ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏನು ಸುಖವೋ ಎಂಥಾ ಸುಖವೋ | ಗೋಪಾಲ ವಿಠಲ | Enu Sukhavo Entha Sukhavo | Gopala Vithala


ಸಾಹಿತ್ಯ : ಶ್ರೀ ಗೋಪಾಲ ದಾಸರು
Kruti:Sri Gopala Dasaru


ಏನು ಸುಖವೋ ಎಂಥಾ ಸುಖವೋ ||ಪ|| 
ಹರಿಯ ಧ್ಯಾನ ಮಾಡುವವರ ಸಂಗ ||ಅಪ|| 

ತಂಬೂರಿ ಮೀಟುತ್ತ ಹೃದಯ ಅಂಬಕದಿಂದ 
ಆನಂದ ಅಂಬುಗರೆಯುತ್ತ ಬಲು ಸಂಭ್ರಮದಿಂದಿಹರ ಸಂಗ ||೧|| 

ಗೆಜ್ಜೆಯು ಕಾಲಲ್ಲಿ ಕಟ್ಟಿ ಲಜ್ಜೆ ಬಿಟ್ಟು | 
ಹರಿಯ ನಾಮ ಘರ್ಜನೆ ಮಾಡುತ್ತ ಅಘವರ್ಜ್ಯರಾಗಿಹರ ಸಂಗ ||೨|| 

ಸ್ವರ್ಣಲೋಷ್ಠ ಸಮರೆಂದು ತನ್ನದೆಂಬೋ ಹಮ್ಮು ತೊರೆದು || 
ಘನ್ನ ಮಹಿಮನ್ನ ಪಾಡಿ ಧನ್ಯರಾಗಿಹರ ಸಂಗ ||೩|| 

ಪುಷ್ಪದಲ್ಲಿ ಸುಗಂಧ ಹ್ಯಾಂಗಿಪ್ಪುದೋ ತದ್ವತ್ತು ಜಗ | 
ದಪ್ಪ ಬೊಮ್ಮಾದಿಗಳಲ್ಲಿ ಇಪ್ಪನೆನ್ನುವವರ ಸಂಗ ||೪|| 

ದರ್ವಿಯಂತೆ ದೇಹವನ್ನು ಸರ್ವದಾ ತಿಳಿದು ಶೇಷ || 
ಪರ್ವತ ವಾಸನ್ನ ನಂಬಿ ಊರ್ವಿಯೊಳಗಿಹರ ಸಂಗ ||೫|| 

ನಡೆವೋದು ನುಡಿವೋದು ನಿರುತ ಕೊಡುವೋದು ಕೊಂಬೋದು | 
ಜಗದೊಡೆಯನ ಪ್ರೇರಣೆಯಂದು ನುಡಿದು ಹಿಗ್ಗುವವರ ಸಂಗ ||೬|| 

ಸೃಷ್ಟಿಗೊಡೆಯನ ಮನ ಮುಟ್ಟಿ ಭಜಿಸುತ್ತ ಜ್ಞಾನ || 
ಕೊಟ್ಟ ಗೋಪಾಲ ವಿಠಲಗಿಷ್ಟರಾಗಿಹರ ಸಂಗ ||೭|| 

Enu suKavO eMthA suKavO ||pa|| 
hariya dhyAna mADuvavara saMga ||apa|| 
 
taMbUri mITutta hRudaya aMbakadiMda 
AnaMda aMbugareyutta balu saMBramadiMdihara saMga ||1|| 
 
gejjeyu kAlalli kaTTi lajje biTTu | 
hariya nAma Garjane mADutta aGavarjyarAgihara saMga ||2|| 
 
svarNalOShTha samareMdu tannadeMbO hammu toredu || 
Ganna mahimanna pADi dhanyarAgihara saMga ||3|| 
 
puShpadalli sugaMdha hyAMgippudO tadvattu jaga | 
dappa bommAdigaLalli ippanennuvavara saMga ||4|| 
 
darviyaMte dEhavannu sarvadA tiLidu SESha || 
parvata vAsanna naMbi UrviyoLagihara saMga ||5|| 
 
naDevOdu nuDivOdu niruta koDuvOdu koMbOdu | 
jagadoDeyana prEraNeyaMdu nuDidu higguvavara saMga ||6|| 
 
sRuShTigoDeyana mana muTTi Bajisutta j~jAna || 
koTTa gOpAla viThalagiShTarAgihara saMga ||7|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru