ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣ ಜನರನ್ನೆಲ್ಲ ಪೊರೆವ ಭಾರತಿ | ವರದ ಗೋಪಾಲ ವಿಠಲ | Sharana Janarannella | Varada Gopala Vithala


ಸಾಹಿತ್ಯ : ಶ್ರೀ ವರದ ಗೋಪಾಲ ದಾಸರು 
Kruti:Sri Varada Gopala Dasaru


ಶರಣ ಜನರನ್ನೆಲ್ಲ ಪೊರೆವ ಭಾರತಿ ನಿನ್ನ ಚರಣಕ್ಕೆ ಕೈ ಮುಗಿವೆ ||ಪ||
ಕರೆಕರೆಗೊಳಿಸುವ ಕಠಿಣ ಭವವನ್ನೆಲ್ಲ ಪರಿಹಾರ ಮಾಡಬೇಕು ಪರಾಕು ||ಅಪ||

ತುತಿಸಬಲ್ಲೆನೆ ನಿನ್ನ ಸುತನ ಬಿನ್ನಪವನ್ನು ಅತಿಶಯದಿ ಕೇಳಬೇಕು ಈ ವಾಕು
ಮತಿವಂತ ಜನರನ್ನು ಮಾನ್ಯಗೊಳಿಸುವಂಥ ಹಿತವಾದ ಭಾಗ್ಯವೀಯೆ ನೀ ಕಾಯೆ ||೧||

ಕಾಮಾದಿಗಳನ್ನೆಲ್ಲ ನೇಮದಿ ಗೆಲುವಂಥ | ಪ್ರೇಮ ಕವಚ ತೊಡಿಸೆ ಉದ್ಧರಿಸೆ
ಹೇಮಕಾಮಿನಿ ಭೂಮಿ ಹೇಯವೆಂದೆನಿಸೆ ನೀ ಸೋಮಶೇಖರನ ಜನನಿ ಸುಜ್ಞಾನಿ ||೨||

ಮಾತೆ ಎನ್ನದು ಒಂದು ಮಾತು ಲಾಲಿಸುವುದು | ವಾತನ ನಿಜದಯಿತೆ ಪ್ರಖ್ಯಾತೆ
ದಾತ ಶ್ರೀ ವರದ ಗೋಪಾಲ ವಿಠಲನ ಆತುಮದೊಳು ನಿಲ್ಲಿಸೆ ಸುಮನಸೆ ||೩||

sharaNa janarannella poreva BArati ninna caraNakke kai mugive ||pa||
karekaregoLisuva kaThiNa Bavavannella parihAra mADabEku parAku ||apa||

tutisaballene ninna sutana binnapavannu atiSayadi kELabEku I vAku
mativaMta janarannu mAnyagoLisuvaMtha hitavAda BAgyavIye nI kAye ||1||

kAmAdigaLannella nEmadi geluvaMtha | prEma kavaca toDise uddharise
hEmakAmini BUmi hEyaveMdenise nI sOmaSEKarana janani suj~jAni ||2||

mAte ennadu oMdu mAtu lAlisuvudu | vAtana nijadayite praKyAte
dAta SrI varada gOpAla viThalana AtumadoLu nillise sumanase ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru