Posts

Showing posts from 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಾರಾಯಣನ ನೆನೆ ಮನವೇ | ಹಯವದನ | Narayanana Nene Manave | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣನ ನೆನೆ ಮನವೇ ನಾರಾಯಣನ ನೆನೆ || ಪ || ನಾರಾಯಣನ ಮನ್ನಿಸು ವರ್ಣಿಸು| ಆರಾಧನೆಗಳ ಮಾಡುತ ಪಾಡುತ|  ನೀರಾಜನದಿಂದ ಅರ್ಚಿಸು ಮೆಚ್ಚಿಸು ಪಾರಾಯಣ ಪ್ರಿಯನ || ಅಪ || ಲೋಕದಿ ವರಂ ವರಯೆ ಭದ್ರಂತೆ ಋತೇ ಕೈವಲ್ಯ ಮಹಾತ್ಮನಃ  ಏಕಮೇವೇಶ್ವರ ತಸ್ಮಾದ್ ಭಗವಾನ್ ಶ್ರೀವಿಷ್ಣುರವ್ಯಯಃ ಎಂಬ| ಈ ಕಲಿಯುಗದಿ ಬೇಕಾದ ಪುರಾಣದಿ ವಾಕು ವಿವೇಕವ ಮನದಿ ವಿಚಾರಿಸಿ| ಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯ ಮತವ ||೧|| ಆವನ ಶ್ರವಣ ಮನನ ನಿಧಿಧ್ಯಾಸನ| ಆ ವಿಷ್ಣುವಿನ ಭಕ್ತಿ ಮಹಾ ಪ್ರಸಾದಂಗಳು| ಕೈವಲ್ಯ ಪದಕೆ ಇಕ್ಕಿದ ನಿಚ್ಚಣಿಕೆಂದು ಭಾವಜ್ಞರು ಪೇಳ್ವರು| ಜೀವನ ಜವನ ಬಾಧೆಗಳನ್ನು ತಪ್ಪಿಸಿ| ಪಾವನ ವೈಕುಂಠ ಪುರದೊಳಗೆಂದೆಂದು ಆವಾಸನ ಮಾಡಿ ಸುಖಿಸಬೇಕಾದರೆ| ಸೇವಿಸು ವೈಷ್ಣವರ ||೨|| ದ್ವಾರಾವತಿಯ ಗೋಪಿ ಚಂದನದಿಂದ| ಶ್ರೀರಮಣನ ವರ ನಾಮವ ನೆನೆದೆರಡಾರು ಊರ್ಧ್ವ ಪುಂಡ್ರಗಳ ಧರಿಸೆಂದು ವೀರ ವೈಷ್ಣವ ಗುರುವ| ಸೇರಿ ಸಂತಪ್ತ ಸುದರುಶನ ಶಂಖವ ಧಾರಣವನು ಭುಜಯುಗದೊಳು ಮಾಡಿ ಮುರಾರಿಯ ಮಂತ್ರಗಳ ಅವರಿಂದಲಿ ಕೇಳಿ ಓರಂತೆ ಜಪಿಸುತಲಿ ||೩|| ಕಂದ ಬಾರೆಂದರೆ ನಂದನಿಗೊಲಿದಿಹ| ಕುಂದು ಕೊರತೆ ಬಂದರೆ ನೊಂದುಕೊಳ್ಳನು ಇಂದಿರೆಯರಸ ಮುಕುಂದನೆ ಮುಕುತಿಯಾನಂದವನೀವ ದೇವ| ಸಂದೇಹವಿಲ್ಲದೆ ಒಂದೆ ಮನದಿ ಗೋವಿಂದನ ನೆನೆದ ಗಜೇಂದ್ರನಿಗೊಲಿದ ಉಪೇಂದ್ರನ  ಶುಭಗುಣಸಾಂದ್ರನ ಯದುಕುಲ...

ಕರುಣಿಸಿ ಕೇಳು ಕಂದನ ಮಾತ | ಹಯವದನ | Karunisi Kelu | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕರುಣಿಸಿ ಕೇಳು ಕಂದನ ಮಾತ ಗರುಡವಾಹನನೆ ಗಂಗೆಯ ಪೆತ್ತ ಹರಿಯೆ ||ಪ|| ಇತ್ತ ಬಾರೆಂಬುವರಿಲ್ಲ ಇರವ ಕೇಳುವರಿಲ್ಲ ಹತ್ತಿಲಿ ಕುಳ್ಳಿರು ಎಂಬ ದಾತರಿಲ್ಲ ತತ್ತರಗೊಳ್ಳುತಲಿದೆ ತಾವರೆಯೆಲೆಯೊಳನೀರಿನಂತೆ ಹತ್ತು ನೂರಾರು ನಾಮವುಳ್ಳ ಶ್ರೀಹರಿಯೆ ನೀ ಕೇಳೊ ||೧|| ಇಂದು ಬಂಧನವಿಲ್ಲ ಇದ್ದವ ಕೇಳುವುದಿಲ್ಲ ಒಂದು ಸುತ್ತಿಗೆ ಬಟ್ಟೆಯಾದರೂ ಇಲ್ಲ ಈ ಬೆಂದೊಡಲಿಗೆ ಒಬ್ಬ ಅಯ್ಯೋ ಎಂಬುವನಿಲ್ಲ ಬಿಂದುಮಾತ್ರದಲ್ಲಿ ಸುಖವ ಕಾಣೆ ಹರಿಯೆ ||೨|| ಎಲ್ಲಿಯೂ ಧಾರಣೆಗೊಂದು ನೆರೆಳನು ಕಾಣೆ ಅಲ್ಲವತಿಂದಿಲಿಯಂತೆ ಬಳಲುತಿದ್ದೆ ಫುಲ್ಲಲೋಚನ ಪೂರ್ಣ ಹಯವದನ ಸಲ್ಲುವ ನಾಣ್ಯವ ಮಾಡಿ ಸಲಹೋ ಎನ್ನ ಹರಿಯೆ ||೩||  karuNisi kELu kaMdana maata garuDavaahanane gaMgeya petta hariye ||pa|| itta baareMbuvarilla irava kELuvarilla hattili kuLLiru eMba daatarilla tattaragoLLutalide taavareyeleyoLanIrinaMte hattu nUrAru nAmavuLLa shrIhariye nI kELo ||1|| iMdu baMdhanavilla iddava kELuvudilla oMdu suttige baTTeyAdarU illa I beMdoDalige obba ayyO eMbuvanilla biMdumAtradalli sukhava kaaNe hariye ||2|| elliyU dhaaraNegoMdu nereLanu kaaNe allavatiMdiliyaMte baLalutidde PullalOchana pU...

ಪ್ರಾಣನ ನೋಡಿರೈ | ಹಯವದನ | Pranana Nodirai with Lyrics | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಪ್ರಾಣನ ನೋಡಿರೈ  ಮುಖ್ಯಪ್ರಾಣನ ಪಾಡಿರೈ || ಪ || ಕ್ಷೋಣಿಯೊಳಗೆ ಎಣೆರಹಿತ  ಪಾವನಚರಿತ ಸದ್ಗುಣಭರಿತ || ಅಪ || ಮರ್ಕಟರೂಪಿಲೆ ಅವತರಿಸಿದ ಅಂಜನೆಸುತನೊ ಮಹ ಅದ್ಭುತನೋ ತರಣಿ ಮಂಡಲಕೆ ಮುಟ್ಟಿ ಹಾರಿದ ಬಲದ ಶ್ರುತಿಯೊ ವಿಕ್ರಮ ಗತಿಯೊ ಸುರರಾಯುಧ ನೆಗ್ಗಿಸಿದ  ಕಪಿಯಗ್ರಣಿಯೊ ವಜ್ರದ ಖಣಿಯೊ ಶರಣವಂದಿತ ಚರಿತ ಮೂರ್ಲೋಕ ಗುರುವೋ ಕಲ್ಪತರುವೋ || ೧ || ರಾಮಪದಾಂಬುಜ ಬಿಂಬಪರಾಗ  ಮಧುಪನೊ ದೇವಾಧಿಪನೊ ತಾಮಸ ರಾವಣನೆದೆಗೊತ್ತಿದ ಈ ಕರವೊ ಸಿಡಿಲಬ್ಬರವೋ ಪ್ರೇಮದಿ ರಣದೊಳಗ್ಹಾರಿ ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊ ರೋಮಕೆ ಸಿಲ್ಕದ ಹನುಮನ ಬಾಲದ ಸರಳೊ ದೈತ್ಯರಿಗುರುಳೊ || ೨ || ಕ್ಷಣದೊಳು ಸಂಜೀವನ ಗಿರಿಯನೆ ತಂದ ತಪವೊ ತಾ ನೃಪಹಿತವೊ ವನಜನಾಭನ ಪಾದ ಪಡೆದಂಥ ಪದವೊ ಸಾಗರ ಮದವೊ ನೆನೆಯಲು ದುರಿತನಿವಾರಣ ಕರುಣಾವಾರಿಧಿಯೊ ಭಕ್ತರ ಸುಧೆಯೊ ಅನುದಿನದಲ್ಲಿ ಹಯವದನನ ನೆನೆಯುವ ದಯವೋ ಗತಿ ಆಶ್ರಯವೋ || ೩ || praaNana nODirai  muKyapraaNana paaDirai || pa || kShONiyoLage eNerahita  paavanacarita sadguNabharita || apa || markaTarUpile avatarisida aMjanesutano maha adbhutanO taraNi maMDalake muTTi haarida balada shrutiyo vikrama gatiyo suraraayudha neggisida  kapiyagr...

ನಾರೇರೆಲ್ಲ ಬನ್ನಿ ನಾರಾಯಣನು ನಾರಿಯಾದ | ಪುರಂದರ ವಿಠಲ | Narerella Banni Narayananu | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಾರೇರೆಲ್ಲ ಬನ್ನಿ  ನಾರಾಯಣನು ನಾರಿಯಾದ || ಪ  ನಾರಾಯಣನು ನಾರಿಯಾದ  ಅಸುರರಿಗೆಲ್ಲ ಮೋಹಿನಿಯಾದ || ಅಪ || ನಾರಾಯಣನು ನಾರಿಯಾದ  ಬಲು ವೈಯ್ಯಾರ ಬಲು ಶೃಂಗಾರ ಕಾಲಲಂದುಗೆ ಗೆಜ್ಜೆ  ಹಂಸದ ನಡಿಗೆಗಳಂತೆ ಹೆಜ್ಜೆ ಜಗದ ನಾರಿಯರಂತೆ ಲಜ್ಜೆ  ಕೈಯಲಿ ಹಿಡಿದ ಬೆಣ್ಣೆಯ ಮುದ್ದೆ || ೧ || ಆಣಿ ಮುತ್ತಿನ ಸರ  ನೋಡೆ ಆಕೆ ಕುಚದ ಭಾರ ನಾರಿ ಮಣಿಯ ಜಡೆ ವಯ್ಯಾರ  ಉಂಗುರವಿಟ್ಟಂಥ ಕರ || ೨ || ಬುಲಾಕಿನ ಬೆಳಕು  ಏಕಾದಣಿ ಒಂಟಿ ಥಳಕು ವಾಲೆ ಸರಪಳಿ ಆಡೋ ಕುಲುಕು  ಕನ್ನಡಿಯಂದದಿ ಹೊಳೆವ ಕದಪು || ೩ || ವಾಲೆ ಚಳ ತುಂಬಿಟ್ಟು  ಜರಿಗೆ ಸೀರೆ ನೆರಿಗೆ ಹಿಡಿದಿಟ್ಟು ಸಣ್ಣ ನಡುವಿಗೆ ಚಿನ್ನದ ಕಟ್ಟು  ಕನ್ನಡಿ ಹಾಕಿದ ಕುಪ್ಪಸ ತೊಟ್ಟು || ೪ || ಕರಣ ಬಾವುಲಿ ಕೆಂಪು  ನೋಡೆ ಆಕೆ ಮುಖದ ಸೊಂಪು ಎಳೆಮಾವಿನ ನೆರಳ ಕಂಪು  ಕಣ್ಣಿಗೆ ಹಚ್ಚಿದ ಕಾಡಿಗೆ ಕಪ್ಪು || ೫ || ಮರುಗ ಮಲ್ಲಿಗೆ ದಂಡೆ  ರಾಕಟಿ ಚೌರಿ ಹೆರಳ ಗೊಂಡೆ ಜಡೆ ಬಂಗಾರ ವಲಿವುದ ಕಂಡೆ  ಯೌವನ ಸ್ತ್ರೀಯಳು ಬರುವುದು ಕಂಡೆ || ೬ || ವಾಲೆ ಚಳ ತುಂಬಿನ ಮಾಟ  ಮುತ್ತಿನ ಬುಗುಡಿ ವೋರೆ ನೋಟ ಹಲಸು ಕಿತ್ತಳೆ ತೆಂಗಿನ ತೋಟ  ರಂಭೆವನದೊಳಗಾಡೋ ಆಟ || ೭ || ಅರಿಸಿನ ಕುಂಕುಮ ತಟ್ಟೆ ಹಿಡಿದು...

ಎಣೆಯಾರೊ ನಿನಗೆ ಹನುಮಂತರಾಯ | ಹಯವದನ | Eneyaro ninage Hanumantha | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎಣೆಯಾರೊ ನಿನಗೆ ಹನುಮಂತರಾಯ || ಪ || ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲ ಪ್ರಣತಜನ ಮಂದಾರ ಪವನ ಸುಕುಮಾರ || ಅಪ || ಅಡಿಗಡಿಗೆ ರಾಮಪದಾಂಬುಜಕೆ ವಂದಿಸುತ ನಡೆನಡೆದು ಮುದ್ರಿಕೆಯ ಪಡೆದು ಮುದದಿ ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ ಕೊಡುಕೊಡುತ ಕುಸ್ತರಿಸಿದಂಥ ಹನುಮಂತ || ೧ || ಗರಗರನೆ ಪಲ್ಗಡಿದು ಕಲುಷ ದೈತ್ಯರನೆಲ್ಲ ಚರಚರನೆ ಸೀಳಿ ಸಂಭ್ರಮದಿಂದ ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ || ೨ || ಫಳಫಳನೆ ಆರ್ಭಟದಿಂದ ರಾವಣನ ನಳನಳನೆ ಬೆಳೆದ ನಂದನವ ಕಿತ್ತು ಖಳಖಳನೆ ನಗುತ ದಶಕಂದರನ ಗುದ್ದಿ ಬಂದೆ ಭಳಿಭಳಿರೆ ಹಯವದನದಾಸ ನಿಸ್ಸೀಮ || ೩ || eNeyaaro ninage hanumaMtaraaya || pa || eNeyaaro ninage tribhuvanadoLagella praNatajana maMdaara pavana sukumaara || apa || aDigaDige raamapadaaMbujake vaMdisuta naDenaDedu mudrikeya paDedu mudadi daDadaDane aMbudhiya daaTi sItege guruta koDukoDuta kustarisidaMtha hanumaMta || 1 || garagarane palgaDidu kaluSha daityaranella characharane sILi saMbhramadiMda birabirane kaNbiDuta biMkadali laMkeyanu surasurane baaladali suTTa raNadiTTa || 2 || phaLaphaLane aa...

ಶ್ರೀ ಹರಿಪಾದ ಸ್ತೋತ್ರ ಸುಳಾದಿ | ವಾದಿರಾಜರು | Sri Haripaada Stotra Suladi | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಹರಿಪಾದ ಸ್ತೋತ್ರ ಸುಳಾದಿ ಹರಿಪಾದ ನೆನೆವಂಗೆ ಅರಿಗಳ ಭಯವಿಲ್ಲ ಹರಿಪಾದ ನೆನೆವಂಗೆ ದುರಿತ ಭಯವಿಲ್ಲ ಹರಿಪಾದ ನೆನೆವಂಗೆ ನರಕದ ಭಯವಿಲ್ಲ ಹರಿಪಾದ ನೆನೆವಂಗೆ ಮಾಯದ ಭಯವಿಲ್ಲ ಹರಿಪಾದ ನೆನೆವಂಗೆ ಭವದ ಭಯವಿಲ್ಲ ಹರಿಪಾದ ನೆನೆವಂಗೆ ವಿಷಯ ಭಯವಿಲ್ಲ ಹರಿಪಾದ ನೆನೆವಂಗೆ ಜನನ ಭಯವಿಲ್ಲ ಹರಿಪಾದ ನೆನೆವಂಗೆ ಮರಣದ ಭಯವಿಲ್ಲ ಬರಿದೆ ಮಾತೇ ಅಲ್ಲ ಸಿರಿಹಯವದನನು  ಕರೆದು ಮುಕ್ತಿಯನ್ನಿತ್ತು ಅನುಗಾಲ ಸಲಹುವ || ೧ || ಆವ ಧ್ರುವನ ನೋಡಿ ಸುರಲೋಕದಲಿ ಭೂವಿಭೀಷಣನ ನೋಡಿರಯ್ಯ ಅವನಿ ಕೆಳಗೆ ಬಲಿಯುತ್ಸವ ನೋಡಿ ಈ ಹಯವದನನ ಭಜಕರೇ ಸಾಕ್ಷಿ || ೨ || ಹತ್ತಾವತಾರದಿ ಭಕುತರ ಭಯವೆಲ್ಲ ಕಿತ್ತಿ ಭಕುತರ ಕಾಯ್ದ ಕಥೆಯ ಕೇಳಿರಯ್ಯ ಮತ್ತಾರು ತೋರಿರೈ ಭೃತ್ಯರೆಂಬಸುಗಳಿಗೆ ಹೆತ್ತ ತಾಯಿಯೆಂಬ ವಾರುತೆ ಕೇಳಯ್ಯ ಕರ್ತೃ ಹಯವದನನು ಭವವೆಂಬ ಕತ್ತಲೆ ಬತ್ತಿಪ ರವಿಯೆಂದು ಚಿತ್ತದಲ್ಲಿ ನೆರೆ ನಂಬು || ೩ || ದ್ರೌಪದಿ ಭಯವ ಪರಿಹರಿಸಿದರಾರೈ ಆ ಪರೀಕ್ಷಿತನ ರಕ್ಷಿಸಿದವನಾರೈ ತಾಪಸರೊಡೆಯ ಶ್ರೀಪತಿ ಹಯವದನನು ತಾಪಂಗಳನು ಕಳೆದು ತರ್ಕೈಸಿಕೊಂಬ || ೪ || ಕರಿಯ ಕಾಯ್ದವನ ಪಾದವ ನಂಬು ಗಿರಿಯ ಎತ್ತಿದವನ ಪಾದವ ನಂಬು ಉರಿಯ ನುಂಗಿದವನ ಪಾದವ ನಂಬು ಪುರಹರನುಳುಪಿದವನ ನೆರೆನಂಬು ಕರಿ ಸಿರಿ ಹಯವದನನ ಶರಣರಿಗೆ ಭಯವಿಲ್ಲ || ೫ || ಜತೆ ಶ್ರೀರಮಣ ಹಯವದನನ ನಂಬಿದ ಸಾರ  ಹೃದಯರ ಚರಣ ಸೇವೆ ಮಾಳ್ಪು...

ಮೂರು ನಾಮಗಳ | ಗೋಪಾಲ ವಿಠಲ | Mooru Namagala with Lyrics | Gopala Vithala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala dasaru (Gopala vittala) ಮೂರು ನಾಮಗಳ ಧರಿಸಿದ ಕಾರಣವೇನು | ಸಾರಿ ಪೇಳೆಲೋ ಈಗಲೇ ||ಪ|| ಶ್ರೀ ರಮಾಪತೇ ಶ್ರೀನಿವಾಸ ವೇಂಕಟರಮಣ | ಯಾರು ಇಟ್ಟರೋ ನಿನಗೇ ಮೂರು ನಾಮಗಳ ||ಅಪ|| ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು | ಶುದ್ಧ ಪಾದಕೆ ಎರಗಿ ಕರವ ಮುಗಿದು || ಎದ್ದು ನೋಡಲು ನಿನ್ನ ಫಣಿಯೊಳೀಪರಿ ಇರಲು | ಮಧ್ವ ಮತದ ದೈವವೆಂದು ನಿನ್ನ ಕರೆಯುವರೆ ||೧|| ಸಾಲದೇ ನಿನ್ನ ಸೌಂದರ್ಯಕ್ಕೆ ಒಂದು ತಿಲಕ | ಪಾಲ ಸಾಗರಶಾಯಿ ಚೆಲುವ ಮೂರುತಿ || ಕಾಲಕಾಲಕೆ ಬರುವ ಭಕುತ ಜನಗಳ ವೃಂದ || ದೃಷ್ಟಿ ತಾಕುವುದೆಂಬ ತೋರುವ ಬಗೆಯೋ ||೨|| ಮೂರು ಲೋಕಗಳಿಹವು ಮೂರು ರೂಪ ನಾನು | ಮೂರು ಮಾಳ್ಪೆನು ಜಗವ ಮೂರು ಗುಣದಿ || ಮೂರು ತಾಪವ ಗೆದ್ದು ಮಾರ್ಗದಿ ಭಜಿಸೆ | ಪಾರು ಮಾಡುವೆನೆಂದು ತೋರುವ ಬಗೆಯೋ ||೩|| ಮೂರೆರಡು ಎರಡೊಂದು ಇಂದ್ರಿಯ ವರ್ಜಿಸಿ | ತೋರುವನು ನಿಜರೂಪ ಭಕ್ತನೆಂದು || ಸಾರುತಿದ್ದರೂ ವಾಯು ಅರಿಯದೆ ಭಜಿಪಗೆ | ಮೂರು ನಾಮಗಳೇ ಗತಿ ಎನ್ನುವ ಬಗೆಯೋ ||೪|| ಶ್ರೀಲೋಲ ಕೃಷ್ಣ ಗೋಪಾಲ ವಿಠಲ | ನಿನ್ನ ಈ ಬಗೆಯ ಲೀಲೆಗಳ ಅರಿವರ‍್ಯಾರೋ || ವ್ಯಾಳ ಶಯನ ವೆಂಕಟೇಶನೇ ಎನ್ನ ಮನಕೆ | ಕಾಲಕಾಲಕೆ ನಿನ್ನ ಲೀಲೆಗಳ ತೋರೋ ||೫|| mUru nAmagaLa dharisida kAraNavEnu | sAri pELelO IgalE ||pa|| SrI ramApatE SrInivAsa vEMkaTaramaNa | yAru iTTarO ninagE mUru nAmagaLa...

ಭಜಿಸಬಾರದೇ ಮನವೇ | ಮಹಿಪತಿ | Bhajisabarade Manave | Mahipati Dasaru |

Image
  ಸಾಹಿತ್ಯ : ಶ್ರೀ ಮಹಿಪತಿ ದಾಸರು Kruti: Sri Mahipati Dasaru ಭಜಿಸಬಾರದೇ ಮನವೇ ಭಜಿಸಬಾರದೇ || ಪ || ಭಜಿಸಲೇಕಭಾವದಿಂದ | ನಿಜವಗೊಲಿದ ಹರಿ ಮುಕುಂದ || ಅಪ || ನಿಜವ ಬಿಟ್ಟು ದಣಿವುದ್ಯಾಕೆ | ಜಗಪತಿಗೊಂದಿಸದೆ ತಾನು ಭಜನೆ ಮುಖ್ಯವೆಂದು ಸುಜನರೆಲ್ಲ ಪೇಳುತ್ತಿರಲಿಕ್ಕಾಗಿ || ೧ || ಪ್ರೀತಿಯಿಂದ ಅರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣ ತಾನು ನೀತಿ ಹಿತವ ಭಕ್ತಿಯೋಗದಲ್ಲಿ ಸಾರುತ್ತಿರಲಿಕ್ಕಾಗಿ || ೨ || ಪ್ರಕಟ ಭಾವಕ್ಕೊಲಿವ ನೋಡಿ ಅಖಿಲದೊಳು ಸುಲಭದಿಂದ ಭಕುತಿ ಸುಖವನಿತ್ತು ಸಲಹುತಿಹ ಮಹಿಪತಿ ಸ್ವಾಮಿಯನ್ನು || ೩ || bhajisabaaradE manavE bhajisabaaradE || pa || bhajisalEkabhaavadiMda | nijavagolida hari mukuMda || apa || nijava biTTu daNivudyaake | jagapatigoMdisade taanu bhajane muKyaveMdu sujanarella pELuttiralikkaagi || 1 || prItiyiMda arjuna nODi gIteyalli shrIkRuShNa taanu nIti hitava bhaktiyOgadalli saaruttiralikkaagi || 2 || prakaTa bhaavakkoliva nODi akhiladoLu sulabhadiMda bhakuti sukhavanittu salahutiha mahipati svaamiyannu || 3 ||

ನೇಮವಿಲ್ಲದ ಹೋಮ | ಆದಿ ಕೇಶವ | Nemavillada Homa | Adi Keshava

Image
  ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ನೇಮವಿಲ್ಲದ ಹೋಮ ಇನ್ನೇತಕೆ | ರಾಮ ನಾಮವು ಇರದ ಮಂತ್ರವೇಕೆ ||ಪ|| ನೀರ ಮುಳುಗಲು ಯಾಕೆ ನಾರಿಯ ಬಿಡಲೇಕೆ | ವಾರಕ್ಕೊಂದುಪವಾಸ ಮಾಡಲೇಕೆ || ನಾರಸಿಂಹನ ದಿವ್ಯ ನಾಮವ ನೆನೆದರೆ ಘೋರ ಪಾತಕವೆಲ್ಲ ತೊಲಗಿ ಹೋಗುವುದು ||೧|| ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ ಡಂಭತನದಲ್ಲಿ ನೀನಿರಲೇತಕೆ ಅಂಬುಜನಾಭನ ಭಾವದಲಿ ನೆನೆದರೆ ಇಂಬುಂಟು ವೈಕುಂಠಪುರದೊಳಗೆ ಅಯ್ಯ || ೨ || ಬಂಧದೊಳಗೆ ಬಿದ್ದು ಹರಿಯನು ನೆನೆಯುತಿರೆ ಬೆಂದು ಹೋಗುವುದು ದುರಿತಂಗಳೆಲ್ಲ || ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು ಚೆಂದಾಗಿ ನೆಲೆಯಾದಿ ಕೇಶವನ ನೆನೆಯೇ ||೩|| nEmavillada hOma innEtake | rAma nAmavu irada maMtravEke ||pa|| nIra muLugalu yAke nAriya biDalEke | vArakkoMdupavAsa mADalEke || nArasiMhana divya nAmava nenedare GOra pAtakavella tolagi hOguvudu ||1|| aMbarava toreyalEke taaMbUla biDalEke DaMbhatanadalli nIniralEtake aMbujanaabhana bhaavadali nenedare iMbuMTu vaikuMThapuradoLage ayya || 2 || baMdhadoLage biddu hariyanu neneyutire beMdu hOguvudu duritaMgaLella || baMda pApagaLella nillade kaLedAvu ceMdAgi neleyAdi kESavana neneyE ||3||

ಕಾಶಿಯ ಹಾದಿಯಲಿ | ವಿಜಯವಿಠ್ಠಲ| Kashiya Hadiyali | Vijaya Vithala

Image
  ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ || ೧ || ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ || ೨ || ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ| ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ || ೩ || ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ| ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ || ೪ || ವಿಷ್ಣು ತೀರ್ಥದಲ್ಲಿ ಶ್ರೀವಿಷ್ಣು ಇದ್ದಾನೆ ರಾಮರಾಮ|| ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿ ರಾಮರಾಮ || ೫ || ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ| ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ || ೬ || ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ| ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ || ೭ || ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ| ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ || ೮ || ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ| ಶ್ರೀಧರನ ದಯದಿ ಹೃದಯವಾಸನ ಕಂಡೆ ರಾಮರಾಮ || ೯ || ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ| ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ || ೧೦ || ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ| ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ|| ೧೧ || ಸಾಧು ಬೃಂದದಲ...

ಡಂಭಕದ ಭಕುತಿಯನು | ಮೋಹನ ವಿಠಲ | Dambakada Bhakutiyanu | Mohana Vithala

Image
  ಸಾಹಿತ್ಯ : ಶ್ರೀ ಮೋಹನ ದಾಸರು (ಮೋಹನ ವಿಠಲ) Kruti: Sri Mohana Dasaru (Mohana Vithala) ಡಂಭಕದ ಭಕುತಿಯನು ಬಿಡು ಕಂಡ್ಯ ಮನವೇ || ಪ || ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕೂ || ಅಪ || ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆ ಅಹಿಕ ಫಲವಲ್ಲದೆ ಮೋಕ್ಷವುಂಟೆ ವಿಹಿತಾವಿಹಿತ ತಿಳಿದು ಸತ್ಕರ್ಮ ಕಿಂಚಿತ್ ಮಾಡೆ ದಹಿಸುವುದು ಅಘ ರಾಶಿ ಅಹಿಶಾಯಿ ಒಲಿವ || ೧ || ವರವೈಷ್ಣವರು ಬಂದು ನಿಲ್ಲಲು ವಂದಿಸದಲೆ ಹರಿಪೂಜೆ ಮಾಳ್ಪೆನೆಂದು ಕುಳಿತುಕೊಂಬೆ ಅರಿಯದ ಊರೊಳಗೆ ಅಗಸರ ಮಾಲಿಯೇ  ಹಿರಿಯ ಮುತ್ತೈದೆಯೆಂದು ಕರೆಸುವಂತೆ || ೨ || ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತು ತಪಿಸುವೆ ಒಳಗೆ ನೀ ಧನದಾಸೆಯಿಂದ ಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠಲನ್ನ ಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ || ೩ || DaMbhakada bhakutiyanu biDu kaMDya manavE || pa || aMbujaakShanu oliya anaMta kaalakkU || apa || bahira aMgaDi hUDi janara vaMcisidare ahika Palavallade mOkShavuMTe vihitaavihita tiLidu satkarma kiMcit maaDe dahisuvudu agha raashi ahishaayi oliva || 1 || varavaiShNavaru baMdu nillalu vaMdisadale haripUje maaLpeneMdu kuLitukoMbe ariyada UroLage agasara maaliyE  hiriya muttaideyeMdu karesuvaMte || 2 || japava maaDuveneMdu ...

ಜೇನು ಬಂದಿದೆ | ಪುರಂದರ ವಿಠಲ | Jenu Bandide | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಜೇನು ಬಂದಿದೆ ಜನರೇ ಜೇನು ಕೊಳ್ಳಿರೋ || ಪ || ಮಧುರವಾದ ಕೊಂಬು ಜೇನು ಮಾಧವನ ಸ್ಮರಣೆ ಎಂಬ ಸದರವಾದ ಜನರಿಗೆಲ್ಲ ಜನನ ಮರಣವಾಯ್ದ ಬಗೆ ಸತ್ತವರಿಗೂ ಸಾಯದವರಿಗೂ ಇಹಪರಂಗಳೆರಡು ಉಂಟು ಪದುಮನಾಭನ ನಾಮಸ್ಮರಣೆ ಸದನ ಮಾಡಿಕೊಂಡವರಿಗೆ || ೧ || ಒಂದು ಅರಿಯ ಒಂದು ಬಲ್ಲ ಅಜ್ಞನಾದ ಅಜಮಿಳನು ಕಂದನಾರ ಎಂದು ಕೂಗಿ ಕರೆದ ಮಾತ್ರದಿ ಅಂದು ಅವನ ಸಲಹಿದ ಅನಂತ ಶ್ರೀವಾಸುದೇವ ನಂದಗೋಪನ ಸುಂದರ ಕಂದ ನವನೀತಚೋರನೆಂಬ || ೨ || ಈರೇಳು ಲೋಕದಲ್ಲಿ ಇರುವ ಕಸ್ತೂರಿರಂಗ ಮಾರು ವಾರು ಸೇರು ಜೇನು ಅಗ್ಗವಾಗಿದೆ ಅರಿತು ಬೇಗ ಧ್ಯಾನ ಮಾಡಿ ಇಂದಿರೇಶನ ಪುರಂದರ ವಿಠಲ ನಾಮಸ್ಮರಣೆ ಎಂಬ ದಿವ್ಯ ಜೇನು || ೩ || jEnu baMdide janarE jEnu koLLirO || pa || madhuravaada koMbu jEnu maadhavana smaraNe eMba sadaravaada janarigella janana maraNavaayda bage sattavarigU saayadavarigU ihaparaMgaLeraDu uMTu padumanaabhana naamasmaraNe sadana maaDikoMDavarige || 1 || oMdu ariya oMdu balla ajnanaada ajamiLanu kaMdanaara eMdu kUgi kareda maatradi aMdu avana salahida anaMta shrIvAsudEva naMdagOpana suMdara kaMda navanItacOraneMba || 2 || IrELu lOkadalli iruva...

ರಾಮ ಹರೇ ಜೈ ಜೈ | ವರದೇಶ ವಿಠಲ | Rama Hare Jai Jai with Lyrics | Varadesha Vithala

Image
  ಸಾಹಿತ್ಯ : ಶ್ರೀ ವರದೇಶ ವಿಠಲ ದಾಸರು  Kruti:Sri Varadesha Vithala Dasaru ರಾಮ ಹರೇ ಜೈ ಜೈ ರಾಮ ಹರೇ  ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ  ರಾಮ ಹರೇ ಹರೇ ರಾಮ ಹರೇ  ಕೃಷ್ಣ ಹರೇ ಹರೇ ಕೃಷ್ಣ ಹರೇ|  ಕೌಸಲ್ಯಜ ರವಿವಂಶೋದ್ಭವ  ಸುರಸಂಸೇವಿತಾಪದ ರಾಮ ಹರೇ|  ಕಂಸಾದ್ಯಸುರರ ಧ್ವಂಸಗೈದ  ಯದುವಂಶೋದ್ಭವ ಶ್ರೀಕೃಷ್ಣ ಹರೇ ||೧|| ಮುನಿಮಕರಕ್ಷಕ ಧನುಜರಶಿಕ್ಷಕ  ಫಣಿಧರಸನ್ನುತ ರಾಮ ಹರೇ|  ಘನ ವರ್ಣಾಂಗ ಸುಮನಸರೊಡೆಯ  ಶ್ರೀವನಜಾಸನಪಿತ ಕೃಷ್ಣ ಹರೇ ||೨|| ತಾಟಕೆ ಖರ ಮಧುಕೈಟಭಾರಿ  ಪಾಪಾಟವಿ ಸುರಮುಖ ರಾಮ ಹರೇ|  ಆಟದಿ ಫಣಿ ಮ್ಯಾಲ್ನಾಟ್ಯವನಾಡಿದ  ಖೇಟವಾಹ ಶ್ರೀ ಕೃಷ್ಣ ಹರೇ ||೩||  ಶಿಲೆಯ ಪಾದ ರಜದಲಿ ಸ್ತ್ರೀ ಮಾಡಿದ  ಸುಲಲಿತ ಮಹಿಮ ಶ್ರೀರಾಮ ಹರೇ|  ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ  ಚೆಲುವೆ ಮಾಡಿದ ಶ್ರೀಕೃಷ್ಣ ಹರೇ ||೪||  ಹರಧನು ಭಂಗಿಸಿ ಹರುಷದಿ  ಜಾನ್ಹಕಿ ಕರವಪಿಡಿದ ಶ್ರೀರಾಮ ಹರೇ|  ಸಿರಿ ರುಕ್ಮಿಣಿಯನು ತ್ವರದಲ್ಲೇ ವರಿಸಿದ  ಕರುಣಾಕರ ಶ್ರೀಕೃಷ್ಣ ಹರೇ ||೫||  ಜನಕಪೇಳೆ ಲಕ್ಷ್ಮಣ ಸೀತಾಸಹ  ವನಕೆ ತೆರಳಿದ ಶ್ರೀರಾಮ ಹರೇ|  ವನಕೆ ಪೋಗಿ ತನ್ನನುಗರೊಡನೆ  ಗೋವನು ಪಾಲಿಪ ಶ್ರೀಕೃಷ್ಣ ಹರೇ ||೬|| ಚದುರೆ ಶಬರಿಯಿತ್ತ ಬದರಿಯ ಫಲವನ್ನು  ಮುದದಿ ಸೇವಿಸಿದ ಶ್ರೀರ...

ಚರಣ ಕಮಲವನು ನೆನೆವೆ | ಹಯವದನ | Charana Kamalavanu Neneve | Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಚರಣ ಕಮಲವನು ನೆನೆವೆ ನಾ ನಿನ್ನ || ಪ || ಚರಣ ಕಮಲವನು ನೆನೆವೆ ನಾ  ದುರಿತ ರಾಶಿಗಳ ಸಂಹರಿಪನ || ಅ.ಪ || ಶ್ರುತಿಯನುದ್ಧರಿಸಿದುದಾರನ  ಸಿಂಧು ಮಥನಕೊದಗಿದ ಗಂಭೀರನ ಕ್ಷಿತಿಯನ್ನೆತ್ತಿದ ಬಲುಧೀರನ  ಶಿಶು ಸ್ತುತಿಸೆ ಕಂಭದಿ ಬಂದ ವೀರನ || ೧ ||    ಇಂದ್ರನ ಧಾರೆಯ ನಿಲಿಸಿದನ್ನ  ತನ್ನ ತಂದೆಯ ಮಾತು ಸಲಿಸಿದನ್ನ ಕಂದರ ದಶನ ಸೋಲಿಸಿದನ್ನ  ವ್ರಜ ದಿಂದುಮುಖಿಯರ ಪಾಲಿಸಿದನ್ನ || ೨ || ವಧುಗಳ ವ್ರತವ ಖಂಡಿಸಿದನ್ನ  ದುಷ್ಟರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ  ಹಯವದನ ಪೆಸರ ಕೊಂಡುದಿಸಿದನ್ನ || ೩ ||   caraNa kamalavanu neneve nA ninna ||pa|| caraNa kamalavanu neneve nA durita rASigaLa saMharipana ||apa|| SrutiyanuddharisidudArana  siMdhu mathanakodagida gaMBIrana kShitiyannettida baludhIrana  SiSu stutise kaMBadi baMda vIrana ||1|| iMdrana dhAreya nilisidanna  tanna taMdeya mAtu salisidanna kaMdara daSana sOlisidanna  vraja diMdumuKiyara pAlisidanna ||2|| vadhugaLa vratava KaMDisidanna  duShTarudisalu tudiya tu...

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಾರಾಯಣ ನಾರಾಯಣ ಗೋವಿಂದ ಹರೀ  ನಾರಾಯಣ ನಾರಾಯಣ ಗೋವಿಂದ ||ಪ||  ನಾರಾಯಣ ಗೋವಿಂದ ಗೋವಿಂದ ಮುಕುಂದ ಪರತರ ಪರಮಾನಂದ ||ಅಪ||  (ಬದರಿ, ಪಂಢರಿ, ಉಡುಪಿ, ರಂಗ, ತಿರುಮಲ, ವೆಂಕಟ) ಮೊದಲು ಮತ್ಸ್ಯನಾಗಿ ಉದಿಸಿ ಸೋಮನ ಸದೆದು ವೇದಗಳ ತಂದ |  ಮಂದರಧರ ತಾ ಸಿಂಧುವಿನೊಳಮೃತ ತಂದು ಭಕ್ತರಿಗೆ ಉಣಲೆಂದ  ನಾರಾಯಣ ನಾರಾಯಣ ಗೋವಿಂದ  ಹರಿ ನಾರಾಯಣ ನಾರಾಯಣ ಗೋವಿಂದ  ಮತ್ಸ್ಯ ನಾರಾಯಣ ನಾರಾಯಣ ಗೋವಿಂದ  ಕೂರ್ಮ ನಾರಾಯಣ ನಾರಾಯಣ ಗೋವಿಂದ  ಭೂಮಿಯ ಕದ್ದಾ ಖಳನ ಮರ್ದಿಸಿ ಆ ಮಹಾಸತಿಯೆಳ ತಂದ  ದುರುಳ ಹಿರಣ್ಯನ ಕರುಳು ಬಗೆದು ತನ್ನ ಕೊರಳೊಳಗಿಟ್ಟಾ ಬಗೆಯಿಂದಾ  ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ನಾರಾಯಣ ಗೋವಿಂದ  ವರಾಹ ನಾರಾಯಣ ನಾರಾಯಣ ಗೋವಿಂದ  ನರಹರಿ ನಾರಾಯಣ ನಾರಾಯಣ ಗೋವಿಂದ  ಪುಟ್ಟನಾಗಿ ಮಹಿಕೊಟ್ಟ ಬಲಿಯ ತಲೆ ಮೆಟ್ಟಿ ತುಳಿದ ದಯದಿಂದ  ಧಾತ್ರಿಯೊಳು ಮುನಿ ಪುತ್ರನಾಗಿ ಬಂದು ಕ್ಷತ್ರಿಯರೆಲ್ಲರ ಕೊಂದ  ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ನಾರಾಯಣ ಗೋವಿಂದ  ವಾಮನ ನಾರಾಯಣ ನಾರಾಯಣ ಗೋವಿಂದ  ಭಾರ್ಗವ ನಾರಾಯಣ ನಾರಾಯಣ ಗೋವಿಂದ  ಮಡದಿಗಾಗಿ ಸರಗಡಲನೆ ಕಟ್ಟಿ ಹಿಡಿದು ರಾವಣನ ಕೊಂದ  ಗೋಕುಲದಿ ಪುಟ್ಟಿ ಗೋವಳ...

ನೂರೆಂಟು ನೆನೆದು ಫಲವೇನು | ಹಯವದನ | Noorentu Nenedu Phalavenu | Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಾ  ಹರಿಯನು ಒಮ್ಮೆ ನೆನೆ ಮನವೆ  ||ಪ|| ಧನದಾಸೆಗಳಲದಿರು ಭವದುಃಖ ಬಳಲದಿರು  ಜನಾರ್ದನನ ಮರೆಯದಿರು ಈ ತನುವ ಪೊರೆಯದಿರು ||  ಅನಘ ಜನರ ಒಡನಾಡು ದಿನ ದಿನ ಶುಭವ ಕೊಡು ಇನಿತು ಜನುಮವೇ ಸಾಕು ಇನ್ನು ಮುಕುತಿಯೆ ಬೇಕು ||೧|| ಸಾಕು ದುರ್ಜನರಾಟ ಸಾಕು ಸತಿಯರ ಬೇಟ ಸಾಕು ಸವಿ ಅನ್ನದೂಟ ಸಾಕೂ ಘನಕೂಟ || ಸಾಕು ದೇಶಕೆ ಓಟ ಸಾಕುಸಲೆ ಭವನೋಟ ಸಾಕದೆಲ್ಲ ಖಳಕೂಟ ಸಾಕೂ ಮನೆಮಠ ||೨|| ಕೇಳು ಹರಿ ಮಹಿಮೆಯನು ಪೇಳು ಹರಿನಾಮವನು ಬಾಳು ಬಂದಷ್ಟರಿಂದ ತಾಳು ಹಸಿ ತೃಷೆಗಳ || ಶ್ರೀ ಲಲನೆಯಾಳ್ದ ಹಯವದನ ಸಿರಿ ನರಹರಿಯ ಆಳು ತನವನು ಬೇಡು ಕೀಳು ಬುದ್ದಿಯ ದೂಡು ||೩|| nUreMTu nenedu PalavEnu IrELu jagadoDeyA  hariyanu omme nene manave  ||pa|| dhanadAsegaLaladiru BavaduHKa baLaladiru  janArdanana mareyadiru I tanuva poreyadiru ||  anaGa janara oDanADu dina dina SuBava koDu initu janumavE sAku innu mukutiye bEku ||1|| sAku durjanarATa sAku satiyara bETa sAku savi annadUTa sAkU GanakUTa || sAku dESake OTa sAkusale BavanOTa sAkadella KaLakUTa sAkU manemaTha ||2|| kELu hari...

ಹೆಜ್ಜೆ ನೋಡೋಣ ಬಾರೆ | ಹಯವದನ | Hejje Nodona Baare | Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನ ಗೆಜ್ಜೆಯ ಕಾಲಿನ ಅರ್ಜುನಸಾರಥಿ ಮೂರ್ಜಗದೊಡೆಯನ || ಪ || ಮಚ್ಚನಾಗಿ ವೇದವ ತಂದವನಂತೆ ಕೂರ್ಮನಾಗಿ ಭೂಮಿಯ ಪೊತ್ತವನಂತೆ ವರಹನರಹರಿಯಾಗಿ ದುರುಳರ ಸೀಳಿದ ಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ || ೧ || ಮಾತೃದ್ರೋಹವ ಮಾಡಿದ ಪರಶುರಾಮನ ಪಿತೃವಾಕ್ಯವ ಸಲಿಸಿದ ಶ್ರೀ ರಾಮನ್ನ ಮಂದೆಯ ಕಾಯುತ್ತ ಮೈಯೆಲ್ಲ ಧೂಳ್ಗಳು ಚೆಂದದಿಂದ ಕೊಳನೂದುತ ಬರುತಿಹ || ೨ || ಸೂರ್ಯಕೋಟಿ ಪ್ರಕಾಶದಿ ಮೆರೆವವನ ಚಂದ್ರಕೋಟಿ ಶೀತಲದಿಂದ ಬರುವವನ ಕೃಷ್ಣಾವತಾರನ ಬೌದ್ಧಸ್ವರೂಪನ  ಹಯವನೇರಿದ ಕಲ್ಕಿ ಹಯವದನನ ದಿವ್ಯ || ೩ || hejje nODONa baare gOpaalakRuShNana gejjeya kaalina arjunasaarathi mUrjagadoDeyana || pa || maccanaagi vEdava taMdavanaMte kUrmanaagi bhUmiya pottavanaMte varahanarahariyaagi duruLara sILida celuva rUpadi daanava bEDi tuLida puTTa || 1 || maatRudrOhava maaDida parashuraamana pitRuvaakyava salisida shrI raamanna maMdeya kaayutta maiyella dhULgaLu ceMdadiMda koLanUduta barutiha || 2 || sooryakOTi prakaashadi merevavana chaMdrakOTi shItaladiMda baruvavana kRuShNaavataarana bouddhasvarUpana...

ಸಾಗಿ ಬಾ ಜಗದೇಕ ದೊರೆಯೇ | ಶ್ರೀ ಪ್ರಸನ್ನ ವೇಂಕಟ | Saagi Baa Jagadeka Doreye | Sri Prasanna Venkata

Image
  ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಸಾಗಿ ಬಾ ಜಗದೇಕ ದೊರೆಯೇ  ಯೋಗಾ ನರಸಿಂಹ ಪ್ರಭುವೇ || ಪ || ಯೋಗಿಗಳರಸನೆ ಭಾಗವತ ಜನಸಾಗರ  ನಿನ್ನಾಗಮನ ಕಾಯುತಿದೆ || ಅಪ || ಭಸಿತ ಚಂದನ ತಿಲಕಾಲಂಕೃತ  ಶಶಿಸೂರ್ಯಾಭರಣ ತೋರಣ ಭೂಸುರರೆಲ್ಲ ಸುಭಾವ ಸ್ವರದಲಿ  ಭಾಸಿಸುತಿರೆ ನಿಮ್ಮ ನಾಮ ವಿಶೇಷಣ  ವಾಸುಕಿಶಯನ ವಿಶೇಷ ರಥವನೇರಿ  ದಾಸವರ್ಗದಭಿಲಾಷೆ ನೀಡು ಬಾ || ೧ || ಪ್ರತ್ಯಹಂ ಚರ ಪ್ರಪತ್ತಿ ಭಕುತಿಪಥ  ಸತ್ಯಂವದ ಧರ್ಮಾಚರಣೆ ಸುಖ  ನಿತ್ಯ ನಿರಂತರ ಮುಕುತಿ ಜ್ಞಾನವ  ಭೃತ್ಯರಿಗಿತ್ತು ಸಲಹೋ ಶ್ರೀನಿಧಿ ಸತ್ಯ ದೇವಪಿತ ಸರ್ವೋತ್ತಮ ನೀ  ಪ್ರತ್ಯಕ್ಷವಾಗಿ ರಥೋತ್ಸವದಲ್ಲಿ || ೨ || ಸಾಸಿರ ನಾಮಗಳ ಘೋಷಣೆ ಕೂಗುತ ಲೇಸು ತಾಳೆ ಮದ್ದಾಳೆ ಕಂಸಾಳೆ ಮೊಳಗಿರೆ ಅಸುರನ ವಧಿಸಿ ಪ್ರಹ್ಲಾದನ ಸಲಹಿದ ಶೇಷಶಯನ ನಿನ್ನಾಸರೆ ನೀಡು ಬಾ ದೋಷ ವಿವರ್ಜಿತ ದಾಸರ ರಕ್ಷಕ ಶ್ರೀಶ್ರೀಪ್ರಸನ್ನ ವೆಂಕಟ ನಾಯಕ || ೩ || saagi baa jagadEka doreyE  yOgaa narasiMha prabhuvE || pa || yOgigaLarasane bhaagavata janasaagara  ninnaagamana kaayutide || apa || bhasita caMdana tilakaalaMkRuta  shashisUryaabharaNa tOraNa bhUsurarella subhaava svaradali  bhaasisutire nimma naama vish...

ಧವಳ ಗಂಗೆಯ ಗಂಗಾಧರ | ಹಯವದನ | Dhavala Gangeya Ganga | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಧವಳ ಗಂಗೆಯ ಗಂಗಾಧರ ಮಹಾಲಿಂಗ ||ಪ|| ಮಾಧವನ ತೋರಿಸಯ್ಯ ಗುರು ಕುಲೋತ್ತುಂಗ ||ಅಪ|| ಅರ್ಚಿಸಿದವರಿಗಭೀಷ್ಟೆಯ ಕೊಡುವ  ದುಶ್ಚರಿತರನ್ನೆಲ್ಲವ ದೂರದಲ್ಲಿಡುವ || ಹೆಚ್ಚಿನ ಅಘಗಳ ತರಿದು ಬಿಸಾಡುವ ಅಚ್ಯುತಗಲ್ಲದ ಅಸುರರ ಬಡಿವ ||೧|| ಮಾರನ್ನ ಗೆಲಿದ ಮನೋಹರ ಮೂರ್ತಿ  ಸಾರ ಸಜ್ಜನರಿಗೆ ಸುರಚಕ್ರವರ್ತಿ || ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ಥಿ ||೨|| ಚೆನ್ನ ಪ್ರಸನ್ನ ಶ್ರೀ ಹಯವದನನ್ನ  ಅನುದಿನ ನೆನೆವಂತೆ ಮಾಡೋ ನೀ ಎನ್ನ || ಅನ್ಯರನರಿಯೆನು ಗುರುವೆಂಬೆ ನಿನ್ನ ಇನ್ನಾದರೂ ಹರಿಯ ತೋರೋ ಮುಕ್ಕಣ್ಣ ||೩|| dhavaLa gaMgeya gaMgAdhara mahAliMga ||pa|| mAdhavana tOrisayya guru kulOttuMga ||apa|| arcisidavarigabhIShTeya koDuva  duScaritarannellava dUradalliDuva || heccina aGagaLa taridu bisADuva acyutagallada asurara baDiva ||1|| mAranna gelida manOhara mUrti  sAra sajjanarige suracakravarti || dhAruNiyoLage tuMbide nimma kIrti murAriya tOrisayya ninage SaraNArthi ||2|| chenna prasanna SrI hayavadananna  anudina nenevaMte mADO nI enna || anyaranariyenu guruveMbe...

ರಂಗ ನಿನ್ನ ಕೊಂಡಾಡುವ | ಜಗನ್ನಾಥವಿಠಲ | Ranga Ninna Kondaduva | Jagannatha Vithala

Image
  ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ  ಸಂಗ ಸುಖವನಿತ್ತು ಕಾಯೋ ಕರುಣಾ ಸಾಗರ  |ಪಾಂಡು|  ||ಪ|| ಅರಿಯರೊ ನೀನಲ್ಲದೆ ಬೇರನ್ಯ ದೇವರ ಮರೆಯರೋ |      ನೀ ಮಾಡಿದ ಅನಿಮಿತ್ತುಪಕಾರ |ಪಾಂಡು|  || ೧ || ತೊರೆಯರೋ ನಿನ್ನಂಘ್ರಿ ಸೇವ ಪ್ರತಿವಾಸರ   ಅರಿಯರೋ ಪರತತ್ವವಲ್ಲದ ಇತರ ವಿಚಾರ |ಪಾಂಡು|  || ೨ || ಮೂಕಬಧಿರರಂತಿಪ್ಪರೋನೋಳ್ಪ ಜನಕೆ |  ಕಾಕುಯುಕುತಿಗಳನ್ನವರು ತಾರರೋ ಮನಕೆ |ಪಾಂಡು|  || ೩ || ಸ್ವೀಕರಿಸರೋ ದೇವ ಅನರ್ಪಿತ ಒಂದು ಕಾಲಕ್ಕೆ |     ಆ ಕೈವಲ್ಯದ ಭೋಗ ಸುಖಗಳು ಅವರಿಗೆ ಬೇಕೇ |ಪಾಂಡು|  || ೪ ||    ಜಯಾಜಯಲಾಭಾಲಾಭ ಮಾನಾಪಮಾನ |  ಭಯಾಭಯ ಸುಖದುಃಖ ಲೋಷ್ಠ ಕಾಂಚನ |ಪಾಂಡು|  || ೫ ||  ಪ್ರಿಯಾಪ್ರಿಯ ನಿಂದಾಸ್ತುತಿಗಳೆಲ್ಲ ಅನುದಿನ | ಶ್ರೀಯರಸನ ಚಿಂತಿಸುವರೋ ನಿನ್ನ ಅಧೀನ |ಪಾಂಡು|  || ೬ ||   ಈಶಿತವ್ಯರೆಂಬೋರೆ ಏಕಾಂತ ಭಕ್ತರು |   ದೇಶ ಕಾಲೋಚಿತ ಧರ್ಮ ಕರ್ಮಾಸಕ್ತರು |ಪಾಂಡು|  || ೭ ||  ಆಶಾಕ್ರೋಧಲೋಭ ಮೋಹಪಾಶಮುಕ್ತರು | ಈ ಸುಜನರೆಲ್ಲಾ ಶಾಪಾನುಗ್ರಹಶಕ್ತರು |ಪಾಂಡು|  || ೮ ||   ಕಂಡ ಕಂಡಲ್ಲೆ...

ರಂಗ ನಿನಗಾರೇನೆಂದರು | ಹಯವದನ | Ranga Ninagarenu | Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ರಂಗ ನಿನಗಾರೇನೆಂದರು ಮರೆತು ನಿದ್ರೆಗೈದೆಯಾ ನೀ ಮಾಧವ ಸ್ವಾಮಿ || ಪ || ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದ ಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆ ಅಕ್ಕರದಿಂದಲಿ ಮಗನ ಅತಿಮುದ್ದನಾಡಿ ಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ || ೧ || ಹಳ್ಳಿಯ ಮಕ್ಕಳು ಎನ್ನ ಬೈದರಮ್ಮ ಕಳ್ಳನೆಂದು ಎನ್ನಕೂಡೆ ಆಡಲೊಲ್ಲರು ಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮ್ಮಯ್ಯ ಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ || ೨ || ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲ ಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರು ಮಗುವೆಂದೆನಿಸಿಕೊಂಡು ಮನೆಯೊಳಗಾಡೈ ಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ || ೩ || raMga ninagaarEneMdaru maretu nidregaideyaa nI maadhava svaami || pa || bikki bikkiyaLuta baMda gOpiya kaMda ukkihariva kaNNanIra toDedaLeshOde akkaradiMdali magana atimuddanaaDi makkaLa maaNikyave nI maneyoLagaaDai || 1 || haLLiya makkaLu enna baidaramma kaLLaneMdu ennakUDe ADalollaru mellane baiyutta baralu kallaliTTarammayya alliMdaMji aLuta naanu ODuta baMde || 2 || baagila gollaru gOpagOpiyarella hagalugaLLa haalu beNNe cOraneMdaru maguveMdenisikoMDu maneyoLagaaD...

ನಮಸ್ತೇ ವಿಮಲೆ ಕೋಮಲೆ | ಹಯವದನ | Namaste Vimale Komale | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಮಸ್ತೇ ವಿಮಲೆ ಕೋಮಲೆ ರಮಾದೇವಿ ||ಪ|| ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವ | ಧರೆಯೊಳು ವರ್ಣಿಪ ಕವಿಯುದಾವ || ಸ್ವರಮಣನೆನಿಪ ರಮಣನ ಉರದೊಳೆಂದೆಂದು | ಅರಮನೆಯ ಮಾಡಿ ಬಾಪುರೆ ಮೆರೆದವಳೆ ||೧|| ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ | ನಿನ್ನ ತಾರುಣ್ಯ ಲಾವಣ್ಯಗಳನು || ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ | ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಸದನೆ ||೨|| ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು | ಅನಂತಕರ ವಕ್ತ್ರನೇತ್ರಂಗಳನು || ಪೂರ್ಣ ಹಯವದನ ಕೈಗೊಂಡ ನಿನ್ನಯ ಗಂಡ | ಸ್ವರ್ಣಸಮವರ್ಣೆ ಕರ್ಣಾಯತಾಕ್ಷಿ ||೩|| namastE vimale kOmale ramAdEvi ||pa|| taruNi SirOmaNi ninna SIla sauMdaryava | dhareyoLu varNipa kaviyudAva || svaramaNanenipa ramaNana uradoLeMdeMdu | aramaneya mADi bApure meredavaLe ||1|| tanna maiyiMda makkaLa sRujisi yugayugadi | ninna tAruNya lAvaNyagaLanu || mannisi poreva hariya paTTada ramaNi | mAnye caitanye lAvaNye guNasadane ||2|| ninnaMgavappalu nODalu muKava cuMbisalu | anaMtakara vaktranEtraMgaLanu || pUrNa hayavadana kaigoMDa ninnaya gaMDa | svarNasamavarNe karNAyatAkShi ||3||

ಲಕ್ಷುಮಿನಾರಾಯಣ ಜಯ | ಹಯವದನ | Lakshumi Narayana Jaya | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಲಕ್ಷುಮಿ ನಾರಾಯಣ ಜಯ  ಲಕ್ಷುಮಿ ನಾರಾಯಣ ||ಪ|| ಲಕ್ಷುಮಿ ನಾರಾಯಣ ನಮ್ಮ  ರಕ್ಷಿಸೋ ನಾರಾಯಣ ||ಅಪ|| ಸರ್ವಲೋಕ ಶರಣ್ಯ ಶಾಶ್ವತ  ಸರ್ವ ವಂದಿತ ಪಾದ ದಾನವ || ಗರ್ವಹರಣ ಗದಾಧಾರಣ  ಪರ್ವತಾರಿ ವರಪ್ರದ ||೧|| ನಂಬಿಕೊಂಡಿಹೆ ನಿನ್ನ ದಿವ್ಯ  ಪದಾಂಬುಜಗಳನು ಸರ್ವಕಾಲದಿ || ಅಂಬುಜಾಲಯೆ ಸಹಿತ  ಮನದೊಳಗಿಂಬುಗೊಳು ಕಮಲಾಂಬಕ ||೨|| ಆರು ಸಂಖ್ಯೆಯ ಕಳ್ಳರೆನ್ನನು  ಗಾರು ಮಾಡುವರಾದರಿಂದತಿ || ಧೀರ ನಿನ್ನ ಪದಾರವಿಂದಕೆ  ದೂರುವೆನು ರಘುವೀರನೇ ||೩|| ದುರ್ಮತಿಗಳಾದಸುರ ಹರಣಕೆ  ಬ್ರಹ್ಮಗರ್ಭನು ಬಂದು ತುತಿಸಲು || ಧರ್ಮ ಸಂಸ್ಥಾಪಿಸುತತಿಶುಭ  ಕರ್ಮ ತೋರುವ ಕರುಣಿಯೇ ||೪|| ಸಪ್ತ ಋಷಿಗಳ ಕೂಡಿಕೊಂಡತಿ  ಭಕ್ತಿಯಿಂದಲಿ ನಿನ್ನ ಭಜಿಸಿದ || ಸತ್ಯವ್ರತನಿಗೆ ಸಕಲ ಶ್ರುತಿಗಳ  ತತ್ತ್ವ ತಿಳಿಸಿದ ಮತ್ಸ್ಯನೇ ||೫|| ಅಮರ ದೈತ್ಯರು ಅಂಬುನಿಧಿಯೊಳು  ಭ್ರಮಣಗೊಳಿಸಲು ಮುಳುಗಿಕೊಂಡಿಹ  ಅಮಿತಗುರು ಮಂದರವ ಧರಿಸುವ  ಅಮೃತರಸ ತಂದಿತ್ತನೆ ||೬|| ಧಾತ್ರಿಯನು ಕದ್ದೊಯ್ದ ಹಾಟಕ ನೇತ್ರನ ತೆಗೆದು ಬಿಸುಟು ವಿಧಾತೃ ನಾಸಾಕುಹರ ಜನಿತ ಪವಿತ್ರ  ಯಜ್ಞಾವರಹನೇ ||೭|| ಹುಡುಗ ಪೇಳಿದ ಮಾತಿನಿಂದ  ಘುಡು ಘುಡಿಸಿ ಕಂಭದೊಳು ಬಂದ || ಸಿಡಿಲಿನಂತಿಹ ನಖದಿ ದೈತ್ಯನ  ಒಡಲ ಬಗೆದ ಕ...

ಮುಖ್ಯಪ್ರಾಣ ಸುಳಾದಿ | ಕೋತಿಯಾದರೆ ಬಿಡೆನೋ | ವಿಜಯ ವಿಠಲ | Mukhyaprana Suladi | Kotiyadare | Vijaya Vittala

Image
  ಸಾಹಿತ್ಯ : ಶ್ರೀ ವಿಜಯ ದಾಸರು  Kruti: Sri Vijaya Dasaru ಕೋತಿಯಾದರೆ ಬಿಡೆನೋ ಬಲುಪರಿ ಭೂತಳದೊಳು ಪಾರ‍್ಯಾಡಲು ಬಿಡೆನೊ ಖ್ಯಾತಿ ತೊರೆದು ಕಚ್ಚುಟಹಾಕಲು ಬಿಡೆನೊ ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ ಭೀತಿ ಬೀರಲು ಬಿಡೆನೊ ಮಾತು ಮಾತಿಗೆ ಹಲ್ಲು ತೋರಲು ಬಿಡೆನೊ ಗಾತುರ ಗಗನಕ್ಕೆ ಬೆಳೆಸಲು ಬಿಡೆನೊ ಕೋತಿ ಸೇವಿಸಲು ಬಿಡೆನೊ ಆತುರದಲಿ ವನಧಿ ಲಂಘಿಸಿದರೆ ಬಿಡೆ ಆ ತರುಗಳ ಕಿತ್ತಲು ಬಿಡೆನೊ ವೀತಿಹೋತ್ರನ ಬಾಲದಲ್ಲಿ ಇಟ್ಟರೆ ಬಿಡೆ ಜಾತಿ ಧರ್ಮವ ಬಿಟ್ಟರೆ ಬಿಡೆನೊ ಈ ತೆರದಲಿ ನೀನು ಇದ್ದರೇನಯ್ಯಾ ಬೆ - ನ್ನಾತು ಕೇಳುವುದು ನಾ ಬಿಡಬಲ್ಲೆನೇ ತಾತಾ ಇನ್ನಿದರಿಂದ ಆವುದಾದರು ಬರಲಿ ದಾತಾ ಮತ್ತಿದರಿಂದ ಏನಾದರಾಗಲಿ ಸೋತು ಹಿಂದೆಗೆದು ಪೋದರೆ ನಿನ್ನ ಪದದಾಣೆ ಯಾತಕ್ಕೆ ಸಂಶಯವೊ ಬಿಡೆನೊ ಬಿಡೆನೊ ಖ - ದ್ಯೋತ ಮಂಡಲ ಪೋಗಲು ಬಿಡೆನೊ ಮಾತು ಪೊಳ್ಳಾದರೆ ನೂರೊಂದು ಕುಲ ಎನ್ನ ಗೋತ್ರದವರಿಗೆ ಗತಿ ಎಲ್ಲದೋ ವಾತನ್ನ ಮಗ ಆತನ್ನ ರೂಪವ ಗಾತುರದಲ್ಲಿ ನಿನ್ನೊಳಗೆ ತೋರೋ ಜೋತಿರ್ಮಯ ರೂಪ ವಿಜಯವಿಠ್ಠಲರೇಯನ  ದೂತ ದುರ್ಜನಹಾರಿ ದುಃಖನಿವಾರಿ || ೧ || ಮಟ್ಟತಾಳ  ಭೂತಳದೊಳಗಿದ್ದ ಭೂಮಿಸುತ್ತಲು ಬಿಡೆ ಭೀತಿನಾಮವನ್ನು ಇಟ್ಟುಕೊಂಡರೆ ಬಿಡೆ ನೀ ತಿರಿದುಂಡರೆ ಬಿಡೆನೋ ಬಿಡೆನೊ ಆ - ರಾತಿಗಳಿಗೆ ಸೋತು ಅಡವಿ ಸೇರಲು ಬಿಡೆನೊ ಸೋತುಮತನ ಬಿಟ್ಟು ಅಡಗಿ ಮಾಡಲು ಬಿಡೆ ಘಾತಕ ನೀನಾಗಿ ಕುಲವ ಕೊಂದರೆ ಬಿಡೆ ಮಾತುಗಾರಿಕೆಯಿಂದ ಯತಿಯಾದರೆ ಬಿಡೆನೊ ಪ್ರೀತ ಸ...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru