ದೇವಿ ನಮ್ಮ ದ್ಯಾವರು ಬಂದರು ಬನ್ನಿರೆ ನೋಡ ಬನ್ನಿರೆ |ಪ|
ಕೆಂಗಣ್ಣ ಮೀನನಾಗಿ ನಮ್ಮ ರಂಗ| ಗುಂಗಾಡಿ ಸೋಮನ ಕೊಂದಾನ್ಮ್ಯ|
ಗುಂಗಾಡಿ ಸೋಮನ ಕೊಂದು ವೇದವ ಬಂಗಾರದೊಡಲಿಗೆತ್ತಾನ್ಮ್ಯ |೧|
ದೊಡ್ಡ ಮಡುವಿನೊಳಗೆ ನಮ್ಮ ರಂಗ| ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ|
ಗುಡ್ಡವ ಹೊತ್ತುಕೊಂಡು ನಿಂತು ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ |೨|
ಚೆನ್ನ ಕಾಡಿನ ಹಂದಿಯಾಗಿ ನಮ್ಮ ರಂಗ| ಚಿನ್ನದ ಕಣ್ಣನ ಕೊಂದಾನ್ಮ್ಯ|
ಚಿನ್ನದ ಕಣ್ಣನ ಕೊಂದು ಭೂಮಿಯ ವನಜ ಸಂಭವಗಿತ್ತಾನ್ಮ್ಯ |೩|
ಸಿಟ್ಟಿಲಿ ಸಿಂಹನಾಗಿ ನಮ್ಮ ರಂಗ ಹೊಟ್ಟೆಯ ಕರುಳ ಬಗೆದಾನ್ಮ್ಯ|
ಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯ |೪|
ಹುಡುಗ ಹಾರುವನಾಗಿ ನಮ್ಮ ರಂಗ| ಬೆಡಗಿಲಿ ಮುಗಿಲಿಗೆ ಬೆಳೆದಾನ್ಮ್ಯ|
ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು ಅಡಿಯಿಂದ ಪಾತಾಳ ಕೊದ್ದಾನ್ಮ್ಯ |೫|
ತಾಯ ಮಾತನು ಕೇಳಿ ಸಾಸಿರ ತೋಳಿನ ಆವಿನ ಕಳ್ಳನ ಕೊಂದಾನ್ಮ್ಯ|
ಆವಿನ ಕಳ್ಳನ ಕೊಂದು ಭೂಮಿಯ ಅವನೀ ಸುರರಿಗೆ ಇತ್ತಾನ್ಮ್ಯ |೬|
ಪಿಂಗಳ ಕಣ್ಣಿನ ಮಂಗಗಳಾ ಕೂಡಿ ಛಂಗನೆ ಲಂಕೆಗೆ ಪೋದಾನ್ಮ್ಯ|
ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ ಹೆಂಗಸುಗಳ್ಳನ ಕೊಂದಾನ್ಮ್ಯ |೭|
ಕರಿಯ ಹೊಳೆಯಲ್ಲಿ ತುರುಗಳ ಕಾಯುತ ಉರಗನ ಮಡುವ ಧುಮುಕಾನ್ಮ್ಯ|
ಉರಗನ ಹೆಡೆ ಮೇಲೆ ಹಾರಾರಿ ಕುಣಿವಾಗ ಯಾರ‍್ಯಾರಿಗ್ವರವ ಕೊಟ್ಟಾನ್ಮ್ಯ |೮|
ಬಿಂಕದ ಗೋವಳನಾಗಿ ನಮ್ಮ ರಂಗ ಡೊಂಕಾದ ಮುದುಕಿಯ ಕೂಡಾನ್ಮ್ಯ|
ಡೊಂಕಾದ ಮುದುಕಿಯ ಕೂಡಿ ಮಾವನ ಬಿಂಕವನ್ನೆಲ್ಲಾ ಮುರಿದಾನ್ಮ್ಯ |೯|
ಭಂಡನಂದದಿ ಪುಂಡರೀಕಾಕ್ಷನು ಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯ|
ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ ಹೆಂಡಿರನೆಲ್ಲಾ ಕೆಡಿಸಾನ್ಮ್ಯ |೧ಂ|
ಚೆಲುವ ಹೆಂಡತಿಯ ಕುದುರೆಯ ಮಾಡಿ ಒಳ್ಳೆಯ ರಾವುತನಾದಾನ್ಮ್ಯ|
ಒಳ್ಳೆಯ ರಾವುತನಾಗಿ ಮ್ಲೇಚ್ಛರ ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ಮ್ಯ |೧೧|
ಡೊಳ್ಳಿನ ಮೇಲ್ಕಯ್ಯ ಭರಮಪ್ಪ ಹಾಕ್ಯಾನು| ತಾಳವ ಶಿವನಪ್ಪ ತಟ್ಟಾನ್ಮ್ಯ|
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು| ಚೆಲುವ ಕನಕಪ್ಪ ಕುಣಿದಾನ್ಮ್ಯ |೧೨|
dEvi namma dyAvaru baMdaru bannire nODa bannire |pa|
keMgaNNa mInanAgi namma raMga| guMgADi sOmana koMdAnmya|
guMgADi sOmana koMdu vEdava baMgAradoDaligettAnmya |1|
doDDa maDuvinoLage namma raMga| guDDava hottukoMDu niMtAnmya|
guDDava hottukoMDu niMtu surarannu doDDavarannAgi mADAnmya |2|
cenna kADina haMdiyAgi namma raMga| cinnada kaNNana koMdAnmya|
cinnada kaNNana koMdu BUmiya vanaja saMBavagittAnmya |3|
siTTili siMhanAgi namma raMga hoTTeya karuLa bagedAnmya|
hoTTeya karuLa hArava mADi puTTage varava koTTAnmya |4|
huDuga hAruvanAgi namma raMga| beDagili mugilige beLedAnmya|
beDagili mugilige beLedu baliyannu aDiyiMda pAtALa koddAnmya |5|
tAya mAtanu kELi sAsira tOLina Avina kaLLana koMdAnmya|
Avina kaLLana koMdu BUmiya avanI surarige ittAnmya |6|
piMgaLa kaNNina maMgagaLA kUDi CaMgane laMkege pOdAnmya|
CaMgane laMkege pOgi namma raMga heMgasugaLLana koMdAnmya |7|
kariya hoLeyalli turugaLa kAyuta uragana maDuva dhumukAnmya|
uragana heDe mEle hArAri kuNivAga yAryArigvarava koTTAnmya |8|
biMkada gOvaLanAgi namma raMga DoMkAda mudukiya kUDAnmya|
DoMkAda mudukiya kUDi mAvana biMkavannellA muridAnmya |9|
BaMDanaMdadi puMDarIkAkShanu kaMDa kaMDallige tirugyAnmya|
kaMDa kaMDallige tirugi tripurara heMDiranellA keDisAnmya |10|
celuva heMDatiya kudureya mADi oLLeya rAvutanAdAnmya|
oLLeya rAvutanAgi mlEcCara DoLLu hoTTeya mEle oddAnmya |11|
DoLLina mElkayya Baramappa hAkyAnu| tALava Sivanappa taTTAnmya|
oLLoLLe padagaLa hanumappa hADyAnu| celuva kanakappa kuNidAnmya |12|