ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಮ್ಮ ಗುಮ್ಮ ಬಂದಿಹ | ವಿಜಯವಿಠಲ | Amma gumma bandiha | Vijaya Vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಅಮ್ಮ ಗುಮ್ಮ ಬಂದಿಹ ಬಾಗಿಲ ಮುಚ್ಚೆ ||ಪ||
ಅಮ್ಮ ಅಂಜಿಪ ಅದ್ಭುತ ರೂಪನು ದಮ್ಮಯ್ಯ ಎಂಬೆನು
ಆತನ ಕಳುಹೆ ||ಅಪ||

ಗೂಳಿಯನೇರಿ ಬಂದಿಹನಮ್ಮ 
ಗಜಚರ್ಮವ ಹೊದ್ದು ಶೂಲವ
ಕೈಯಲ್ಲಿ ಹಿಡಿದಿಹನಮ್ಮ 
ಕಾಳ ಸರ್ಪವು ಕೊರಳೊಳಗಮ್ಮ ಪಾಲದಿ ಕೆಂಡವ ಸುರಿಸುವನಮ್ಮ ||೧||

ಉರಿಮುಖ ಗಡ್ಡ ಕೆಂಜೆಡೆಗಳು ಕೈಯಲ್ಲಿ ನೋಡೆ
ಹಿಡಿದಾ ಬ್ರಹ್ಮನ ಶಿರದ ಹೋಳು 
ಕಡಿದ ತಲೆಗಳು ಕೊರಳೊಳಗಮ್ಮ
ಬಳಿದ ವಿಭೂತಿಯ ರೂಪ ನೋಡಮ್ಮ ||೨||

ಮೂರೂರು ಪದವನೀವನಮ್ಮ
ಕಣ್ಣೆಲ್ಲ ನೋಡೆ ಮೂರು ಲೋಕವ ಸುಡುವೋನಮ್ಮ
ಮಾರಜನಕ ನಮ್ಮ ವಿಜಯವಿಠಲನ
ಊರೂರಲೆಯುತ ಹುಡುಕುವನಮ್ಮ ||೩||  

amma gumma baMdiha baagila muchche ||pa||
amma aMjipa adbhuta roopanu dammayya eMbenu
aatana kaLuhe ||apa||

gULiyanEri baMdihanamma 
gajacharmava hoddu SUlava
kaiyalli hiDidihanamma 
kaaLa sarpavu koraLoLagamma paaladi keMDava surisuvanamma ||1||

urimukha gaDDa keMjeDegaLu kaiyalli nODe
hiDidaa brahmana shirada hOLu 
kaDida talegaLu koraLoLagamma
baLida vibhUtiya rUpa nODamma ||2||

mUrUru padavanIvanamma
kaNNella nODe mUru lOkava suDuvOnamma
maarajanaka namma vijayaviThalana
UrUraleyuta huDukuvanamma ||3||  

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru