ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರೋ ಮನೆಗೆ ಗೋವಿಂದ | ರಂಗವಿಠಲ | Baaro Manege Govinda | Sri Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ ತೋರೋ ಎನಗೆ ಮುಕುಂದ |
ನಲಿದಾಡು ಮನದಲಿ ಮಾರಪಿತ ಆನಂದ ಆನಂದ ಕಂದ || ಪ ||

ಚಾರು ತರ ಶರೀರ ಕರುಣವಾರಿನಿಧಿ ಭವ ಘೋರನಾಶನ| 
ನೀರಜಾಸನ ವಂದ್ಯ ನಿರ್ಜರ ಸಾರ ಸದ್ಗುಣ ಹೇ ರಮಾಪತೇ || ಅಪ ||

ನೋಡು ದಯದಿಂದೆನ್ನ ಕರಪದುಮ ಶಿರದಲಿ ನೀಡು ಭಕ್ತ ಪ್ರಸನ್ನ 
ನಲಿದಾಡು ಮನದಲಿ ಬೇಡಿಕೊಂಬೆನು ನಿನ್ನ ಆನಂದ ಘನ್ನ | 
ಮಾಡದಿರು ಅನುಮಾನವನು ಕೊಂಡಾಡುವೆನು ತವ ಮಹಿಮೆಗಳನು| ಜೋಡಿಸುವೆ
ಕರಗಳನು ಚರಣಕೆ ಕೂಡಿಸೋ ತವ ದಾಸ ಜನರೊಳು || ೧ ||

ಹೇಸಿ ವಿಷಯಗಳಲ್ಲಿ ತೊಳಲಾಡುತ ಬಲು ಕ್ಲೇಶ ಪಡುವುದ ಬಲ್ಲಿದನ
ಯುವತಿಗಳ ಸುಖಲೇಸು ಎಂಬುದ ಕೊಲ್ಲಿ ಆಸೆ ಬಿಡಿಸಿಲ್ಲಿ| 
ಏಸು ಜನ್ಮದ ದೋಷದಿಂದಲಿ ಈಸುವೆನು ಇದರೊಳಗೆ ಎಂದಿಗೂ| 
ಮೋಸವಾಯಿತು ಆದುದಾಗಲಿ ಶ್ರೀಶ ನೀ ಕೈ ಬಿಡದೆ ರಕ್ಷಿಸು || ೨ ||

ನೀನೇ ಗತಿ ಎನಗಿಂದು ಉದ್ಧರಿಸೋ ಬೇಗನೇ ದೀನ ಜನರಿಗೆ ಬಂಧು | 
ನಾ ನಿನ್ನ ಸೇವಕ ಶ್ರೀನಿವಾಸ ಎಂದೆಂದು ಕಾರುಣ್ಯ ಸಿಂಧು | 
ಪ್ರಾಣಪತಿ ಹೃದಯಾಬ್ಜ ಮಂಟಪ ಸ್ಥಾನದೊಳಗಭಿ ವ್ಯಾಪ್ತ ಚಿನ್ಮಯ |
ಧ್ಯಾನ ಗೋಚರನಾಗು ಕಣ್ಣಿಗೆ ಕಾಣುವೆ ಶ್ರೀ ರಂಗವಿಠಲ || ೩ ||

bArO manege gOviMda ninnaMGri kamalava tOrO enage mukuMda |
nalidADu manadali mArapita AnaMda AnaMda kaMda || pa ||

chAru tara SarIra karuNavArinidhi Bava GOranASana| 
nIrajAsana vaMdya nirjara sAra sadguNa hE ramApatE || apa ||
 
nODu dayadiMdenna karapaduma Siradali nIDu Bakta prasanna 
nalidADu manadali bEDikoMbenu ninna AnaMda Ganna | 
mADadiru anumAnavanu koMDADuvenu tava mahimegaLanu| jODisuve
karagaLanu caraNake kUDisO tava dAsa janaroLu || 1 ||
 
hEsi viShayagaLalli toLalADuta balu klESa paDuvuda ballidana
yuvatigaLa suKalEsu eMbuda kolli Ase biDisilli| 
Esu janmada dOShadiMdali Isuvenu idaroLage eMdigU| 
mOsavAyitu AdudAgali SrISa nI kai biDade rakShisu || 2 ||
 
nInE gati enagiMdu uddharisO bEganE dIna janarige baMdhu | 
nA ninna sEvaka SrInivAsa eMdeMdu kAruNya siMdhu | 
prANapati hRudayAbja maMTapa sthAnadoLagaBi vyApta cinmaya |
dhyAna gOcaranAgu kaNNige kANuve SrI raMgaviThala || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru