ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಂಡೆ ಕಂಡೆನು ಕೃಷ್ಣ ನಿನ್ನಯ | ಹಯವದನ | Kande Kandenu Krishna | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯ ಮಂಗಳ ಮೂರ್ತಿಯ
ಕಂಡು ಬದುಕಿದೆ ಇಂದು ನಾನು ಕರುಣಿಸೋ ಎನ್ನೊಡೆಯನೇ ||ಪ||

ಉಟ್ಟದಟ್ಟಿಯು ಪಿಡಿದ ವಂಕಿಯು ತೊಟ್ಟ ಕೌಸ್ತುಭ ಭೂಷಣ |
ಮೆಟ್ಟಿದ ನವರತ್ನದ್ಹಾವಿಗೆ ಇಟ್ಟ ಕಸ್ತೂರಿ ತಿಲಕವು ||೧||

ಮಂದಹಾಸವು ದಂತಪಂಕ್ತಿಯು ಚೆಲುವ ಕಡೆಗಣ್ಣ ನೋಟವು
ಅಂದವಾದ ಕುರುಳು ಕೂದಲು ಮುದ್ದು ಸುರಿಯುವ ಮುಖವನಾ ||೨||

ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿ ಚೆಲ್ವ ಕಂಕಣ ಕೈಯಲಿ ||
ಗೊಲ್ಲ ಸತಿಯರ ಕುಚಗಳಲ್ಲಿ ಝಲ್ಲು ಝಲ್ಲೆಂದು ನಲಿವನಾ ||೩||

ಸುರರು ಪುಷ್ಪದ ವೃಷ್ಠಿ ಕರೆಯಲು ಅಸುರರೆಲ್ಲರು ಓಡಲು ||
ಕ್ರೂರ ಕಾಳಿಯ ಫಣಗಳಲ್ಲಿ ಧೀರ ನಲಿ ನಲಿದಾಡಲು ||೪||

ಇನ್ನು ಎನ್ನ ಬಂಧ ತೀರಿತು ಇನ್ನು ಎನ್ನ ಕ್ಲೇಶ ಹೋಯಿತು
ಇನ್ನು ಅನ್ಯರ ಭಜಿಸಲ್ಯಾಕೆ ಮನ್ನಿಸೋ ಹಯವದನನೆ ||೫||

kaMDe kaMDenu kRuShNa ninnaya divya maMgaLa mUrtiya
kaMDu badukide iMdu nAnu karuNisO ennoDeyanE ||pa||
 
uTTadaTTiyu piDida vaMkiyu toTTa kaustuBa BUShaNa |
meTTida navaratnad~hAvige iTTa kastUri tilakavu ||1||
 
maMdahAsavu daMtapaMktiyu celuva kaDegaNNa nOTavu
aMdavAda kuruLu kUdalu muddu suriyuva muKavanA ||2||
 
molle mallige daMDe koraLali celva kaMkaNa kaiyali ||
golla satiyara kucagaLalli Jallu JalleMdu nalivanA ||3||

suraru puShpada vRuShThi kareyalu asurarellaru ODalu ||
krUra kALiya PaNagaLalli dhIra nali nalidADalu ||4||
 
innu enna baMdha tIritu innu enna klESa hOyitu
innu anyara BajisalyAke mannisO hayavadanane ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru