ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಘವೇಂದ್ರ ತೀರ್ಥನೀತಾ | ಮಧ್ವೇಶ ವಿಠ್ಠಲ | Raghavendra Teerthaneeta | Madhwesha Vithala


ಸಾಹಿತ್ಯ : ಶ್ರೀ ಮಧ್ವೇಶ ವಿಠ್ಠಲ ದಾಸರು 
Kruti: Sri Madhwesha Vithala Dasaru

 

ರಾಘವೇಂದ್ರ ತೀರ್ಥನೀತಾ | ರಾಜಿಸುವಾತಾ ವಿರಾಜಿಸುವಾತಾ |
ಗುರು ರಾಘವೇಂದ್ರ ತೀರ್ಥನೀತಾ ||ಪ||

ಬಣ್ಣಬಣ್ಣದಿಂದ ಬಹಳ ಭೋದಿಸುವಾತಾ |
ನಮ್ಮ ಸಣ್ಣ ದೊಡ್ಡಾಭೀಷ್ಟಗಳನು ಸಾಧಿಸುವಾತಾ ||
ಪುಣ್ಯವಂತರಿಂದ ಬಹಳ ಪೂಜೆಗೊಂಬಾತಾ |
ನಮಗೆ ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ ||೧||

ಕಾಮ ಕ್ರೋದಾಧಿಗಳನ್ನು ಕಾಲಿಲೊದ್ದಾತ |
ಈತ ವ್ಯೋಮಕೇಶನಂತೆ ನಾಲ್ಕು ವೇದ ವಿಖ್ಯಾತ ||
ಭೂಮಿಯೊಳ್ ದುರ್ವಾದಿಗಳೆಲ್ಲ ದೂರಿಗೆದ್ದಾತ |
ಶ್ರೀ ಯೋಗೀಂದ್ರ ತೀರ್ಥರೆ ಶಿಷ್ಯನೆಂಬಾತ ||೨||

ಸಿದ್ಧ ವಿದ್ಯೆಗಳಲಿ ಬಹು ಪ್ರಸಿದ್ಧನಾದಾತಾ |
ನಮಗೆ ಮಧ್ವ ಶಾಸ್ತ್ರಗಳನ್ನೆಲ್ಲಾ ಹೇಳಿಕೊಟ್ಟಾತಾ ||
ಮಧ್ವೇಶ ವಿಠ್ಠಲನ ಧ್ಯಾನದಲ್ಲಿರುವ |
ತುಂಗಭದ್ರ ತೀರದಲ್ಲಿ ತಾನು ವಾಸವಾದಾತಾ ||೩||

rAGavEMdra tIrthanItA | rAjisuvAtA virAjisuvAtA |
guru rAGavEMdra tIrthanItA ||pa||
 
baNNabaNNadiMda bahaLa BOdisuvAtA |
namma saNNa doDDABIShTagaLanu sAdhisuvAtA ||
puNyavaMtariMda bahaLa pUjegoMbAtA |
namage kaNNa habbavAguvaMte kANisuvAtA ||1||
 
kAma krOdAdhigaLannu kAliloddAta |
Ita vyOmakESanaMte nAlku vEda viKyAta ||
BUmiyoL durvAdigaLella dUrigeddAta |
SrI yOgIMdra tIrthare SiShyaneMbAta ||2||
 
siddha vidyegaLali bahu prasiddhanAdAtA |
namage madhva SAstragaLannellA hELikoTTAtA ||
madhvESa viThThalana dhyAnadalliruva |
tuMgaBadra tIradalli tAnu vAsavAdAtA ||3||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru