ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗೋಪಾಲದಾಸರ ದಿವ್ಯ ಚರಣ | ಬಾದರಾಯಣ ವಿಠಲ | Gopala Dasara Divya | Badarayana Vithala


ಸಾಹಿತ್ಯ : ಶ್ರೀ ಬಾದರಾಯಣ ವಿಠಲ ದಾಸರು 
Kruti:    Sri Badarayana vittala Dasaru


ಗೋಪಾಲದಾಸರ ದಿವ್ಯ ಚರಣಗಳು ಕಾಪಾಡಲೆನ್ನ ಸತತ ||ಪ||
ತಾಪಸೋತ್ತಮ ವಿಜಯರಾಯರ ಕೃಪಾಜಾಹ್ನವಿ ಪ್ರವಾಹದೊಳು 
ತೇಲಿ ಶೋಭಿಸುತ್ತಿರುವ ||ಅಪ||

ಇವರ ಪೂಜೆಯೇ ನಮ್ಮ ವಿಜಯರಾಯರ ಪೂಜೆ
ಇವರ ದಯವೆ ವಿಜಯರಾಯರ ದಯವು
ಇವರ ಕೊಂಡಾಡುವುದೇ ವಿಜಯರಾಯರ ಸ್ತೋತ್ರ
ಇವರೇ ವಿಜಯರಾಯರ ಮುಖ್ಯ ಪ್ರತಿಮಾ ||೧||

ವೈರಾಗ್ಯ ಹರಿಭಕ್ತಿ ವಿಜ್ಞಾನಗಳ ಕೊಟ್ಟು ಘೋರ
ದುರಿತಗಳೋಡಿಸಿ ಶ್ರೀರಮಣನ ಪದ ತೋರುವರು
ಬಿಡದೆ ಈಸೂರಿಗಳ ನಂಬಿದವ ಧನ್ಯ ಮಾನ್ಯ ||೨||

ವರದ ಗೋಪಾಲ ಗುರುಗೋಪಾಲ ಶ್ರೀರಂಗ ಒಲಿದ
ದಾಸರು ಈ ಮಹಾ ಕರುಣಾಳುಗಳ ನಂಬಿ
ಹರಿಭಕುತರೆನಿಸಿದರು ಮರುದೀಶ ಬಾದರಾಯಣ
ವಿಠಲನ ಪ್ರೀಯಾ ||೩|| 

gOpaaladaasara divya caraNagaLu kaapaaDalenna satata ||pa||
taapasOttama vijayaraayara kRupaajaahnavi pravaahadoLu 
tEli shObhisuttiruva ||apa||

ivara pUjeyE namma vijayaraayara pUje
ivara dayave vijayaraayara dayavu
ivara koMDaaDuvudE vijayaraayara stOtra
ivarE vijayaraayara muKya pratimaa ||1||

vairaagya haribhakti vij~jaanagaLa koTTu GOra
duritagaLODisi shrIramaNana pada tOruvaru
biDade IsUrigaLa naMbidava dhanya maanya ||2||

varada gOpaala gurugOpaala shrIraMga olida
daasaru I mahaa karuNaaLugaLa naMbi
haribhakutarenisidaru marudIsha baadaraayaNa
viThalana prIyaa ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru