ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಚರಣ ಕಮಲವನು ನೆನೆವೆ | ಹಯವದನ | Charana Kamalavanu Neneve | Vadirajaru


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)

Kruti:Sri Vadirajaru (Hayavadana)



ಚರಣ ಕಮಲವನು ನೆನೆವೆ ನಾ ನಿನ್ನ || ಪ ||

ಚರಣ ಕಮಲವನು ನೆನೆವೆ ನಾ 
ದುರಿತ ರಾಶಿಗಳ ಸಂಹರಿಪನ || ಅ.ಪ ||

ಶ್ರುತಿಯನುದ್ಧರಿಸಿದುದಾರನ 
ಸಿಂಧು ಮಥನಕೊದಗಿದ ಗಂಭೀರನ
ಕ್ಷಿತಿಯನ್ನೆತ್ತಿದ ಬಲುಧೀರನ 
ಶಿಶು ಸ್ತುತಿಸೆ ಕಂಭದಿ ಬಂದ ವೀರನ || ೧ ||   

ಇಂದ್ರನ ಧಾರೆಯ ನಿಲಿಸಿದನ್ನ 
ತನ್ನ ತಂದೆಯ ಮಾತು ಸಲಿಸಿದನ್ನ
ಕಂದರ ದಶನ ಸೋಲಿಸಿದನ್ನ 
ವ್ರಜ ದಿಂದುಮುಖಿಯರ ಪಾಲಿಸಿದನ್ನ || ೨ ||

ವಧುಗಳ ವ್ರತವ ಖಂಡಿಸಿದನ್ನ 
ದುಷ್ಟರುದಿಸಲು ತುದಿಯ ತುಂಡಿಸಿದನ್ನ
ಇದಿರಾದ ಖಳರ ಖಂಡಿಸಿದನ್ನ 
ಹಯವದನ ಪೆಸರ ಕೊಂಡುದಿಸಿದನ್ನ || ೩ ||  

caraNa kamalavanu neneve nA ninna ||pa||

caraNa kamalavanu neneve nA
durita rASigaLa saMharipana ||apa||

SrutiyanuddharisidudArana 
siMdhu mathanakodagida gaMBIrana
kShitiyannettida baludhIrana 
SiSu stutise kaMBadi baMda vIrana ||1||

iMdrana dhAreya nilisidanna 
tanna taMdeya mAtu salisidanna
kaMdara daSana sOlisidanna 
vraja diMdumuKiyara pAlisidanna ||2||

vadhugaLa vratava KaMDisidanna 
duShTarudisalu tudiya tuMDisidanna
idirAda KaLara KaMDisidanna 
hayavadana pesara koMDudisidanna ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru