ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸ್ವಾಮಿ ಮುಖ್ಯಪ್ರಾಣ | ಪುರಂದರವಿಠಲ | Swamy Mukhyaprana | Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲಗಾಣ 
ಹಿಡಿದ್ಯೋ ರಾಮರ ಚರಣ ನೀ ಹೌದ್ಹೌದೋ ಜಗತ್ರಾಣ ||ಪ||

ಸಂಜೀವನ ಪರ್ವತವ ನೀನಂಜದೆ ತಂದ್ಯೋ ದೇವ
ಅಂಜನೆಸುತ ಸದಾಕಾವ ಹೃತ್ಕಂಜವಾಸ ಸರ್ವಜೀವ ||೧||

ಏಕಾದಶೆಯ ರುದ್ರ ನೀ ಒಯ್ದ್ಯೋ ರಾಮರ ಮುದ್ರಾ 
ಸಕಲ ವಿದ್ಯಾಸಮುದ್ರ ನೀ ಹೌದ್ಹೌದೋ ಬಲಭದ್ರ ||೨||

ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು
ಯಂತ್ರೋದ್ಧಾರಕನೆಂದು ಪುರಂದರ ವಿಠಲ ಸಲಹೆಂದು ||೩||

svaami mukhyapraaNa ninna marevara gaMTalagaaNa 
hiDidyO raamara caraNa nI haud~haudO jagatraaNa ||pa||

saMjIvana parvatava nInaMjade taMdyO dEva
aMjanesuta sadaakaava hRutkaMjavaasa sarvajIva ||1||

Ekaadasheya rudra nI oydyO raamara mudraa 
sakala vidyaasamudra nI haud~haudO balabhadra ||2||

vaikuMThadiMda baMdu nI paMpaakShEtradi niMdu
yaMtrOddhaarakaneMdu puraMdara viThala salaheMdu ||3||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru