ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವೃಂದಾವನವೇ ಮಂದಿರ | ಪುರಂದರವಿಠಲ | Vrundavanave Mandira | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ ||ಪ||
ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ||ಅಪ||

ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ 
ತುಳಸಿ ದರ್ಶನದಿಂ ದುರಿತಗಳೆಲ್ಲವು ದೂರವಾಗುವವು ಕೇಳಿ
ತುಳಸಿ ಸ್ಪರ್ಶವ ಮಾಡಿ ದೇಹ ಪಾವನವೆಂದು ತಿಳಿದುದಿಲ್ಲವೇ ಕೇಳಿ 
ತುಳಸಿ ಸ್ಮರಣೆ ಮಾಡಿ ಸಕಲೇಷ್ಟವ ಪಡೆದು ನೀವು ಸುಖದಲಿ ಬಾಳಿ ||೧||

ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರು ಲೋಕವಶವಾಹುದು 
ಮಾಲೆಗಳನು ಕೊರಳೊಳಿಟ್ಟ ಮನುಜಗೆ ಮುಕ್ತಿ ಮಾರ್ಗವ ನೀವುದು
ಕಾಲಕಾಲಗಳಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟು ಹೋಗುವುದು
ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವುದು ||೨||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ
ಪರಮ ಭಕ್ತರ ಘೋರ ಪಾಪವನು ತರಿದು ಪಾವನ ಮಾಡುವ ಶ್ರೀ ತುಳಸೀ
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ಶ್ರೀ ತುಳಸೀ 
ಪುರಂದರ ವಿಠಲನ ಚರಣ ಕಮಲಗಳ ಸ್ಮರಣೆ ಕೊಡುವ ಶ್ರೀ ತುಳಸಿ ||೩|| 

vRuMdaavanavE maMdiravaagiha iMdire shrI tuLasi ||pa||
naMda naMdana mukuMdage priyaLaada caMdada shrI tuLasi ||apa||

tuLasiya vanadali hari ihaneMbuda shRuti saarutide kELi 
tuLasi darshanadiM duritagaLellavu dUravaaguvavu kELi
tuLasi sparSava maaDi dEha paavanaveMdu tiLidudillavE kELi 
tuLasi smaraNe maaDi sakalEShTava paDedu nIvu sukhadali baaLi ||1||

mUla mRuttikeyanu dharisida maatradi mUru lOkavashavaahudu 
maalegaLanu koraLoLiTTa manujage mukti maargava nIvudu
kaalakaalagaLali maaDida duShkarma kaLedu bisuTu hOguvudu
kaalana dUtara aTTi kaivalyava lIleya tOruvudu ||2||

dhareyoLu sujanara mareyade salahuva varalakShmI shrI tuLasi
parama bhaktara GOra paapavanu taridu paavana maaDuva shrI tuLasI
siri aayu putraadi saMpadagaLanittu haruShagoLipa shrI tuLasI 
puraMdara viThalana caraNa kamalagaLa smaraNe koDuva shrI tuLasi ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru