ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಪಿಲ ಸುಳಾದಿ | ಸಿದ್ಧಿದಾಯಕ ಶಿಷ್ಯ | ವಿಜಯ ವಿಠಲ | Kapila Suladi | Siddidayaka Shishya | Vijaya Vithala


 

ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಕಪಿಲ ಸುಳಾದಿ 

ಸಿದ್ಧಿದಾಯಕ ಶಿಷ್ಯಜನಪರಿಪಾಲ ಪರಮ
ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ  
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ  
ಚಿದ್ದೇಹ ಸರ್ವಕಾಲ ಸುಂದರಸಾರ  
ಪದ್ಮಸಂಭವ ಬಲಿಪ್ರಕ್ಷಾಲಿತ ಪಾದ ಮಹಾ   
ಹೃದ್ರೋಗನಾಶ ವೈಕುಂಠವಾಸ  
ವಿದ್ಯಾತೀತ ವಿಶ್ವನಾಟಕ ನಾರಾಯಣ 
ವಿದ್ಯಾಉದ್ಧಾರಕ ಉದಧಿಸದನ  
ಸಿದ್ಧಾದಿವಿನುತ ಸಂತತಪಾತಾಳವಾಸಿ 
ಬುದ್ಧಿವಿಶಾಲಮಹಿಮ ಪಾಪಹಾರಿ 
ಖದ್ಯೋತವರ್ಣ ಸಕಲವ್ಯಾಪ್ತ ಆಕಾಶ ಅಮಿತ 
ಬದ್ಧವಿಚ್ಛೇದ ನಾನಾ ರೂಪಾತ್ಮಕ 
ಅದ್ವೈತಕಾಯ ಮಾಯಾರಮಣ ರಾಜೀವನೇತ್ರ 
ಅದ್ವಯ ಅನಾದಿಪುರುಷ ಚಿತ್ರ 
ಕರ್ದಮಮುನಿಸೂನು ವಿಜಯವಿಠ್ಠಲ ಕಪಿಲ  
ನಿರ್ದೋಷ ಕರುಣಾಬ್ಧಿ ಸರ್ವರಾಧಾರಿ || ೧ ||

ಆದಿಮನ್ವಂತರದಿ ಜನಿಸಿದ ಮಹದೈವ 
ಆದಿಪರಬೊಮ್ಮ ಬೊಮ್ಮನಯ್ಯ ಜೀಯ 
ಸಾಧುಜನರ ಪ್ರಿಯ ಸಂತತಮುನಿತಿಲಕ 
ಬೋಧಶರೀರ ಭಕುತರ ಮನೋಹರ ಹರಿ 
ಮಾಧವ ಸಿರಿ ವಿಜಯವಿಠ್ಠಲ ವಿಮಲೇಶ 
ಮೋದಮತಿಯ ಕೊಡುವ ಕಪಿಲ ಭಗವನ್ಮೂರ್ತಿ || ೨ ||

ಘನ ಮಹಿಮ ಗೌಣಾಂಡದೊಳಗೆ ಲೀಲೆಯಿಂದ 
ಜನಿಸಿ ಮೆರೆದೆ ಬಿಂದು ಸರೋವರದಲ್ಲಿ 
ಮಿನುಗುವ ದ್ವಯಹಸ್ತ ಅಪ್ರಾಕೃತಕಾಯ 
ಇನನಂತೆ ಒಪ್ಪುವ ಶಿರೋರುಹವೋ 
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ 
ಅನವರತ ತುಂಬಿ ಸೂಸುತಲಿದಕೋ 
ಜನನಿ ದೇವಹೂತಿಗೆ ಉಪದೇಶವನು ಮಾಡಿ 
ಗುಣ ಮೊದಲಾದ ತತ್ವವ ತಿಳಿಸಿದೆ 
ತನುವಿನೊಳಗೆ ನೀನೇ ತಿಳಿದು ತಿಳಿದೇ ನಿತ್ಯ 
ಜನರನ್ನು ಪಾಲಿಸುವ ಕಪಿಲಾಖ್ಯನೆ 
ಅನುದಿನದಿ ನಿನ್ನ ಧ್ಯಾನವಮಾಡಿ ಮಣಿಯಿಂದ 
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ 
ಎಣೆಗಾಣೆ ನಿನ್ನ ಲೋಚನದ ಶಕ್ತಿಗೆ ಸಗರ 
ಜನಪನಂದನರನ್ನು ಭಂಗಿಸಿದೆ 
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ 
ಮನುಜನಿಗೆ ಮಹಾಪದವಿ ಬರುವುದಯ್ಯ 
ಮುನಿಕುಲೋತ್ತಮ ಕಪಿಲ ವಿಜಯವಿಠ್ಠಲರೇಯ 
ಎನಗೆ ಯೋಗಮಾರ್ಗವನು ತೋರೋ ತವಕದಿಂದ || ೩ ||

ಕಪಿಲ ಕಪಿಲಯೆಂದು ಪ್ರಾತಃಕಾಲದಲೆದ್ದು  
ಸಪುತ ಸಾರಿಗೆಯಲ್ಲಿ ನುಡಿದ ಮಾನವನಿಗೆ  
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲ  
ಅಪರಿಮಿತ ಸೌಖ್ಯ ಅವನ ಕುಲಕೋಟಿಗೆ  
ಗುಪುತನಾಮವಿದು ಮನದೊಳಗಿಡುವುದು 
ಕಪಟಜೀವರು ಈತನು ಒಬ್ಬ ಋಷಿಯೆಂದು 
ತಪಿಸುವರು ಕಾಣೋ ನಿತ್ಯನರಕದಲ್ಲಿ 
ಕೃಪಣವತ್ಸಲ ನಮ್ಮ ವಿಜಯವಿಠ್ಠಲರೇಯ 
ಕಪಿಲಾವತಾರವನು ಬಲ್ಲವಗೆ ಬಲುಸುಲಭ || ೪ ||

ಬಲಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ-
ಗಳ ಕಪ್ಪಿನಲಿ ಹೃದಯಸ್ಥಾನ, ನಾಭಿಯಲ್ಲಿ 
ಜಲದಿ ಗಂಗಾಸಂಗಮದಲ್ಲಿ ಗಮನದಲ್ಲಿ 
ತುಲಸಿಪತ್ರದಲ್ಲಿ ತುರಗ ತುರುವಿನಲ್ಲಿ 
ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ 
ಬಲು ಕರ್ಮಬಂಧಗಳು ಮೋಚಕವಾಗುವಲ್ಲಿ 
ಚೆಲುವನಾದವನಲ್ಲಿ ವಿದ್ಯೆ ಪೇಳುವನಲ್ಲಿ 
ಫಲದಲ್ಲಿ ಪ್ರತಿಕೂಲವಿಲ್ಲದ ಸ್ಥಳದಲ್ಲಿ 
ಬೆಳೆದ ದರ್ಭೆಗಳಲ್ಲಿ ಅಗ್ನಿಯಲ್ಲಿ ಹರಿವ
ಜಲದಲ್ಲಿ ಜಾಂಬುದ ನದಿಯಲ್ಲಿ ಶ್ಲೋಕದಲ್ಲಿ  
ಬಲಿಮುಖ ಬಳಗದಲ್ಲಿ ಆಚಾರಶೀಲನಲ್ಲಿ 
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲಿ ಬಂಗಾರದಲಿ ಇನಿತು  
ಕಾಲಕಾಲಕ್ಕೆ ಬಿಡದೆ ಸ್ಮರಿಸು ಕಪಿಲಪರಮಾತ್ಮನ್ನ
ಗೆಲುವುಂಟು ನಿನಗೆಲವೋ ಸಂಸಾರದಿಂದ ವೇಗ 
ಕಲಿಯುಗದೊಳಗಿದೆ ಕೊಂಡಾಡಿದವರಿಗೆ 
ಖಳರ ಅಂಜಿಕೆಯಿಲ್ಲ ನಿಂದಲ್ಲಿ ಶುಭ ಯೋಗ 
ಬಲವೈರಿನುತ ನಮ್ಮ ವಿಜಯವಿಠ್ಠಲರೇಯ 
ಇಳೆಯೊಳಗೆ ಕಪಿಲಾವತಾರನಾಗಿ ನಮ್ಮ ಭಾರ ವಹಿಸಿದ || ೫ ||

ತಮ ಪರಿಚ್ಛೇಧ ಈತನ ಸ್ಮರಣೆ ನೋಡು 
ಹೃತ್ಕಮಲದೊಳಗೆ ವಿಜಯವಿಠ್ಠಲನ ಚರಣಾಬ್ಜ || ೬ ||


Kapila Suladi

siddhidaayaka shiShyajanaparipaala parama
SuddhAtma suguNasAMdra suKavAridhi  
nidrArahita nidrAramaNa nirvikAra  
ciddEha sarvakAla suMdarasAra  
padmasaMBava baliprakShAlita pAda mahA   
hRudrOganASa vaikuMThavAsa  
vidyAtIta viSvanATaka nArAyaNa 
vidyAuddhAraka udadhisadana  
siddhAdivinuta saMtatapAtALavAsi 
buddhiviSAlamahima pApahAri 
KadyOtavarNa sakalavyApta AkASa amita 
baddhavichChEda nAnA rUpAtmaka 
advaitakAya mAyAramaNa rAjIvanEtra 
advaya anAdipuruSha chitra 
kardamamunisUnu vijayaviThThala kapila  
nirdOSha karuNAbdhi sarvarAdhAri || 1 ||

AdimanvaMtaradi janisida mahadaiva 
Adiparabomma bommanayya jIya 
sAdhujanara priya saMtatamunitilaka 
bOdhaSarIra Bakutara manOhara hari 
mAdhava siri vijayaviThThala vimalESa 
mOdamatiya koDuva kapila BagavanmUrti || 2 ||

Gana mahima gauNAMDadoLage lIleyiMda 
janisi merede biMdu sarOvaradalli 
minuguva dvayahasta aprAkRutakAya 
inanaMte oppuva SirOruhavO 
kanaka putthaLiyaMte kAMti triBuvanakke 
anavarata tuMbi sUsutalidakO 
janani dEvahUtige upadESavanu mADi 
guNa modalAda tatvava tiLiside 
tanuvinoLage nInE tiLidu tiLidE nitya 
janarannu pAlisuva kapilAKyane 
anudinadi ninna dhyAnavamADi maNiyiMda 
eNisuva sujanakke jnAna koDuve 
eNegANe ninna lOcanada Saktige sagara 
janapanaMdanarannu BaMgiside 
anumAnavidakilla ninna naMbida mUDha 
manujanige mahApadavi baruvudayya 
munikulOttama kapila vijayaviThThalarEya 
enage yOgamArgavanu tOrO tavakadiMda || 3 ||

kapila kapilayeMdu prAtaHkAladaleddu  
saputa sArigeyalli nuDida mAnavanige  
apajaya modalAda klESagaLoMdilla  
aparimita sauKya avana kulakOTige  
guputanAmavidu manadoLagiDuvudu 
kapaTajIvaru Itanu obba RuShiyeMdu 
tapisuvaru kANO nityanarakadalli 
kRupaNavatsala namma vijayaviThThalarEya 
kapilaavatAravanu ballavage balusulaBa || 4 ||
  
balahastadalli yajnaSAleyalli kaM-
gaLa kappinali hRudayasthaana, nABiyalli 
jaladi gaMgAsaMgamadalli gamanadalli 
tulasipatradalli turaga turuvinalli 
malaguva maneyalli naivEdya samayadalli 
balu karmabaMdhagaLu mOcakavAguvalli 
celuvanAdavanalli vidye pELuvanalli 
Paladalli pratikUlavillada sthaLadalli 
beLeda darBegaLalli agniyalli hariva
jaladalli jAMbuda nadiyalli SlOkadalli  
balimuKa baLagadalli AcAraSIlanalli 
GaLige AraMbhadalli pashcima bhaagadalli
poLeva miMcinali baMgAradali initu  
kAlakAlakke biDade smarisu kapilaparamAtmanna
geluvuMTu ninagelavO saMsAradiMda vEga 
kaliyugadoLagide koMDADidavarige 
KaLara aMjikeyilla niMdalli SuBa yOga 
balavairinuta namma vijayaviThThalarEya 
iLeyoLage kapilAvatAranAgi namma BAra vahisida || 5 ||

tama parichChEdha Itana smaraNe nODu 
hRutkamaladoLage vijayaviThThalana caraNAbja || 6 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru