ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜನುಮ ಜನುಮದೊಳು | ಸಿರಿ ಕೃಷ್ಣ | Januma Janumadolu | Sri Vyasarajaru


ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti: Sri Vyasarajaru (Sri Krishna)


ಜನುಮ ಜನುಮದೊಳು ಕೊಡು ಕಂಡ್ಯಾ ಹರಿಯೇ ||ಪ||

ಅನಿಮಿತ್ತ ಬಂಧು ಶ್ರೀಕೃಷ್ಣ ದಯದಿಂದಲೆನಗೆ ||ಅಪ||

ಮೆರೆವ ಊರ್ಧ್ವ ಪುಂಡ್ರ ಎರಡಾರು ನಾಮವು
ಕೊರಳೊಳು ತುಳಸಿಯ ವನಮಾಲೆಯು
ಮೆರೆವ ಶಂಖ ಚಕ್ರ ಭುಜದೊಳೊಪ್ಪುವ ನಿಮ್ಮ
ಸ್ಮರಿಸುತ ಹಿಗ್ಗುವ ವೈಷ್ಣವ ಜನುಮವ ||೧||

ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮ
ಹರ ಇಂದ್ರಾದ್ಯರು ತವ ಸೇವಕರು
ವರತಾರತಮ್ಯ ಪಂಚ ಭೇದ ಸತ್ಯವೆಂದು
ನೆರೆ ಪೇಳುವ ವಾಯು ಮತದ ಸುಜ್ಞಾನವ ||೨||  

ಸಕಲ ವಿಭುದೋತ್ತಮರಲ್ಲಿ ನಮ್ರತೆಯು
ಸುಖತೀರ್ಥರಲ್ಲಿ ಮುಖ್ಯ ಗುರು ಭಾವನೆಯು
ಮುಕುತಿ ಪ್ರದಾಯಕ ಸಿರಿಕೃಷ್ಣ ನಿನ್ನಲ್ಲಿ
ಅಕಳಂಕವಾದ ನವವಿಧ ಭಕುತಿಯ ||೩||

januma janumadoLu koDu kaMDyA hariyE ||pa||

animitta baMdhu shrIkRuShNa dayadiMdalenage ||apa||

mereva Urdhwa puMDra eraDaaru naamavu
koraLoLu tuLasiya vanamaaleyu
mereva shaMkha chakra bhujadoLoppuva nimma
smarisuta higguva vaiShNava janumava ||1||

hariye sarvOttama raaNi lakumi bomma
hara iMdraadyaru tava sEvakaru
varataaratamya paMcha bhEda satyaveMdu
nere pELuva vaayu matada suj~jAnava ||2||  

sakala vibhudOttamaralli namrateyu
sukhatIrtharalli mukhya guru bhaavaneyu
mukuti pradaayaka sirikRuShNa ninnalli
akaLaMkavaada navavidha bhakutiya ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru