ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದ್ರೌಪದಿ ವಸ್ತ್ರಾಪಹರಣ | ಪುರಂದರ ವಿಠಲ | Draupadi Vastrapaharana | Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ದ್ರೌಪದಿ ವಸ್ತ್ರಾಪಹರಣ   

ವಾಸುದೇವಾಯ ನಮೋ ||ಪ|| 
ವಾಸುದೇವಾಯ ನಮೋ ವಾಸುಕೀ ಶಯನಾಯ ವಾಸವಾದ್ಯಖಿಳ ಸುರನಮಿತ ಚರಣಾಂಭೋಜ 
ಭೂಸುರ ಪ್ರಿಯ ಭಜಕ ಪೋಷಕನೆ ರಕ್ಷಿಪುದು ಅನಾಥ ಬಂಧೋ ||ಅಪ||

ಶುಂಡಾಲ ಪುರದೊಳಗೆ ದುರುಳ ದುರ್ಯೋಧನನು ಪಾಂಡು ನಂದನರೊಡನೆ ಕಪಟ ಜೂಜವನಾಡಿ 
ಗಂಡರೈವರ ಮುಂದೆ ದ್ರುಪದ ಸುತೆಯಳ ಸೆರಗ ಲಂಡ ದುಶ್ಯಾಸನ ಪಿಡಿದು ಅಂಡಲೆದು 
ಸೂರತಿಯ ಸೆಳೆಯುತಿರೆ ದ್ರೌಪದಿಯ ಕಂಡು ಮನದೊಳು ಬೆದರಿ ಪರಮಾತ್ಮ ಪರಿಪೂರ್ಣ
ಪುಂಡರೀಕಾಕ್ಷ ರಕ್ಷಿಸು ಎಂದು ಮೊರೆಯಿಟ್ಟಳಂಡಜ ತುರಂಗಗಾಗ ||೧||

ಪತಿಗಳೈವರು ಸತ್ಯವ್ರತದಿ ಸುಮ್ಮನೆ ಇಹರು ಅತಿ ಕ್ಲೇಶಗೊಳುತಿಹರು 
ವಿದುರ ಭೀಷ್ಮಾದಿಗಳು ಸುತರ ಮೇಲಣ ಮೋಹದಿಂದಂಜಿ ಸುಮ್ಮನಿಹ ಗತಲೋಚನದ ಮಾವನು 
ಕುತಕದಲ್ಲಿಹರು ನೃಪ ಶಕುನಿ ಕರ್ಣಾದಿಗಳು ಹಿತವ ಚಿಂತಿಪರಾರು 
ಈ ನೆರೆದ ಸಭೆಯೊಳಗೆ ಗತಿಯಿಲ್ಲದವರಿಗೆ ಸದ್ಗತಿ ನೀನೆ ಜಗದೊಳಗೆ ರತಿಪತಿಯ ಪಿತನೆ ಸಲಹೋ ||೨||

ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯೆ ಮೃತ್ಯುವಂತಳೆವನಿವ ಬಿಡಿಸ ಬಾರದೆ ತಾಯೆ 
ಉತ್ತಮಳು ನೀನು ಎಲೆ ಭಾನುಮತಿ ನೆಗೆಹೆಣ್ಣೆ ಇತ್ತ ದಯಮಾಡಿ ನೋಡೆ 
ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ ಪೆತ್ತುದಿಲ್ಲವೆ ಎನ್ನ ಪೋಲ್ವ ಪೆಣ್ಮಕ್ಕಳನು 
ಹುತ್ತದೊಳು ಬಿದ್ದಂತ ಹಾವು ಸಾಯಲು ಬಹುದೆ ತತ್ವಬಾಹಿರರಾದಿರೆ ||೩||

ಆರಿಗೊದರಿದರೆನ್ನ ದೂರು ಕೇಳುವರಾರು ಪಾರುಗಾಣಿಸುವರ ಕಾಣೆ ನಾನಿದರೊಳಗೆ ಸಾರಿದರೆ 
ಪೊರೆವ ಕಂಸಾರಿ ನೀನಲ್ಲದಿನ್ನಾರು ಎನಗಾಪ್ತ ಬಂಧು
ಮಾರಿದರು ಧರ್ಮದೇವತೆಗೆನ್ನ ವಲ್ಲಭರು ಭಾರ ನಿನ್ನದು ಎಂದು ನಂಬಿದ ಅನಾಥಳನು 
ಕ್ಷೀರದೊಳಗದ್ದು ನೀರೊಳಗದ್ದು ಗತಿ ನೀನೇ ನಾರಾಯಣನೇ ರಕ್ಷಿಸು ||೪||

ಪಾವಕನ ಉರಿಯೊಳಗೆ ಹೊಕ್ಕು ಹೊರಡಲುಬಹುದು ಹಾವುಗಳ ಹೆಡೆಹಿಡಿದು ಎಳೆದೆಳೆದುತರಬಹುದು 
ತೀವಿರ್ದ ಮಡುವ ಧುಮುಕಲಿ ಬಹುದು ಗರಳವನು ಸೇವಿಸಲಿ ಬಹುದು
ಜಗದಿ ಸಾವಿಗಂಜದೆ ಕೊರಳ ಕತ್ತರಿಸಿಕೊಳಬಹುದು ಜೀವವಿದ್ದಂತೆ ಲಜ್ಜೆಯ ತೊರೆಯಲಾರೆನೈ | 
ಆವಪರಿಯಲಿ ನಿನ್ನ ನಂಬಿದ ಅನಾಥಳನು ದೇವಾಭಿಮಾನವ ಕಾಯೋ || ೫ ||

ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ | ಋಷಿ ಶಾಪವ ಪರಿಯ ಅಂಬರೀಷನ ಕಾಯ್ದೆ | 
ವಸುಧೆಯೊಳಗೆ ಕಲ್ಲಾಗಿ ಬಿದ್ದ ಅಹಲ್ಯೆಯ ಪೊರೆದೆ ಶಿಶು ಪ್ರಹ್ಲಾದಗೊಲಿದೆ |
ಹಸುಳೆ ಧ್ರುವರಾಯಂಗೆ ಹೆಸರುಳ್ಳ ಪದವಿತ್ತೆ || ದಶಕಂಠನನುಜಂಗೆ ಸ್ಥಿರ ಪಟ್ಟವನು ಕೊಟ್ಟೆ | 
ಹೆಸರುಗೊಂಡರೆ ಮಗನ ಅಜಮಿಳನ ರಕ್ಷಿಸಿದೆ | ವಸುದೇವ ಸುತನೆ ಸಲಹೊ || ೬ ||

ಲಕ್ಷ್ಮೀ ಮನೋಹರನೆ ಇಕ್ಷುಚಾಪನ ಪಿತನೆ | ಯಕ್ಷ ಗಂಧರ್ವ ಅಮರೇಂದ್ರ ಮುನಿ ವಂದಿತನೆ | 
ಅಕ್ಷಯನೆ ಆಟದಲಿ ಜಗವ ಪಾಲಿಸುತಿಹನೆ | 
ಅಕ್ಷಾಸುರಾಂತಕನೆ ಅಜಪದವಿಯ ನಿತ್ತವನೆ | ದಕ್ಷಸುತೆ ಪತಿ ಸಖನೆ ಪಕ್ಷಿವಾಹನ 
ದೇವ ರಕ್ಷಿಸು ಅನಾಥ ಬಂಧು || ೭ ||

ತಂದೆತಾಯಿಯು ನೀನೇ ಬಂಧು ಬಳಗವು ನೀನೆ | ಇಂದೆನ್ನ ಕುಲ ಸ್ವಾಮಿ ಗುರು ಪಿತಾಮಹ ನೀನೆ | 
ಎಂದು ನಂಬಿದೆ ಎನ್ನ ಮಾನಾಭಿಮಾನದ ಮುಕುಂದ
ನಿನಗೊಪ್ಪಿಸಿದೆನು ಕೊಂದರೊಳ್ಳಿತು ನೀನೇ ಕಾಯ್ದರೊಳ್ಳಿತು ನೀನೆ ಎಂದು ಕಂಗಳ ಮುಚ್ಚಿ ಕರತಳಂಗಳ ನೆಗಹಿ 
ಇಂದು ಪ್ರಾಣವ ಬಿಡುವೆನೆಂದು ನಿಶ್ಚಯಿಸಿ ಗೋವಿಂದ ಎಂದಳು ಮೃಗಾಕ್ಷಿ || ೮ ||

ಇಂತೆಂದು ದ್ರೌಪದಿಯು ಮೊರೆ ಇಡುವುದನು ಕೇಳಿ ಅಂತರಾತ್ಮಕ ಕೃಷ್ಣ ದ್ವಾರಕ ಪುರದೊಳಗೆ | 
ಕಾಂತೆ ರುಕ್ಮಿಣಿ ಸತ್ಯ ಭಾಮೆಯ ಮಧ್ಯದಲಿ ಏಕಾಂತ ಭವನದೊಳು ಕುಳಿತು ||
ಕುಂತಿ ನಂದನರ ಸತಿಯುಟ್ಟುದಕ್ಷಯವಾಗಿ ಸಂತೋಷಗೊಳಲೆಂದು ವರವಿತ್ತ ಶ್ರೀ ಕೃಷ್ಣ | 
ಎಂತುಂಟೋ ಹರಿ ಕರುಣ ನೆನೆವ ಭಕ್ತರ ಮೇಲನಂತ ವಸ್ತ್ರಗಳಾದುವು || ೯ ||

ಸೆಳೆಯುತಿರ್ದನು ಖಳನು ಬೆಳೆಯುತಿರ್ದುದು ಸೀರೆ ಪೊಳೆವ ಪೊಂಬಟ್ಟೆ ನಾನಾ ವಿಚಿತ್ರದ ಬಣ್ಣ || 
ಹೊಳಲು ತುಂಬುವ ತೆರದಿ ಸೆಳೆಸೆಳೆದು ಪಾಪಾತ್ಮ ಬಳಲಿ ಇಳೆಯೊಳಗೊರಗಿದ ||
ಕಳೆಯು ಕುಂದಿತು ಮೋರೆ ಕರ್ಣ ದುರ್ಯೋಧನರ ಬಳಿಯ ನಿಂತಿರ್ದ ದೂತರ ಕರೆದು ನೇಮಿಸಿದ 
ತಳುಹದಿ ವಸ್ತ್ರಗಳ ಬೊಕ್ಕಸಕೆನಲು ನಳಿನಮುಖಿ ತಿಳಿದಳಾಗ || ೧೦ ||

ಸಿಟ್ಟಿನಲಿ ದ್ರೌಪದಿಯು ಕಣ್ತೆರೆದು ನೋಡಲಾ | ಬೆಟ್ಟದಂತೊಟ್ಟಿರ್ದ ವಸ್ತ್ರರಾಶಿಗಳೆಲ್ಲ | 
ಸುಟ್ಟಗ್ನಿ ಹೊರ ಸೂಸಿ ನೆಟ್ಟನಾ ರಾಜಗೃಹ ಥಟ್ಟನಾಹುತಿಗೊಂಡಿತು | 
ಕೊಟ್ಟಳೈ ಶಾಪವನು ಕಮಲ ಮುಖಿ ಕುರುಪತಿಗೆ ಕಟ್ಟಾಳು ಭೀಮಸೇನನ ಗದೆಯು ರಣದಲ್ಲಿ 
ಕುಟ್ಟಿ ಬಿಸುಡಲಿ ನಿನ್ನ ತೊಡೆಗಳೆರಡನು ಎಂದು ಇಟ್ಟ ನುಡಿ ತಪ್ಪಲುಂಟೆ || ೧೧ ||

ಮೂಡಿದವು ಪ್ರತಿಸೂರ್ಯ ಧೂಮಕೇತುಗಳು ಓಡಾಡಿದವು ಗಗನದೊಳು ಹದ್ದು ಕಾಗೆಗಳು | 
ಕೂಗಾಡಿದವು ಮೃಗಜಾತಿ ಚಲಿಸಿದವು ಶಿಲೆ ಪ್ರತಿಮೆ ರೂಢಿ ಗಡಗಡ ನಡುಗಿತು ||
ಕೂಡಿ ತೀಡಿದವು ನಕ್ಷತ್ರಗಳು ದಿವದಿ ಮಾತಾಡಿದವು ಅಶರೀರ ವಾಕ್ಯಗಳು ಪುರಜನರು ಕೇಡು 
ಕೌರವಗಾಗದಿರದೆಂದು ನಿಶ್ಚಯಿಸಿ ಓಡಿ ಮನೆಗಳ ಪೊಕ್ಕರು || ೧೨ ||

ಹರುಷ ಭಟ್ಟರು ಮನದಿ ವಿದುರ ಭೀಷ್ಮಾದಿಗಳು ಸುರರು ನಾರದರೆಲ್ಲ ನೆರೆದರಂಬರದಲ್ಲಿ | 
ಹರಸಿ ಜಯ ಜಯವೆಂದು ದ್ರೌಪದಿಯ ಸಿರಿ ಮುಡಿಗೆ ಸುರಿಸಿದರು ಹೂ ಮಳೆಗಳಾ ||
ಹರಿಯ ನಾಮಾವಳಿಯ ಪೊಗಳುತಲಿ ದಿವಿಜೇಂದ್ರ | ಮರಳಿ ಪೋದನು ತನ್ನ ಪಟ್ಟಣಕೆ ಧರೆಯೊಳಗೆ | 
ಹರಿಯ ನೆನೆದವರೇನು ಧನ್ಯರೋ ದ್ರೌಪದಿಯ ಹರಿಯ ನಾಮವೇ ಕಾಯಿತು || ೧೩ ||

ಶ್ರೀವಾಸುದೇವನಾಜ್ಞಾಪಿಸಿದ ರುಕ್ಮಿಣಿಗೆ ದೇವಿ ಕೇಳೆನ್ನ ಭಾಷೆಯ ಮುಂದೆ ಅರ್ಜುನಗೆ | 
ನಾವೇ ಸಾರಥಿಯಾಗಿ ಸಲಹುವೆವು ಅವರೆಮ್ಮ ಜೀವ ಪಾಂಡವರೆಂದನು |
ಆವನಿದನುದಯಕಾಲದೊಳೆದ್ದು ಭಕುತಿಯಲಿ | ಭಾವ ಶುದ್ಧಿಯಲೋದಿ ಭಜನೆ ಮಾಳ್ಪನೋ 
ಅವನ ಸಾವಿರ ಜನ್ಮಗಳ ಸಂಚಿತಘರಾಶಿಗಳು ತಾವೇ ಹತವಹುದು ದಿಟವೋ || ೧೪ ||

ಮಂಗಳಂ ಝಷಕೂರ್ಮ ಕಿಟಿ ನೃಹರಿ ವಾಮನಗೆ ಮಂಗಳಂ ಭಾರ್ಗವಗೆ ರಘುರಾಮ ಕೃಷ್ಣನಿಗೆ | 
ಮಂಗಳಂ ಬುದ್ಧ ಕಲ್ಕ್ಯಾದಿ ಅವತಾರನಿಗೆ ಮಂಗಳಂ ಕರುಣ ನಿಧಿಗೆ
ಮಂಗಳಂ ಶತಕೋಟಿ ಸೂರ್ಯ ಪ್ರಕಾಶನಿಗೆ | ಮಂಗಳಂ ದ್ರೌಪದಿಯ ಮಾನವನು ಕಾಯ್ದವಗೆ | 
ಮಂಗಳಂ ಶ್ರೀಯರಸ ಪುರಂದರ ವಿಠಲಗೆ ಮಂಗಳಂ ಜಯ ಮಂಗಳಂ || ೧೫ ||

Draupadi Vastrapaharana

vaasudEvAya namO ||pa|| 
vaasudEvAya namO vAsukI shayanAya vaasavaadyakhiLa suranamita charaNAMbhOja 
bhUsura priya bhajaka pOShakane rakShipudu anaatha baMdhO ||apa||

shuMDAla puradoLage duruLa duryOdhananu paaMDu naMdanaroDane kapaTa jUjavanaaDi 
gaMDaraivara muMde drupada suteyaLa seraga laMDa dushyaasana piDidu aMDaledu 
sUratiya seLeyutire droupadiya kaMDu manadoLu bedari paramaatma paripUrNa
puMDarIkaakSha rakShisu eMdu moreyiTTaLaMDaja turaMgagaaga ||1||

patigaLaivaru satyavratadi summane iharu ati klEshagoLutiharu 
vidura bhIShmaadigaLu sutara mElaNa mOhadiMdaMji summaniha gatalOchanada maavanu 
kutakadalliharu nRupa shakuni karNaadigaLu hitava chiMtiparaaru 
I nereda sabheyoLage gatiyilladavarige sadgati nIne jagadoLage ratipatiya pitane salahO ||2||

atteyallave enage gaaMdhaari dEviye mRutyuvaMtaLevaniva biDisa baarade taaye 
uttamaLu nInu ele bhaanumati negeheNNe itta dayamaaDi nODe 
sutta nerediha sabheya parivaaradavarella pettudillave enna pOlva peNmakkaLanu 
huttadoLu biddaMta haavu saayalu bahude tatvabaahiraraadire ||3||

aarigodaridarenna dUru kELuvaraaru paarugaaNisuvara kaaNe naanidaroLage saaridare 
poreva kaMsaari nInalladinnaaru enagaapta baMdhu
maaridaru dharmadEvategenna vallabharu bhaara ninnadu eMdu naMbida anaathaLanu 
kSheeradoLagaddu neeroLagaddu gati nInE naaraayaNanE rakShisu ||4||

paavakana uriyoLage hokku horaDalubahudu haavugaLa heDehiDidu eLedeLedutarabahudu 
tIvirda maDuva dhumukali bahudu garaLavanu sEvisali bahudu
jagadi saavigaMjade koraLa kattarisikoLabahudu jIvaviddaMte lajjeya toreyalaarenai | 
Avapariyali ninna naMbida anaathaLanu dEvaabhimaanava kaayO || 5 ||

asura bennaTTi bare pashupatiya rakShiside | RuShi shaapava pariya aMbarIShana kaayde | 
vasudheyoLage kallaagi bidda ahalyeya porede shishu prahlaadagolide |
hasuLe dhruvaraayaMge hesaruLLa padavitte || dashakaMThananujaMge sthira paTTavanu koTTe | 
hesarugoMDare magana ajamiLana rakShiside | vasudEva sutane salaho || 6 ||

lakShmI manOharane ikShucaapana pitane | yakSha gaMdharva amarEMdra muni vaMditane | 
akShayane ATadali jagava paalisutihane | 
akShaasuraaMtakane ajapadaviya nittavane | dakShasute pati saKane pakShivaahana 
dEva rakShisu anaatha baMdhu || 7 ||

taMdetaayiyu nInE baMdhu baLagavu nIne | iMdenna kula svaami guru pitaamaha nIne | 
eMdu naMbide enna maanaabhimaanada mukuMda
ninagoppisidenu koMdaroLLitu nInE kaaydaroLLitu nIne eMdu kaMgaLa mucci karataLaMgaLa negahi 
iMdu praaNava biDuveneMdu nishcayisi gOviMda eMdaLu mRugaakShi || 8 ||

iMteMdu droupadiyu more iDuvudanu kELi aMtaraatmaka kRuShNa dvaaraka puradoLage | 
kaaMte rukmiNi satya bhaameya madhyadali EkaaMta bhavanadoLu kuLitu ||
kuMti naMdanara satiyuTTudakShayavaagi saMtOShagoLaleMdu varavitta shrI kRuShNa | 
eMtuMTO hari karuNa neneva bhaktara mElanaMta vastragaLaaduvu || 9 ||

seLeyutirdanu KaLanu beLeyutirdudu sIre poLeva poMbaTTe naanaa vicitrada baNNa || 
hoLalu tuMbuva teradi seLeseLedu paapaatma baLali iLeyoLagoragida ||
kaLeyu kuMditu mOre karNa duryOdhanara baLiya niMtirda dUtara karedu nEmisida 
taLuhadi vastragaLa bokkasakenalu naLinamuKi tiLidaLaaga || 10 ||

siTTinali droupadiyu kaNteredu nODalaa | beTTadaMtoTTirda vastraraashigaLella | 
suTTagni hora sUsi neTTanaa raajagRuha thaTTanaahutigoMDitu | 
koTTaLai shaapavanu kamala muKi kurupatige kaTTaaLu bhImasEnana gadeyu raNadalli 
kuTTi bisuDali ninna toDegaLeraDanu eMdu iTTa nuDi tappaluMTe || 11 ||

mUDidavu pratisUrya dhUmakEtugaLu ODaaDidavu gaganadoLu haddu kaagegaLu | 
kUgaaDidavu mRugajaati calisidavu shile pratime rUDhi gaDagaDa naDugitu ||
kUDi tIDidavu nakShatragaLu divadi maataaDidavu asharIra vaakyagaLu purajanaru kEDu 
kouravagaagadiradeMdu nishcayisi ODi manegaLa pokkaru || 12 ||

haruSha bhaTTaru manadi vidura bhIShmaadigaLu suraru naaradarella neredaraMbaradalli | 
harasi jaya jayaveMdu droupadiya siri muDige surisidaru hU maLegaLaa ||
hariya naamaavaLiya pogaLutali divijEMdra | maraLi pOdanu tanna paTTaNake dhareyoLage | 
hariya nenedavarEnu dhanyarO droupadiya hariya naamavE kaayitu || 13 ||

shrIvaasudEvanaaj~jaapisida rukmiNige dEvi kELenna bhaaSheya muMde arjunage | 
naavE saarathiyaagi salahuvevu avaremma jIva paaMDavareMdanu |
AvanidanudayakaaladoLeddu bhakutiyali | bhaava shuddhiyalOdi bhajane maaLpanO 
avana saavira janmagaLa saMcitagharaashigaLu taavE hatavahudu diTavO || 14 ||

maMgaLaM jhaShakUrma kiTi nRuhari vaamanage maMgaLaM bhaargavage raghuraama kRuShNanige | 
maMgaLaM buddha kalkyaadi avataaranige maMgaLaM karuNa nidhige
maMgaLaM shatakOTi sUrya prakaashanige | maMgaLaM droupadiya maanavanu kaaydavage | 
maMgaLaM shrIyarasa puraMdara viThalage maMgaLaM jaya maMgaLaM || 15 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru