ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹೊಡಿ ನಗಾರಿ ಮೇಲೆ | ಪ್ರಾಣಪತಿ ವಿಠಲ | Hodi Nagari Mele | Pranapati Vithala


ಸಾಹಿತ್ಯ : ಶ್ರೀ ಪ್ರಾಣಪತಿ ವಿಠಲ ದಾಸರು  
Kruti:Sri Pranapati Vittala Dasaru


ಹೊಡಿ ನಗಾರಿ ಮೇಲೆ ಕೈಯ್ಯ | ಗಡ ಗಡ ಹೊಡಿ || ಪ ||
ಕಡು ವಾದಿರಾಜರು ದೃಢ ಋಜುಗಣರೆಂದ್ಹೊಡಿ || ಅಪ ||

ಹಯಮುಖ ಪಾದ ದ್ವಯ ಸೇವಕರು 
ಜಯಶೀಲರು ನಿಜಭಯ ಹರರೆಂದ್ಹೊಡಿ || ೧ ||

ಮೋದ ತೀರ್ಥ ಮತ ಸಾಧಿಸಿ ಮೆರೆಸುವ
ವಾದಿರಾಜ ಗುರು ಪೂರ್ಣ ಬೋಧರು ಸಮರೆಂದ್ಹೊಡಿ || ೨ ||

ಇಂದಿರಾ ಪತಿಯ ಪೂರ್ಣ ಚಂದದಿ ಪೂಜಿಪ
ನಂದಿವಾಹನ ಮುಖ್ಯ ವಂದ್ಯರು ಇವರೆಂದ್ಹೊಡಿ || ೩ ||

ಕಲಿಮುಖ್ಯ ದಾನವ ಬಲವ ಜಯಿಪ
ನಿಷ್ಕಲುಷ ಚಿತ್ತ ಯತಿಕುಲಭೂಷಣರೆಂದ್ಹೊಡಿ || ೪ ||

ಕಂಸಾದಿ ಮುಖ ಧ್ವಂಸಿ ಸಮೀರಣ
ಹಂಸವಾಹನಂಶಾ ಸಹಿತರೆಂದ್ಹೊಡಿ || ೫ ||

ಲಾತವ್ಯಾತ್ಮಕ ಭೀತಿರಹಿತ ಮಹಾ 
ಪಾತಕಹರ ಸುರನಾಥ ಮಹಿಮರೆಂದ್ಹೊಡಿ || ೬ ||

ಭಾವೀ ಭಾರತೀದೇವಿ ಕರಕಮಲ ಸೇವಿತ 
ಪದ ರಾಜೀವ ದ್ವಯರೆಂದ್ಹೊಡಿ || ೭ ||

ದೂಷಕರನು ಬಹು ಘಾಸಿಕೊಟ್ಟು ನಿಜ
ದಾಸರ ತೋಷಿಸಿ ಪೋಷಿಪರೆಂದ್ಹೊಡಿ || ೮ ||

ವೃಂದಾವನ ಸದಮಂದಾಖ್ಯಾನವ
ಭೂವೃಂದಕರಿಗೆ ತಿಳಿಪರಿವರೆಂದ್ಹೊಡಿ || ೯ ||

ಸುಂದರ ಪಂಚ ಸುವೃಂದಾವನದೊಳು ವೃಂದಾರಕ 
ಮುನಿ ವೃಂದ ವಂದಿತರಿವರೆಂದ್ಹೊಡಿ || ೧೦ ||

ಸಾನುರಾಗದಿ ಪ್ರಾಣಪತಿ ವಿಠಲನ
ಧ್ಯಾನದಿಂದ ಸನ್ಮಾನಿತರಿವರೆಂದ್ಹೊಡಿ || ೧೧ ||

hoDi nagaari mEle kaiyya | gaDa gaDa hoDi || pa ||
kaDu vaadiraajaru dRuDha RujugaNareMd~hoDi || apa ||

hayamuKa paada dvaya sEvakaru 
jayashIlaru nijabhaya harareMd~hoDi || 1 ||

mOda tIrtha mata saadhisi meresuva
vaadiraaja guru pUrNa bOdharu samareMd~hoDi || 2 ||

iMdiraa patiya pUrNa caMdadi pUjipa
naMdivaahana muKya vaMdyaru ivareMd~hoDi || 3 ||

kalimuKya daanava balava jayipa
niShkaluSha citta yatikulabhUShaNareMd~hoDi || 4 ||

kaMsaadi muKa dhvaMsi samIraNa
haMsavaahanaMshaa sahitareMd~hoDi || 5 ||

laatavyaatmaka bhItirahita mahaa 
paatakahara suranaatha mahimareMd~hoDi || 6 ||

bhaavI bhaaratIdEvi karakamala sEvita 
pada raajIva dvayareMd~hoDi || 7 ||

dUShakaranu bahu GaasikoTTu nija
daasara tOShisi pOShipareMd~hoDi || 8 ||

vRuMdaavana sadamaMdaaKyaanava
bhUvRuMdakarige tiLiparivareMd~hoDi || 9 ||

suMdara paMca suvRuMdaavanadoLu vRuMdaaraka 
muni vRuMda vaMditarivareMd~hoDi || 10 ||

saanuraagadi praaNapati viThalana
dhyaanadiMda sanmaanitarivareMd~hoDi || 11 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru