ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಾಣಿ ಪರಮ ಕಲ್ಯಾಣಿ | ಹಯವದನ | Vani Parama Kalyani | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ವಾಣಿ ಪರಮ ಕಲ್ಯಾಣಿ 
ನಮೋ ನಮೋ ಅಜನ ರಾಣಿ ಪಂಕಜಪಾಣಿ ||ಪ||

ಭಳಿರೆ ಭಳಿರೆ ಅಂಬೆ ಭಕ್ತಜನ ಸುಖದಂಬೆ 
ಸುಳಿದಾಡು ಶುಭ ನಿತಂಬೆ ಅಮ್ಮ ನಿಮ್ಮ || 
ಹೊಳೆ ಹೊಳೆವ ಮುಖ ಮುಕುರಬಿಂಬೆ 
ಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿ ಬೊಂಬೆ ||೧||

ಶರಣು ಶರಣೆಲೆ ದೇವಿ ಸ್ಮರಣೆ ಮಾತ್ರದಿ ಕಾಯ್ವೆ 
ಚರಣದಂದುಗೆಯ ಠೀವಿ ನಳಿನಳಿಸುವ ಆಭರಣಗಳನಿಟ್ಟು 
ಸುಖವನೀವೆ ಧರೆಯೊಳಗೆ ಹರಿಣಾಕ್ಷೀ ನೀ ಸಲಹೆ ವಾಗ್ದೇವಿ ||೨||

ಜಯ ಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆ 
ದಯಮಾಡು ಧವಳಗೀತೆ ಸತತ ಶ್ರೀ ಹಯವದನ ಪದಕೆ 
ಪ್ರೀತೆ ಇಳೆಯೊಳಗೆ ನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ ||೩||

vaaNi parama kalyANi 
namO namO ajana rANi paMkajapANi ||pa||

BaLire BaLire aMbe Baktajana suKadaMbe 
suLidADu SuBa nitaMbe amma nimma || 
hoLe hoLeva muKa mukurabiMbe 
iLeyoLage sarigANe SAradAMbe putthaLi boMbe ||1||

SaraNu SaraNele dEvi smaraNe mAtradi kAyve 
charaNadaMdugeya ThIvi naLinaLisuva ABaraNagaLaniTTu 
suKavanIve dhareyoLage hariNAkShI nI salahe vAgdEvi ||2||

jaya jayatu jaganmAte jagadoLage praKyAte 
dayamADu dhavaLagIte satata SrI hayavadana padake 
prIte iLeyoLage nayadi gelisenna mAte vidhikAMte ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru