ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮರುದಂಶ ಮಧ್ವಮುನಿರನ್ನ | ಹಯವದನ | Marudamsha Madhwamuni | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಮರುದಂಶ ಮಧ್ವಮುನಿರನ್ನ ನಿನಗೆ
ಸರಿಗಾಣೆ ಜಗದೊಳಗೆ ಸರ್ವರೊಳು ಪೂರ್ಣ ||ಪ||

ಹಿಂದೆ ರಾಮರು ಮುಂದೆ ಬಂಟನಾಗಿ ನೀ ನಿಂದೆ
ಚಂದ್ರದೋಣದ ಗಿರಿಯ ತಂದೆ ದನುಜರ ಕೊಂದೆ
ಎಂದೆಂದಿಗಳಿವಿಲ್ಲದ ಬ್ರಹ್ಮ ಪದವಿಗೆ ಸಂದೆ
ಇಂದ್ರಾದಿ ಸುರರುಗಳ ತಂದೆ ಸ್ವಾಮಿ
ಇಂದೆಲ್ಲರಿಗೆ ನೀನು ಗುರುವೆನಿಸಿ ನಿಂದೆ ||೧||

ಕೌರವಬಲವ ತರಿದೆ ಕೀಚಕನ ಕುಲವ ಮುರಿದೆ
ಓರ್ವನೆ ಬೇಸರದೆ ಷಡ್ರಥಿಕರನು ಗೆಲಿದೆ
ಉರ್ವಿಯೊಳು ಭುಜಬಲದಿ ಭೀಮನೆನಿಸಿ ಮೆರೆದೆ
ಹರಿಯ ಕಿಂಕರರ ಪೊರೆದೆ ಈಗ
ಸರ್ವವನು ತೊರೆದು ಶಾಸ್ತ್ರಾಮೃತವಗರೆದೆ ||೨||

ದುರುಳವಾದಿಗಳೆನಿಪ ಘನ ತಾಮಸಕೆ ದಿನಪ
ಸಿರಿಯರಸ ಹಯವದನ ಪದಕಂಜಯುಗ ಮಧುಪ
ಗುರುಮಧ್ವಮುನಿಪ ನಿರ್ಲೇಪ ಶುದ್ಧಸ್ಥಾಪ
ವರ ವಿದ್ಯಾ ಪ್ರತಾಪ ಭಾಪುರೆ
ಪರಮಪಾವನರೂಪ ಭಳಿರೆ ಪ್ರತಾಪ ||೩||   

marudaMsha madhwamuniranna ninage
sarigaaNe jagadoLage sarvaroLu poorNa ||pa||

hiMde raamaru muMde baMTanAgi nI niMde
chaMdradONada giriya taMde danujara koMde
eMdeMdigaLivillada brahma padavige saMde
iMdrAdi surarugaLa taMde swAmi
iMdellarige nInu guruvenisi niMde ||1||

kouravabalava taride kIchakana kulava muride
Orvane bEsarade ShaDrathikaranu gelide
urviyoLu bhujabaladi bhImanenisi merede
hariya kiMkarara porede Iga
sarvavanu toredu shaastraamRutavagarede ||2||

duruLavaadigaLenipa ghana taamasake dinapa
siriyarasa hayavadana padakaMjayuga madhupa
gurumadhwamunipa nirlEpa shuddhasthaapa
vara vidyaa prataapa bhaapure
paramapaavanaroopa bhaLire prataapa ||3||   

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru