ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕರ್ತಾ ಕೃಷ್ಣಯ್ಯ ನೀ ಬಾರಯ್ಯಾ | ಪ್ರಸನ್ನವೇಂಕಟ | Karta Krishnayya | Prasanna Venkata


ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು 
Kruti: Sri Prasanna Venkata Dasaru


ಕರ್ತಾ ಕೃಷ್ಣಯ್ಯ ನೀ ಬಾರಯ್ಯಾ 
ಎನ್ನಾರ್ತ ಧ್ವನಿಗೊಲಿದು ನೀ ಬಾರಯ್ಯ ||ಪ||

ಸುಗುಣದ ಖಣಿಯೇ ನೀ ಬಾರಯ್ಯಾ 
ನಮ್ಮಘವ ಓಡಿಸಲು ನೀ ಬಾರಯ್ಯಾ|
ಧಗೆಯೇರಿತು ತಾಪಾ ನೀ ಬಾರಯ್ಯಾ 
ಸದ ಮುಗುಳ್ನಗೆ ಮಳೆಗೆರೆಯೆ ನೀ ಬಾರಯ್ಯಾ ||೧||

ವೈರಿ ವರ್ಗದಿ ನೊಂದೆ ನೀ ಬಾರಯ್ಯ
ಮತ್ತಾರು ಗೆಳೆಯರಿಲ್ಲಾ ನೀ ಬಾರಯ್ಯಾ|
ಸೇರಿದೆ ನಿನ್ನ ಕರುಣೆಗೆ ನೀ ಬಾರಯ್ಯಾ 
ಒಳ್ಳೆ ದಾರಿಯ ತೋರಲು ನೀ ಬಾರಯ್ಯ ||೨||

ವೈರಾಗ್ಯ ಭಾಗ್ಯ ಕೊಡು ನೀ ಬಾರಯ್ಯ
ನಾನಾರೋಗದ ಬೇಷಜಾ ನೀ ಬಾರಯ್ಯಾ|
ಜಾರುತದಾಯು ಬೇಗ ನೀ ಬಾರಯ್ಯಾ 
ಉದಾರಿ ಪ್ರಸನ್ವೆಂಕಟ ನೀ ಬಾರಯ್ಯ ||೩||


kartA kRuShNayya nI bArayyA 
ennArta dhvanigolidu nI bArayya ||pa||
 
suguNada KaNiyE nI bArayyA 
nammaGava ODisalu nI bArayyA|
dhageyEritu tApA nI bArayyA 
sada muguLnage maLegereye nI bArayyA ||1||
 
vairi vargadi noMde nI bArayya
mattAru geLeyarillA nI bArayyA|
sEride ninna karuNege nI bArayyA 
oLLe dAriya tOralu nI bArayya ||2||
 
vairAgya BAgya koDu nI bArayya 
nAnArOgada bEShajA nI bArayyA|
jArutadAyu bEga nI bArayyA 
udAri prasanveMkaTa nI bArayya ||3||

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru