ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರಯ್ಯ ಶ್ರೀನಿವಾಸ | ವಿಜಯ ವಿಠಲ | Barayya Srinivasa | Vijaya Vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ |
ತೋರಯ್ಯ ನಿಮ್ಮ ದಯ ತೋಯಜಾಂಬಕನೇ ||ಪ||

ದುರುಳನ ತರಿದಂತ ವರಚಕ್ರಧಾರಿ |
ಪರಮಾತ್ಮ ಪರಬ್ರಹ್ಮ ಪರರಿಗುಪಕಾರಿ ||೧||

ವರಶೇಷಗಿರಿಯಲ್ಲಿ ನಿರುತ ನೀ ಇರುವೆ |
ಹರಿದಾಸರು ಕರೆದರೆ ಎಲ್ಲಿದ್ದರೂ ಬರುವೆ ||೨||

ಅನಂತನಾಭನೂ ನೀನೇ ಅನಂತ ಸದ್ಗುಣನು |
ನೆನೆವರಿಗೊಲಿದಂಥ ಹನುಮಂತ ಈಶ ||೩||

ಅರಣ್ಯದೊಳಗಿದ್ದ ಕರಿರಾಜಗೊಲಿದ |
ದುರುಳ ಹಿರಣ್ಯಾಕ್ಷನ ಶಿರವನ್ನೇ ತರಿದು ||೪||

ಅಜಭವಾದಿಪ ನೀನು ವಿಜಯ ಸಾರಥಿಯೇ |
ತ್ರಿಜಗವಂದಿತ ಈಶ ವಿಜಯ ವಿಠಲನೆ ||೫||

bArayya SrInivAsa Baktara manege |
tOrayya nimma daya tOyajAMbakanE ||pa||
 
duruLana taridaMta varacakradhAri |
paramAtma parabrahma pararigupakAri ||1||
 
varaSEShagiriyalli niruta nI iruve |
haridAsaru karedare elliddarU baruve ||2||
 
anaMtanABanU nInE anaMta sadguNanu |
nenevarigolidaMtha hanumaMta ISa ||3||
 
araNyadoLagidda karirAjagolida |
duruLa hiraNyAkShana SiravannE taridu ||4||
 
ajaBavaadipa nInu vijaya sArathiyE |
trijagavaMdita ISa vijaya viThalane ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru