ರಾಜ ಬೀದಿಯೊಳಗಿಂದಾ
ಕಸ್ತೂರಿ ರಂಗಾ,
ತೇಜನೇರಿ ಮೆರೆದು ಬಂದಾ |ಪ|
ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ|
ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯೂ|
ವಿಸ್ತರದಿ ಭೂಸುರರು ಸುತ್ತು ಗಟ್ಟಿ ನಿಂತಿರಲು|
ಮತ್ತೆ ನಮ್ಮಳಂತು ತೇಜ ಮೆಲ್ಲನೆ ನಡೆಸುತ್ತಾ ಜಾಣ |೧|
ತಾಳ ಶಂಖ ಭೇರಿ ತಂಬೂರಿ ಮೊದಲಾದ|
ಮೇಲು ಪಂಚಾಂಕಗಳೆಲ್ಲ ಹೊಗಳಿ ಹೊಗಳಲು|
ಗಾಳಿ ಗೋಪುರದ ಮುಂದೆ ದಾಳಿ ಮಾಡುವಂತೆ ಸುತ್ತು|
ಧೂಳಿಯನೆಬ್ಬಿಸಿ ವೈಯ್ಯಾಳಿಯನಿಕ್ಕುತ ಜಾಣ |೨|
ವೇದ ಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು|
ಮೋದದಿಂದ ಗಾಯಕರು ಮೈರಿ ಪಾಡಲು|
ಹಾದಿ ಬೀದಿಯಲಿ ನಿಂತ ಭೂಸುರ ಜನರಿಗೆಲ್ಲಾ|
ಆದರದಿಂದ ಇಷ್ಟಾಮೃತವನಿಕ್ಕುತ ಜಾಣ |೩|
ರಂಬೆ ಮೊದಲಾದ ಸುರ ರಮಣಿಯರು|
ತುಂಬಿದಾರತಿಯ ಪಿಡಿದು ಕೂಡಿ ಪಾಡಲು|
ಶಂಭು ಮುಖ ನಿರ್ಜರನೇಕ ಪರಾಕು ಎನ್ನುತಾ|
ಅಂಬುಧಿ ಭವಾದ್ಯಗಳ ಆಳಿದ ಶ್ರೀ ರಂಗನಾಥ |೪|
ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು|
ಮುಚ್ಚಿ ತಂದ ಕೆನೆ ಮೊಸರು ಮೀಸಲು ಬೆಣ್ಣೆಯು|
ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು|
ಮೆಚ್ಚಿ ಉಂಡು ಪಾನಕ ನೀರ ಮಜ್ಜಿಗೆಗಳ ಸವಿದ ಬೇಗಾ |೫|
ಮುತ್ತಿನ ತುರಾಯಿ ಅಂಗಿ ಮುಂಡಾಸದಿ|
ತತ್ತಳಿಪ ತಾಳಿ ವಜ್ರ ತಾಳಿ ಚೌಕಳಿ|
ಮುತ್ತಿನ ಕುಂಡಲನಿಟ್ಟು ಮೋಹಿಸುತ್ತ ಬೀದಿಲಿ
ಕತ್ತಿಯ ಕೈಯಲ್ಲಿ ಹಿಡಿದು ಮತ್ತಲ್ಲೇ ವಿರಾಜಿಸುತ್ತಾ |೬|
ಸಣ್ಣ ಮುತ್ತು ಕೆತ್ತಿಸಿದ್ದ ಸಕಲಾಯಿಗಳ|
ಹೊನ್ನು ಹೊಸ ಜಾನ ಜಂಗುಳಿ ಹೊಳೆವ ಸೊಬಗಿನ
ಉನ್ನಂತ ಪರಾಯಣ ಉತ್ತಮ ರಾಜೇಶ್ವನೇರಿ
ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥ ಕೊಡುತಾ |೭|
rAja bIdiyoLagiMdA
kastUri raMgA,
tEjanEri meredu baMdA |pa|
suttamuttalu sAvirAru sAlu dIvige|
hattu dikkali beLaguttidda hagalu battiyU|
vistaradi BUsuraru suttu gaTTi niMtiralu|
matte nammaLaMtu tEja mellane naDesuttA jANa |1|
tALa SaMKa BEri taMbUri modalAda|
mElu paMcAMkagaLella hogaLi hogaLalu|
gALi gOpurada muMde dALi mADuvaMte suttu|
dhULiyanebbisi vaiyyALiyanikkuta jANa |2|
vEda SAstra purANagaLu vaMdisi pogaLalu|
mOdadiMda gAyakaru mairi pADalu|
hAdi bIdiyali niMta BUsura janarigellA|
AdaradiMda iShTAmRutavanikkuta jANa |3|
raMbe modalAda sura ramaNiyaru|
tuMbidAratiya piDidu kUDi pADalu|
SaMBu muKa nirjaranEka parAku ennutA|
aMbudhi BavAdyagaLa ALida SrI raMganAtha |4|
haccanage sAru bELe hAlu kenegaLu|
mucci taMda kene mosaru mIsalu beNNeyu|
hacci tuppa pakvavAda atirasa huggiyannu|
mecci uMDu pAnaka nIra majjigegaLa savida bEgA |5|
muttina turAyi aMgi muMDAsadi|
tattaLipa tALi vajra tALi caukaLi|
muttina kuMDalaniTTu mOhisutta bIdili
kattiya kaiyalli hiDidu mattallE virAjisuttA |6|
saNNa muttu kettisidda sakalAyigaLa|
honnu hosa jAna jaMguLi hoLeva sobagina
unnaMta parAyaNa uttama rAjESvanEri
enna hayavadana raMga ellarigiShTArtha koDutA |7|