ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೇಮವಿಲ್ಲದ ಹೋಮ | ಆದಿ ಕೇಶವ | Nemavillada Homa | Adi Keshava


 

ಸಾಹಿತ್ಯ : ಶ್ರೀ ಕನಕದಾಸರು

Kruti: Sri Kanakadasaru


ನೇಮವಿಲ್ಲದ ಹೋಮ ಇನ್ನೇತಕೆ |
ರಾಮ ನಾಮವು ಇರದ ಮಂತ್ರವೇಕೆ ||ಪ||

ನೀರ ಮುಳುಗಲು ಯಾಕೆ ನಾರಿಯ ಬಿಡಲೇಕೆ |
ವಾರಕ್ಕೊಂದುಪವಾಸ ಮಾಡಲೇಕೆ ||
ನಾರಸಿಂಹನ ದಿವ್ಯ ನಾಮವ
ನೆನೆದರೆ ಘೋರ ಪಾತಕವೆಲ್ಲ ತೊಲಗಿ ಹೋಗುವುದು ||೧||

ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ
ಡಂಭತನದಲ್ಲಿ ನೀನಿರಲೇತಕೆ
ಅಂಬುಜನಾಭನ ಭಾವದಲಿ ನೆನೆದರೆ
ಇಂಬುಂಟು ವೈಕುಂಠಪುರದೊಳಗೆ ಅಯ್ಯ || ೨ ||

ಬಂಧದೊಳಗೆ ಬಿದ್ದು ಹರಿಯನು
ನೆನೆಯುತಿರೆ ಬೆಂದು ಹೋಗುವುದು ದುರಿತಂಗಳೆಲ್ಲ ||
ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು ಚೆಂದಾಗಿ
ನೆಲೆಯಾದಿ ಕೇಶವನ ನೆನೆಯೇ ||೩||

nEmavillada hOma innEtake |
rAma nAmavu irada maMtravEke ||pa||

nIra muLugalu yAke nAriya biDalEke |
vArakkoMdupavAsa mADalEke ||
nArasiMhana divya nAmava
nenedare GOra pAtakavella tolagi hOguvudu ||1||

aMbarava toreyalEke taaMbUla biDalEke
DaMbhatanadalli nIniralEtake
aMbujanaabhana bhaavadali nenedare
iMbuMTu vaikuMThapuradoLage ayya || 2 ||

baMdhadoLage biddu hariyanu
neneyutire beMdu hOguvudu duritaMgaLella ||
baMda pApagaLella nillade kaLedAvu ceMdAgi
neleyAdi kESavana neneyE ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru