattili kuLLiru eMba daatarilla
tattaragoLLutalide taavareyeleyoLanIrinaMte
hattu nUrAru nAmavuLLa shrIhariye nI kELo ||1||

iMdu baMdhanavilla iddava kELuvudilla
oMdu suttige baTTeyAdarU illa I
beMdoDalige obba ayyO eMbuvanilla
biMdumAtradalli sukhava kaaNe hariye ||2||

elliyU dhaaraNegoMdu nereLanu kaaNe
allavatiMdiliyaMte baLalutidde
PullalOchana pUrNa hayavadana
salluva naaNyava maaDi salahO enna hariye ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru