ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರೆ ಭಾಗ್ಯದ ನಿಧಿಯೇ | ಶ್ಯಾಮಸುಂದರ ರಾಣಿ | Baare Bhagyada Nidhiye | Shyamasundara Rani


ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು (ಶ್ಯಾಮಸುಂದರ ರಾಣಿ)
Kruti: Sri Shyamasundara Dasaru (Shyamasundara Rani)


ಬಾರೆ ಭಾಗ್ಯದ ನಿಧಿಯೇ ಬಾರೇ ಶ್ರೀ ಜಾನಕಿಯೇ || ಪ ||
ಬಾರೆ ಬಾರೆ ಚಕೋರ ಸಖಾಗ್ರಜೆ ಸೇರಿದೆ ತವಪದ ವಾರಿಜ ನಿಲಯೇ || ಅಪ ||

ಕೃತಿ ಶಾಂತಿ ಜಯಮಾಯೆ ಕ್ಷಿತಿಜೆ ಕೋಮಲ ಕಾಯೆ, ಶಿತಕಳೆವರ ವಿಧಿ
ಶತಕೃತು ಸುಮನಸ ತತಿನುತೆ ಪಾವನೆ ರತಿಪತಿ ತಾಯೇ || ೧ ||

ಮಂಗಳೆ ಮುದಭರಿತೆ ತಿಂಗಳ ಮುಖಿ ಸೀತೆ ಇಂಗಡಲಜೆ ಕೃಪಾಂಗಿಯೇ
ಎನ್ನಂತರಂಗದಿ ಮಾನವ ಸಿಂಗನ ತೋರೇ || ೨ ||

ಶ್ಯಾಮಸುಂದರ ರಾಣಿ ವಾಮಾಕ್ಷಿ ಕಲ್ಯಾಣಿ ಕಾಮಿನಿಮಣಿ 
ಸತ್ಯಭಾಮೆ ರುಕ್ಮಿಣಿ ಗೋಮಿನಿ ರಮೆ ಶುಭನಾಮೆ ಲಲಾಮೇ || ೩ ||

bAre BAgyada nidhiyE bArE SrI jAnakiyE || pa ||
bAre bAre cakOra saKAgraje sEride tavapada vArija nilayE || apa ||
 
kRuti shaaMti jayamAye kShitije kOmala kAye, SitakaLevara vidhi
SatakRutu sumanasa tatinute pAvane ratipati tAyE || 1 ||

maMgaLe mudaBarite tiMgaLa muKi sIte iMgaDalaje kRupAMgiyE
ennaMtaraMgadi mAnava siMgana tOrE || 2 ||

SyAmasuMdara rANi vAmAkShi kalyANi kAminimaNi 
satyaBAme rukmiNi gOmini rame SuBanAme lalAmE || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru