ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸಾಗಿ ಬಾ ಜಗದೇಕ ದೊರೆಯೇ | ಶ್ರೀ ಪ್ರಸನ್ನ ವೇಂಕಟ | Saagi Baa Jagadeka Doreye | Sri Prasanna Venkata


 

ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು 
Kruti: Sri Prasanna Venkata Dasaru


ಸಾಗಿ ಬಾ ಜಗದೇಕ ದೊರೆಯೇ 
ಯೋಗಾ ನರಸಿಂಹ ಪ್ರಭುವೇ || ಪ ||
ಯೋಗಿಗಳರಸನೆ ಭಾಗವತ ಜನಸಾಗರ 
ನಿನ್ನಾಗಮನ ಕಾಯುತಿದೆ || ಅಪ ||

ಭಸಿತ ಚಂದನ ತಿಲಕಾಲಂಕೃತ 
ಶಶಿಸೂರ್ಯಾಭರಣ ತೋರಣ
ಭೂಸುರರೆಲ್ಲ ಸುಭಾವ ಸ್ವರದಲಿ 
ಭಾಸಿಸುತಿರೆ ನಿಮ್ಮ ನಾಮ ವಿಶೇಷಣ 
ವಾಸುಕಿಶಯನ ವಿಶೇಷ ರಥವನೇರಿ 
ದಾಸವರ್ಗದಭಿಲಾಷೆ ನೀಡು ಬಾ || ೧ ||

ಪ್ರತ್ಯಹಂ ಚರ ಪ್ರಪತ್ತಿ ಭಕುತಿಪಥ 
ಸತ್ಯಂವದ ಧರ್ಮಾಚರಣೆ ಸುಖ 
ನಿತ್ಯ ನಿರಂತರ ಮುಕುತಿ ಜ್ಞಾನವ 
ಭೃತ್ಯರಿಗಿತ್ತು ಸಲಹೋ ಶ್ರೀನಿಧಿ
ಸತ್ಯ ದೇವಪಿತ ಸರ್ವೋತ್ತಮ ನೀ 
ಪ್ರತ್ಯಕ್ಷವಾಗಿ ರಥೋತ್ಸವದಲ್ಲಿ || ೨ ||

ಸಾಸಿರ ನಾಮಗಳ ಘೋಷಣೆ ಕೂಗುತ
ಲೇಸು ತಾಳೆ ಮದ್ದಾಳೆ ಕಂಸಾಳೆ ಮೊಳಗಿರೆ
ಅಸುರನ ವಧಿಸಿ ಪ್ರಹ್ಲಾದನ ಸಲಹಿದ
ಶೇಷಶಯನ ನಿನ್ನಾಸರೆ ನೀಡು ಬಾ
ದೋಷ ವಿವರ್ಜಿತ ದಾಸರ ರಕ್ಷಕ
ಶ್ರೀಶ್ರೀಪ್ರಸನ್ನ ವೆಂಕಟ ನಾಯಕ || ೩ ||

saagi baa jagadEka doreyE 
yOgaa narasiMha prabhuvE || pa ||
yOgigaLarasane bhaagavata janasaagara 
ninnaagamana kaayutide || apa ||

bhasita caMdana tilakaalaMkRuta 
shashisUryaabharaNa tOraNa
bhUsurarella subhaava svaradali 
bhaasisutire nimma naama vishEShaNa 
vaasukishayana vishESha rathavanEri 
daasavargadabhilaaShe nIDu baa || 1 ||

pratyahaM cara prapatti bhakutipatha 
satyaMvada dharmaacaraNe suKa 
nitya niraMtara mukuti j~jaanava 
bhRutyarigittu salahO shrInidhi
satya dEvapita sarvOttama nI 
pratyakShavaagi rathOtsavadalli || 2 ||

saasira naamagaLa ghOShaNe kUguta
lEsu taaLe maddaaLe kaMsaaLe moLagire
asurana vadhisi prahlaadana salahida
shEShashayana ninnaasare nIDu baa
dOSha vivarjita daasara rakShaka
shrIshrIprasanna veMkaTa naayaka || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru