Posts

Showing posts from March, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜನುಮ ಜನುಮದೊಳು | ಸಿರಿ ಕೃಷ್ಣ | Januma Janumadolu | Sri Vyasarajaru

Image
ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ಜನುಮ ಜನುಮದೊಳು ಕೊಡು ಕಂಡ್ಯಾ ಹರಿಯೇ ||ಪ|| ಅನಿಮಿತ್ತ ಬಂಧು ಶ್ರೀಕೃಷ್ಣ ದಯದಿಂದಲೆನಗೆ ||ಅಪ|| ಮೆರೆವ ಊರ್ಧ್ವ ಪುಂಡ್ರ ಎರಡಾರು ನಾಮವು ಕೊರಳೊಳು ತುಳಸಿಯ ವನಮಾಲೆಯು ಮೆರೆವ ಶಂಖ ಚಕ್ರ ಭುಜದೊಳೊಪ್ಪುವ ನಿಮ್ಮ ಸ್ಮರಿಸುತ ಹಿಗ್ಗುವ ವೈಷ್ಣವ ಜನುಮವ ||೧|| ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮ ಹರ ಇಂದ್ರಾದ್ಯರು ತವ ಸೇವಕರು ವರತಾರತಮ್ಯ ಪಂಚ ಭೇದ ಸತ್ಯವೆಂದು ನೆರೆ ಪೇಳುವ ವಾಯು ಮತದ ಸುಜ್ಞಾನವ ||೨||   ಸಕಲ ವಿಭುದೋತ್ತಮರಲ್ಲಿ ನಮ್ರತೆಯು ಸುಖತೀರ್ಥರಲ್ಲಿ ಮುಖ್ಯ ಗುರು ಭಾವನೆಯು ಮುಕುತಿ ಪ್ರದಾಯಕ ಸಿರಿಕೃಷ್ಣ ನಿನ್ನಲ್ಲಿ ಅಕಳಂಕವಾದ ನವವಿಧ ಭಕುತಿಯ ||೩|| januma janumadoLu koDu kaMDyA hariyE ||pa|| animitta baMdhu shrIkRuShNa dayadiMdalenage ||apa|| mereva Urdhwa puMDra eraDaaru naamavu koraLoLu tuLasiya vanamaaleyu mereva shaMkha chakra bhujadoLoppuva nimma smarisuta higguva vaiShNava janumava ||1|| hariye sarvOttama raaNi lakumi bomma hara iMdraadyaru tava sEvakaru varataaratamya paMcha bhEda satyaveMdu nere pELuva vaayu matada suj~jAnava ||2||   sakala vibhudOttamaralli namr...

ಸಾಸಿರ ಜಿಹ್ವೆಗಳುಳ್ಳ | ರಂಗವಿಠಲ | Sasira Jihvegalulla | Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು  ವ್ಯಾಸಮುನಿರಾಯರ ಸಂನ್ಯಾಸದಿರವ ||ಪ|| ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ ದೇಶವ ತಿರುಗಿ ಸಂಚಾರ ಮಾಡುತ ಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನ ಮೋಸಮಾಡಿ ಕಳೆವ ಸಂನ್ಯಾಸಿಗಳು ಸರಿಯೆ ||೧|| ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ- ಸುರರೊಂದು ಲಕ್ಷಕುಟುಂಬಗಳ ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾ- ಯರ ಗುಣಗಣ ಗಾಂಭೀರ್ಯಾದಿಗಳ ||೨|| ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ ಯುಗಳವನರ್ಚಿಸಿ ಭಕುತಿಯಿಂದ ರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರ ರಂಗವಿಠಲನನ್ನು ಬಿಡೆಬಿಡೆನು ಎಂಬ ||೩||  saasira jihwegaLuLLa shEShane koMDaaDabEku  vyaasamuniraayara saMnyaasadirava ||pa|| AseyiMda tammudara pOShaNakaagi Chappanna dEshava tirugi saMchaara maaDuta mIsala maDi bachchiTTu miMchukULanuMDu dina mOsamADi kaLeva saMnyaasigaLu sariye ||1|| kere baavi pura agrahaaraMgaLa maaDi bhU- suraroMdu lakShakuTuMbagaLa poreva vaibhava kIrtiyiMdali vyaasaraa- yara guNagaNa gaaMbhIryaadigaLa ||2|| hagaliruLennade aavaaga shrIhari padapadma yugaLavanarchisi bhakutiyiM...

ರಾಜ ಬೀದಿಯೊಳಗಿಂದಾ | ವಾದಿರಾಜರು | Raja beediyolaginda | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana)   ರಾಜ ಬೀದಿಯೊಳಗಿಂದಾ  ಕಸ್ತೂರಿ ರಂಗಾ,  ತೇಜನೇರಿ ಮೆರೆದು ಬಂದಾ |ಪ| ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ|  ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯೂ|  ವಿಸ್ತರದಿ ಭೂಸುರರು ಸುತ್ತು ಗಟ್ಟಿ ನಿಂತಿರಲು|  ಮತ್ತೆ ನಮ್ಮಳಂತು ತೇಜ ಮೆಲ್ಲನೆ ನಡೆಸುತ್ತಾ ಜಾಣ |೧| ತಾಳ ಶಂಖ ಭೇರಿ ತಂಬೂರಿ ಮೊದಲಾದ|  ಮೇಲು ಪಂಚಾಂಕಗಳೆಲ್ಲ ಹೊಗಳಿ ಹೊಗಳಲು|  ಗಾಳಿ ಗೋಪುರದ ಮುಂದೆ ದಾಳಿ ಮಾಡುವಂತೆ ಸುತ್ತು|  ಧೂಳಿಯನೆಬ್ಬಿಸಿ ವೈಯ್ಯಾಳಿಯನಿಕ್ಕುತ ಜಾಣ |೨| ವೇದ ಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು|  ಮೋದದಿಂದ ಗಾಯಕರು ಮೈರಿ ಪಾಡಲು|  ಹಾದಿ ಬೀದಿಯಲಿ ನಿಂತ ಭೂಸುರ ಜನರಿಗೆಲ್ಲಾ|  ಆದರದಿಂದ ಇಷ್ಟಾಮೃತವನಿಕ್ಕುತ ಜಾಣ |೩| ರಂಬೆ ಮೊದಲಾದ ಸುರ ರಮಣಿಯರು|  ತುಂಬಿದಾರತಿಯ ಪಿಡಿದು ಕೂಡಿ ಪಾಡಲು|  ಶಂಭು ಮುಖ ನಿರ್ಜರನೇಕ ಪರಾಕು ಎನ್ನುತಾ|  ಅಂಬುಧಿ ಭವಾದ್ಯಗಳ ಆಳಿದ ಶ್ರೀ ರಂಗನಾಥ |೪| ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು|  ಮುಚ್ಚಿ ತಂದ ಕೆನೆ ಮೊಸರು ಮೀಸಲು ಬೆಣ್ಣೆಯು|  ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು|  ಮೆಚ್ಚಿ ಉಂಡು ಪಾನಕ ನೀರ ಮಜ್ಜಿಗೆಗಳ ಸವಿದ ಬೇಗಾ |೫| ಮುತ್ತಿನ ತುರಾಯಿ ಅಂಗಿ ಮುಂಡಾಸದಿ|  ತತ್ತಳಿಪ ತಾಳಿ ವಜ್ರ ತಾಳ...

ಹೊಡಿ ನಗಾರಿ ಮೇಲೆ | ಪ್ರಾಣಪತಿ ವಿಠಲ | Hodi Nagari Mele | Pranapati Vithala

Image
ಸಾಹಿತ್ಯ : ಶ್ರೀ ಪ್ರಾಣಪತಿ ವಿಠಲ ದಾಸರು   Kruti:Sri Pranapati Vittala Dasaru ಹೊಡಿ ನಗಾರಿ ಮೇಲೆ ಕೈಯ್ಯ | ಗಡ ಗಡ ಹೊಡಿ || ಪ || ಕಡು ವಾದಿರಾಜರು ದೃಢ ಋಜುಗಣರೆಂದ್ಹೊಡಿ || ಅಪ || ಹಯಮುಖ ಪಾದ ದ್ವಯ ಸೇವಕರು  ಜಯಶೀಲರು ನಿಜಭಯ ಹರರೆಂದ್ಹೊಡಿ || ೧ || ಮೋದ ತೀರ್ಥ ಮತ ಸಾಧಿಸಿ ಮೆರೆಸುವ ವಾದಿರಾಜ ಗುರು ಪೂರ್ಣ ಬೋಧರು ಸಮರೆಂದ್ಹೊಡಿ || ೨ || ಇಂದಿರಾ ಪತಿಯ ಪೂರ್ಣ ಚಂದದಿ ಪೂಜಿಪ ನಂದಿವಾಹನ ಮುಖ್ಯ ವಂದ್ಯರು ಇವರೆಂದ್ಹೊಡಿ || ೩ || ಕಲಿಮುಖ್ಯ ದಾನವ ಬಲವ ಜಯಿಪ ನಿಷ್ಕಲುಷ ಚಿತ್ತ ಯತಿಕುಲಭೂಷಣರೆಂದ್ಹೊಡಿ || ೪ || ಕಂಸಾದಿ ಮುಖ ಧ್ವಂಸಿ ಸಮೀರಣ ಹಂಸವಾಹನಂಶಾ ಸಹಿತರೆಂದ್ಹೊಡಿ || ೫ || ಲಾತವ್ಯಾತ್ಮಕ ಭೀತಿರಹಿತ ಮಹಾ  ಪಾತಕಹರ ಸುರನಾಥ ಮಹಿಮರೆಂದ್ಹೊಡಿ || ೬ || ಭಾವೀ ಭಾರತೀದೇವಿ ಕರಕಮಲ ಸೇವಿತ  ಪದ ರಾಜೀವ ದ್ವಯರೆಂದ್ಹೊಡಿ || ೭ || ದೂಷಕರನು ಬಹು ಘಾಸಿಕೊಟ್ಟು ನಿಜ ದಾಸರ ತೋಷಿಸಿ ಪೋಷಿಪರೆಂದ್ಹೊಡಿ || ೮ || ವೃಂದಾವನ ಸದಮಂದಾಖ್ಯಾನವ ಭೂವೃಂದಕರಿಗೆ ತಿಳಿಪರಿವರೆಂದ್ಹೊಡಿ || ೯ || ಸುಂದರ ಪಂಚ ಸುವೃಂದಾವನದೊಳು ವೃಂದಾರಕ  ಮುನಿ ವೃಂದ ವಂದಿತರಿವರೆಂದ್ಹೊಡಿ || ೧೦ || ಸಾನುರಾಗದಿ ಪ್ರಾಣಪತಿ ವಿಠಲನ ಧ್ಯಾನದಿಂದ ಸನ್ಮಾನಿತರಿವರೆಂದ್ಹೊಡಿ || ೧೧ || hoDi nagaari mEle kaiyya | gaDa gaDa hoDi || pa || kaDu vaadiraajaru dRuDha RujugaNareMd~hoDi || apa || hayamuK...

ಸಂತೈಸು ತವದಾಸ | ವೇಣುಗೋಪಾಲವಿಟ್ಠಲ | Santaisu tava | Venugopalavithala

Image
ಸಾಹಿತ್ಯ : ಶ್ರೀ ವೇಣುಗೋಪಾಲವಿಠಲ ದಾಸರು  Kruti:Sri Venugopala Vithala Dasaru ಸಂತೈಸು ತವದಾಸನೆಂದೆನ್ನನೂ ||ಪ|| ಸ್ವಾಂತದಲಿ ನೆಲೆಸಿ ಏಕಾಂತ ಭಕ್ತೋತ್ತಮನೆ ||ಅಪ|| ವಾಗೀಶ ಮುನಿಕರಾಂಬುಜದಿಂದ ಸಂಭವಿಸಿ ಆಗಮೋಕ್ತಾರ್ಥಗಳ ಶಿಷ್ಯರಾದ ಭಾಗವತ ಜನರಿಗುಲ್ಹಾಸದಲಿ ಬಿಡದೆ ಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು ಸುರತರುವೇ ||೧|| ಮೋದತೀರ್ಥಾರ್ಯರ ಸುವಂಶಾಂಬುನಿಧಿ ಚಂದ್ರ ಸಾಧಿಸುವೆ ದುಃಶಾಸ್ತ್ರಗಳನೆ ಮುರಿದು ವಾದದಿಂದಲಿ ಸಕಲ ಮೇದಿನಿಯೊಳಿಪ್ಪ ದು- ರ್ವಾದಿಗಳ ಭಂಗಿಸಿದ ಮಾಧವನ ಪ್ರಿಯ ಪಾಹಿ ||೨|| ಕಲಿಕೃತಾಚರಣೆಗಳು ಬಲಿಯಲ್ಹರಿ ಆಜ್ಞದಿಂ ದಿಳೆಯೊಳವತರಿಸಿ ಸಜ್ಜನರಿಗೆಲ್ಲಾ ತಿಳುಹಿ ಪರತತ್ವವನು ಶಾಸ್ತ್ರಮುಖದಿಂದ ಯತಿ ಕುಲತಿಲಕ ನಂಬಿದವರಿಗೆ ನಿತ್ಯ ಸುರಧೇನು ||೩|| ಪಾದಚಾರಿಗಳಾಗಿ ತೀರ್ಥಯಾತ್ರೆಗಳ ಸ- ಮೋದದಲಿ ಚರಿಸುತ್ತ ಚಮತ್ಕೃತಿಯಲೀ ಸಾಧು ಸಮ್ಮತವಾದ ತೀರ್ಥಪ್ರಬಂಧವನು ಆದರದಿ ರಚಿಸಿದ ಮಹಾ ದಯಾಂಬುಧಿಯೆ ||೪|| ಕ್ಷೋಭಕಾಲದಲಿ ಸಂಚರಿಸುತಿರಲು ಅ- ಹೋಬಲದಿ ನೈವೇದ್ಯ ಕಲಹದಿಂದ ಕ್ಷೋಭಿಗರ ಮಿಶ್ರಿತಾನ್ನವನ್ನುಂಡು ಕರಗಿಸಿದೆ ಭಾವಿ ಶ್ರೀಭಾರತಿರಮಣನಂತೆ ಹರಿಯ ಕರುಣದಲಿ ||೫|| ಚಂದ್ರಿಕಾಚಾರ್ಯರಲಿ ಶಿಷ್ಯರಿಂದಲಿ ಚರಿಸಿ ಆ- ನಂದದಲಿ ವ್ಯಾಸಪ್ರತೀಕವನ್ನು ತಂದು ನಿರ್ಭಯದಿ ಸರ್ವತ್ರದಲಿ ಮೆರೆದೆ ಯೋ- ಗೀಂದ್ರ ದಂಡಕಾಷಾಯ ಧರಿಸಿದ ಗುರುವೆ ||೬|| ಅಂಕದಲ್ಲಿಪ್ಪ ಬಾಲಕ ಬರುತಲೆ ಕಂಡು ಶಂಖಚಕ್ರಾಂಕಿತನು ಈತನೆಂದು ಶಂಕಿಸದೆ ಎನಗೆ ಪ್ರ...

ಅಮ್ಮ ಗುಮ್ಮ ಬಂದಿಹ | ವಿಜಯವಿಠಲ | Amma gumma bandiha | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಅಮ್ಮ ಗುಮ್ಮ ಬಂದಿಹ ಬಾಗಿಲ ಮುಚ್ಚೆ ||ಪ|| ಅಮ್ಮ ಅಂಜಿಪ ಅದ್ಭುತ ರೂಪನು ದಮ್ಮಯ್ಯ ಎಂಬೆನು ಆತನ ಕಳುಹೆ ||ಅಪ|| ಗೂಳಿಯನೇರಿ ಬಂದಿಹನಮ್ಮ  ಗಜಚರ್ಮವ ಹೊದ್ದು ಶೂಲವ ಕೈಯಲ್ಲಿ ಹಿಡಿದಿಹನಮ್ಮ  ಕಾಳ ಸರ್ಪವು ಕೊರಳೊಳಗಮ್ಮ ಪಾಲದಿ ಕೆಂಡವ ಸುರಿಸುವನಮ್ಮ ||೧|| ಉರಿಮುಖ ಗಡ್ಡ ಕೆಂಜೆಡೆಗಳು ಕೈಯಲ್ಲಿ ನೋಡೆ ಹಿಡಿದಾ ಬ್ರಹ್ಮನ ಶಿರದ ಹೋಳು  ಕಡಿದ ತಲೆಗಳು ಕೊರಳೊಳಗಮ್ಮ ಬಳಿದ ವಿಭೂತಿಯ ರೂಪ ನೋಡಮ್ಮ ||೨|| ಮೂರೂರು ಪದವನೀವನಮ್ಮ ಕಣ್ಣೆಲ್ಲ ನೋಡೆ ಮೂರು ಲೋಕವ ಸುಡುವೋನಮ್ಮ ಮಾರಜನಕ ನಮ್ಮ ವಿಜಯವಿಠಲನ ಊರೂರಲೆಯುತ ಹುಡುಕುವನಮ್ಮ ||೩||   amma gumma baMdiha baagila muchche ||pa|| amma aMjipa adbhuta roopanu dammayya eMbenu aatana kaLuhe ||apa|| gULiyanEri baMdihanamma  gajacharmava hoddu SUlava kaiyalli hiDidihanamma  kaaLa sarpavu koraLoLagamma paaladi keMDava surisuvanamma ||1|| urimukha gaDDa keMjeDegaLu kaiyalli nODe hiDidaa brahmana shirada hOLu  kaDida talegaLu koraLoLagamma baLida vibhUtiya rUpa nODamma ||2|| mUrUru padavanIvanamma kaNNella nODe mUru lOkava suDuvOnamma maarajanaka namma vijayaviThalana UrUr...

ಈತನೇ ಕಾಣಿರೋ ಮಧ್ವಮುನಿ | ಹಯವದನ | Itane Kaniro Madhwamuni | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಈತನೇ ಕಾಣಿರೋ ಮಧ್ವಮುನಿ || ಪ ||  ಪರಿಪರಿ ಶೃತಿಗಳೆಂಬ ಗುಹೆಗಳಲಿ  ಕೇಸರಿಯಂತೆ ಚರಿಸುತ್ತ  ಹರಿಯೇ ಸರ್ವೋತ್ತಮ ಎಂಬ ಘೋಷಗಳಿಂದ  ದುರುಳ ವಾದಿಗಳೆಂಬ ನರಿಗಳೋಡಿಸಿದಾತ ||೧|| ಸಕಲಾಗಮಗಳೆಂಬ ಶರಧಿಯೊಳಗೆ  ಯುಕುತಿಯಿಂದಲಿ ಮಥಿಸಿ  ಅಕಳಂಕ ಶ್ರೀ ಹರಿಯೆಂಬ ರತ್ನವ ಕಂಡು  ಮುಕುಟದೊಳಿಟ್ಟು ಲೋಕದಿ ಮೆರೆಸಿದಾತ ||೨|| ವೇದಸಾರ ಈಶನೆಂಬ ತತ್ತ್ವವಾದ  ಸುಧೆಯ ಕಲ್ಪಿಸಿಕೊಂಡು ಆದಿ ಮೂರುತಿ  ಶ್ರೀಹಯವದನನ ದಿವ್ಯಪಾದ  ಸೇವಕನಾದ ಮಧ್ವಮುನಿಯೆಂಬಾತ ||೩|| ItanE kANirO madhvamuni || pa ||  paripari SRutigaLeMba guhegaLali  kEsariyaMte carisutta  hariyE sarvOttama eMba GOShagaLiMda  duruLa vAdigaLeMba narigaLODisidAta ||1|| sakalAgamagaLeMba SaradhiyoLage  yukutiyiMdali mathisi  akaLaMka SrI hariyeMba ratnava kaMDu  mukuTadoLiTTu lOkadi meresidAta ||2||   vEdasAra IshaneMba tattvavAda  sudheya kalpisikoMDu Adi mUruti  SrIhayavadanana divyapAda  sEvakanAda madhvamuniyeMbAta ||3||  

ಏನು ಸುಖವೋ ಎಂಥಾ ಸುಖವೋ | ಗೋಪಾಲ ವಿಠಲ | Enu Sukhavo Entha Sukhavo | Gopala Vithala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು Kruti:Sri Gopala Dasaru ಏನು ಸುಖವೋ ಎಂಥಾ ಸುಖವೋ ||ಪ||  ಹರಿಯ ಧ್ಯಾನ ಮಾಡುವವರ ಸಂಗ ||ಅಪ||  ತಂಬೂರಿ ಮೀಟುತ್ತ ಹೃದಯ ಅಂಬಕದಿಂದ  ಆನಂದ ಅಂಬುಗರೆಯುತ್ತ ಬಲು ಸಂಭ್ರಮದಿಂದಿಹರ ಸಂಗ ||೧||  ಗೆಜ್ಜೆಯು ಕಾಲಲ್ಲಿ ಕಟ್ಟಿ ಲಜ್ಜೆ ಬಿಟ್ಟು |  ಹರಿಯ ನಾಮ ಘರ್ಜನೆ ಮಾಡುತ್ತ ಅಘವರ್ಜ್ಯರಾಗಿಹರ ಸಂಗ ||೨||  ಸ್ವರ್ಣಲೋಷ್ಠ ಸಮರೆಂದು ತನ್ನದೆಂಬೋ ಹಮ್ಮು ತೊರೆದು ||  ಘನ್ನ ಮಹಿಮನ್ನ ಪಾಡಿ ಧನ್ಯರಾಗಿಹರ ಸಂಗ ||೩||  ಪುಷ್ಪದಲ್ಲಿ ಸುಗಂಧ ಹ್ಯಾಂಗಿಪ್ಪುದೋ ತದ್ವತ್ತು ಜಗ |  ದಪ್ಪ ಬೊಮ್ಮಾದಿಗಳಲ್ಲಿ ಇಪ್ಪನೆನ್ನುವವರ ಸಂಗ ||೪||  ದರ್ವಿಯಂತೆ ದೇಹವನ್ನು ಸರ್ವದಾ ತಿಳಿದು ಶೇಷ ||  ಪರ್ವತ ವಾಸನ್ನ ನಂಬಿ ಊರ್ವಿಯೊಳಗಿಹರ ಸಂಗ ||೫||  ನಡೆವೋದು ನುಡಿವೋದು ನಿರುತ ಕೊಡುವೋದು ಕೊಂಬೋದು |  ಜಗದೊಡೆಯನ ಪ್ರೇರಣೆಯಂದು ನುಡಿದು ಹಿಗ್ಗುವವರ ಸಂಗ ||೬||  ಸೃಷ್ಟಿಗೊಡೆಯನ ಮನ ಮುಟ್ಟಿ ಭಜಿಸುತ್ತ ಜ್ಞಾನ ||  ಕೊಟ್ಟ ಗೋಪಾಲ ವಿಠಲಗಿಷ್ಟರಾಗಿಹರ ಸಂಗ ||೭||  Enu suKavO eMthA suKavO ||pa||  hariya dhyAna mADuvavara saMga ||apa||    taMbUri mITutta hRudaya aMbakadiMda  AnaMda aMbugareyutta balu saMBramadiMdihara saMga ||1||    gejjeyu kAl...

ವೃಂದಾವನವೇ ಮಂದಿರ | ಪುರಂದರವಿಠಲ | Vrundavanave Mandira | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ ||ಪ|| ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ||ಅಪ|| ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ  ತುಳಸಿ ದರ್ಶನದಿಂ ದುರಿತಗಳೆಲ್ಲವು ದೂರವಾಗುವವು ಕೇಳಿ ತುಳಸಿ ಸ್ಪರ್ಶವ ಮಾಡಿ ದೇಹ ಪಾವನವೆಂದು ತಿಳಿದುದಿಲ್ಲವೇ ಕೇಳಿ  ತುಳಸಿ ಸ್ಮರಣೆ ಮಾಡಿ ಸಕಲೇಷ್ಟವ ಪಡೆದು ನೀವು ಸುಖದಲಿ ಬಾಳಿ ||೧|| ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರು ಲೋಕವಶವಾಹುದು  ಮಾಲೆಗಳನು ಕೊರಳೊಳಿಟ್ಟ ಮನುಜಗೆ ಮುಕ್ತಿ ಮಾರ್ಗವ ನೀವುದು ಕಾಲಕಾಲಗಳಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟು ಹೋಗುವುದು ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವುದು ||೨|| ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ ಪರಮ ಭಕ್ತರ ಘೋರ ಪಾಪವನು ತರಿದು ಪಾವನ ಮಾಡುವ ಶ್ರೀ ತುಳಸೀ ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ಶ್ರೀ ತುಳಸೀ  ಪುರಂದರ ವಿಠಲನ ಚರಣ ಕಮಲಗಳ ಸ್ಮರಣೆ ಕೊಡುವ ಶ್ರೀ ತುಳಸಿ ||೩||  vRuMdaavanavE maMdiravaagiha iMdire shrI tuLasi ||pa|| naMda naMdana mukuMdage priyaLaada caMdada shrI tuLasi ||apa|| tuLasiya vanadali hari ihaneMbuda shRuti saarutide kELi  tuLasi darshanadi...

ಬಾರಯ್ಯ ಶ್ರೀನಿವಾಸ | ವಿಜಯ ವಿಠಲ | Barayya Srinivasa | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ | ತೋರಯ್ಯ ನಿಮ್ಮ ದಯ ತೋಯಜಾಂಬಕನೇ ||ಪ|| ದುರುಳನ ತರಿದಂತ ವರಚಕ್ರಧಾರಿ | ಪರಮಾತ್ಮ ಪರಬ್ರಹ್ಮ ಪರರಿಗುಪಕಾರಿ ||೧|| ವರಶೇಷಗಿರಿಯಲ್ಲಿ ನಿರುತ ನೀ ಇರುವೆ | ಹರಿದಾಸರು ಕರೆದರೆ ಎಲ್ಲಿದ್ದರೂ ಬರುವೆ ||೨|| ಅನಂತನಾಭನೂ ನೀನೇ ಅನಂತ ಸದ್ಗುಣನು | ನೆನೆವರಿಗೊಲಿದಂಥ ಹನುಮಂತ ಈಶ ||೩|| ಅರಣ್ಯದೊಳಗಿದ್ದ ಕರಿರಾಜಗೊಲಿದ | ದುರುಳ ಹಿರಣ್ಯಾಕ್ಷನ ಶಿರವನ್ನೇ ತರಿದು ||೪|| ಅಜಭವಾದಿಪ ನೀನು ವಿಜಯ ಸಾರಥಿಯೇ | ತ್ರಿಜಗವಂದಿತ ಈಶ ವಿಜಯ ವಿಠಲನೆ ||೫|| bArayya SrInivAsa Baktara manege | tOrayya nimma daya tOyajAMbakanE ||pa||   duruLana taridaMta varacakradhAri | paramAtma parabrahma pararigupakAri ||1||   varaSEShagiriyalli niruta nI iruve | haridAsaru karedare elliddarU baruve ||2||   anaMtanABanU nInE anaMta sadguNanu | nenevarigolidaMtha hanumaMta ISa ||3||   araNyadoLagidda karirAjagolida | duruLa hiraNyAkShana SiravannE taridu ||4||   ajaBavaadipa nInu vijaya sArathiyE | trijagavaMdita ISa vijaya viThalane ||5||

ಮುದ್ದು ಮುಖದಾತ ನಮ್ಮ| ಹಯವದನ | Muddu Mukhadata Namma | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮುದ್ದು ಮುಖದಾತ ನಮ್ಮ ಮುಖ್ಯಪ್ರಾಣನಾಥನೋ ||ಪ|| ಸದ್ಗುಣ ವಂದಿತ ವಾಯುಜಾತನೋ ರಾಮದೂತನೋ ||ಅಪ|| ಜಾನಕೀಶನ ವೈರಿ ಶೂಲನೋ  ಶೂಲನೋ ಬಹು ಧೀರನೋ ಮಾನಿನಿ ಸೀತೆಯ ಕಂಡು  ಬಂದನೋ ಮುಂದೆ ನಿಂದನೋ ||೧|| ವಾನರ ರೂಪಿಲಿ ಮುದ್ರೆ ಇತ್ತನೋ  ಇತ್ತನೋ ವನ ಕಿತ್ತನೋ ಆ ನಗರವನ್ನೆಲ್ಲ ಸುಟ್ಟನೋ  ಸುಟ್ಟನೋ ಬಹು ದಿಟ್ಟನೋ ||೨|| ಸಾಗರವನ್ನು ದಾಟಿದ ಧೀರನೋ  ಧೀರನೋ ಕಂಠೀರವನೋ ರಾಗ ತಾಳ ಮೇಳದಲ್ಲಿ  ಜಾಣನೋ ಪ್ರವೀಣನೋ ||೩|| ನಂಬಿದ ಭಕ್ತರ ಕಾಯುವ ದಾತನೋ  ದಾತನೋ ಪ್ರಖ್ಯಾತನೋ ಅಂಬುಜಾಸನ ಪದಕೆ ಬಂದು  ನಿಂತನೋ ಹನುಮಂತನೋ ||೪|| ಹಯವದನ ಭಕ್ತ ಚೆಲ್ವ ತೇಜನೋ  ತೇಜನೋ ಯತಿರಾಜನೋ ದಾನವ ಕುಲಕೆ ಬಹು ಭೀಮನೋ  ಭೀಮನೋ ಸಾರ್ವಭೌಮನೋ ||೫|| muddu muKadAta namma muKyaprANanAthanO ||pa|| sadguNa vaMdita vAyujAtanO rAmadUtanO ||apa||   jAnakISana vairi SUlanO  SUlanO bahu dhIranO mAnini sIteya kaMDu  baMdanO muMde niMdanO ||1||   vAnara rUpili mudre ittanO  ittanO vana kittanO A nagaravannella suTTanO  suTTanO bahu diTTanO ||2||   sAgaravannu dATida dhIranO  dhIranO kaMThIravanO rAg...

ಶರಣ ಜನರನ್ನೆಲ್ಲ ಪೊರೆವ ಭಾರತಿ | ವರದ ಗೋಪಾಲ ವಿಠಲ | Sharana Janarannella | Varada Gopala Vithala

Image
ಸಾಹಿತ್ಯ : ಶ್ರೀ ವರದ ಗೋಪಾಲ ದಾಸರು  Kruti:Sri Varada Gopala Dasaru ಶರಣ ಜನರನ್ನೆಲ್ಲ ಪೊರೆವ ಭಾರತಿ ನಿನ್ನ ಚರಣಕ್ಕೆ ಕೈ ಮುಗಿವೆ ||ಪ|| ಕರೆಕರೆಗೊಳಿಸುವ ಕಠಿಣ ಭವವನ್ನೆಲ್ಲ ಪರಿಹಾರ ಮಾಡಬೇಕು ಪರಾಕು ||ಅಪ|| ತುತಿಸಬಲ್ಲೆನೆ ನಿನ್ನ ಸುತನ ಬಿನ್ನಪವನ್ನು ಅತಿಶಯದಿ ಕೇಳಬೇಕು ಈ ವಾಕು ಮತಿವಂತ ಜನರನ್ನು ಮಾನ್ಯಗೊಳಿಸುವಂಥ ಹಿತವಾದ ಭಾಗ್ಯವೀಯೆ ನೀ ಕಾಯೆ ||೧|| ಕಾಮಾದಿಗಳನ್ನೆಲ್ಲ ನೇಮದಿ ಗೆಲುವಂಥ | ಪ್ರೇಮ ಕವಚ ತೊಡಿಸೆ ಉದ್ಧರಿಸೆ ಹೇಮಕಾಮಿನಿ ಭೂಮಿ ಹೇಯವೆಂದೆನಿಸೆ ನೀ ಸೋಮಶೇಖರನ ಜನನಿ ಸುಜ್ಞಾನಿ ||೨|| ಮಾತೆ ಎನ್ನದು ಒಂದು ಮಾತು ಲಾಲಿಸುವುದು | ವಾತನ ನಿಜದಯಿತೆ ಪ್ರಖ್ಯಾತೆ ದಾತ ಶ್ರೀ ವರದ ಗೋಪಾಲ ವಿಠಲನ ಆತುಮದೊಳು ನಿಲ್ಲಿಸೆ ಸುಮನಸೆ ||೩|| sharaNa janarannella poreva BArati ninna caraNakke kai mugive ||pa|| karekaregoLisuva kaThiNa Bavavannella parihAra mADabEku parAku ||apa|| tutisaballene ninna sutana binnapavannu atiSayadi kELabEku I vAku mativaMta janarannu mAnyagoLisuvaMtha hitavAda BAgyavIye nI kAye ||1|| kAmAdigaLannella nEmadi geluvaMtha | prEma kavaca toDise uddharise hEmakAmini BUmi hEyaveMdenise nI sOmaSEKarana janani suj~jAni ||2|| mAte ennadu oMdu mAtu lAlisuvudu | vAtana nijadayite ...

ಪೋಗಬೇಡ ಒಬ್ಬರ ಮನೆಗೆ | ಪುರಂದರ ವಿಠಲ | Pogabeda Obbara Manege | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಪೋಗಬೇಡ ಒಬ್ಬರ ಮನೆಗೆ ರಂಗಯ್ಯ | ಬೇಡ ಒಬ್ಬರ ಮನೆಗೆ ||ಪ|| ನಾ ಬೇಡಿಕೊಂಬೆ ಶ್ರೀ ಪಾಂಡುರಂಗ ||ಅಪ|| ತಂಬಿಗೆ ನೊರೆ ಹಾಲು ಸಕ್ಕರೆ ತಂದಿವ್ನಿ |  ಉಂಡು ಮಂಚದ ಮೇಲೆ ಮಲಗೋ ರಂಗಯ್ಯ ||೧|| ದೇಶಕೆ ದಿಟವಾದ ಪಂಢರಾಪುರದಲ್ಲಿ  ವಾಸವಾಗಿರುವ ಶ್ರೀ ಪುರಂದರ ವಿಠಲ ||೨|| pOgabEDa obbara manege raMgayya | bEDa obbara manege ||pa|| nA bEDikoMbe SrI pAMDuraMga ||apa|| taMbige nore hAlu sakkare taMdivni |  uMDu maMcada mEle malagO raMgayya ||1|| dESake diTavAda paMDharApuradalli  vAsavAgiruva SrI puraMdara viThala ||2||

ಆವರೀತಿಯಿಂದ ನೀ ಎನ್ನ ಪಾಲಿಪೆ | ಹಯವದನ | Avareetiyinda ni enna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:  Sri Vadirajaru (Hayavadana) ಆವರೀತಿಯಿಂದ ನೀ ಎನ್ನ ಪಾಲಿಪೆ ಶ್ರೀ ವಿಭು ಹಯವದನ ||ಪ|| ಈ ವಿಧ ಭವದಲಿ ಎಷ್ಟು ಬವಣೆ ಪಟ್ಟೆ ತಾವರೆದಳ ನಯನ || ಅಪ|| ಹಯವದನ ಕಾಮನ ಬಾಧೆಯ ತಡೆಯಲಾರದೆ ಕಂಡ ಕಾಮಿನಿಯರನು ಕೂಡಿ || ನೇಮನಿಷ್ಠೆಯಿಂದ ನಿನ್ನನು ಭಜಿಸದೆ ಪಾಮರ ನಾನಾದೆನೋ ಹಯವದನ ||೧|| ಅಂಗನೆಯರಲ್ಲಿ ಅಧಿಕ ಮೋಹದಿಂದ ಶೃಂಗಾರಗಳನೆ ಮಾಡಿ || ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ ಭಂಗಕ್ಕೆ ಒಳಗಾದೆನೋ ಹಯವದನ ||೨|| ಹೀನ ಸಂಗವನೆಲ್ಲ ಹಯಮುಖ ದೇವನೇ ವರ್ಜಿಸುವಂತೆ ಮಾಡೋ || ಜ್ಞಾನಿಗಳರಸನೇ ದಯವಿಟ್ಟು ನಿನ್ನನು ಧ್ಯಾನಿಸುವಂತೆ ಮಾಡೋ ಹಯವದನ ||೩|| AvarItiyiMda nI enna pAlipe SrI viBu hayavadana ||pa|| I vidha Bavadali eShTu bavaNe paTTe tAvaredaLa nayana || apa|| hayavadana   kAmana bAdheya taDeyalArade kaMDa kAminiyaranu kUDi || nEmaniShTheyiMda ninnanu Bajisade pAmara nAnAdenO hayavadana ||1||   aMganeyaralli adhika mOhadiMda SRuMgAragaLane mADi || maMgaLAMgane ninna mahimeya pogaLade BaMgakke oLagAdenO hayavadana ||2||   hIna saMgavanella hayamuKa dEvanE varjisuvaMte mADO || j~jAnigaLarasanE dayaviTTu ninnanu dhyAnisuvaMte mADO hayavada...

ಕರ್ತಾ ಕೃಷ್ಣಯ್ಯ ನೀ ಬಾರಯ್ಯಾ | ಪ್ರಸನ್ನವೇಂಕಟ | Karta Krishnayya | Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಕರ್ತಾ ಕೃಷ್ಣಯ್ಯ ನೀ ಬಾರಯ್ಯಾ  ಎನ್ನಾರ್ತ ಧ್ವನಿಗೊಲಿದು ನೀ ಬಾರಯ್ಯ ||ಪ|| ಸುಗುಣದ ಖಣಿಯೇ ನೀ ಬಾರಯ್ಯಾ  ನಮ್ಮಘವ ಓಡಿಸಲು ನೀ ಬಾರಯ್ಯಾ| ಧಗೆಯೇರಿತು ತಾಪಾ ನೀ ಬಾರಯ್ಯಾ  ಸದ ಮುಗುಳ್ನಗೆ ಮಳೆಗೆರೆಯೆ ನೀ ಬಾರಯ್ಯಾ ||೧|| ವೈರಿ ವರ್ಗದಿ ನೊಂದೆ ನೀ ಬಾರಯ್ಯ ಮತ್ತಾರು ಗೆಳೆಯರಿಲ್ಲಾ ನೀ ಬಾರಯ್ಯಾ| ಸೇರಿದೆ ನಿನ್ನ ಕರುಣೆಗೆ ನೀ ಬಾರಯ್ಯಾ  ಒಳ್ಳೆ ದಾರಿಯ ತೋರಲು ನೀ ಬಾರಯ್ಯ ||೨|| ವೈರಾಗ್ಯ ಭಾಗ್ಯ ಕೊಡು ನೀ ಬಾರಯ್ಯ ನಾನಾರೋಗದ ಬೇಷಜಾ ನೀ ಬಾರಯ್ಯಾ| ಜಾರುತದಾಯು ಬೇಗ ನೀ ಬಾರಯ್ಯಾ  ಉದಾರಿ ಪ್ರಸನ್ವೆಂಕಟ ನೀ ಬಾರಯ್ಯ ||೩|| kartA kRuShNayya nI bArayyA  ennArta dhvanigolidu nI bArayya ||pa||   suguNada KaNiyE nI bArayyA  nammaGava ODisalu nI bArayyA| dhageyEritu tApA nI bArayyA  sada muguLnage maLegereye nI bArayyA ||1||   vairi vargadi noMde nI bArayya mattAru geLeyarillA nI bArayyA| sEride ninna karuNege nI bArayyA  oLLe dAriya tOralu nI bArayya ||2||   vairAgya BAgya koDu nI bArayya  nAnArOgada bEShajA nI bArayyA| jArutadAyu bEga nI bArayyA  ud...

ಏನು ಧನ್ಯಳೋ ಲಕುಮಿ | ಪುರಂದರವಿಠಲ | Enu Dhanyalo Lakumi | Purandara Vithala

Image
ಸಾಹಿತ್ಯ :  ಶ್ರೀ ಪುರಂದರ ದಾಸರು Kruti:      Sri Purandara dasaru ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ|| ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ||ಅಪ|| ಛತ್ರ ಚಾಮರ ವ್ಯಜನ ಪರ‍್ಯಂಕ ಪಾತ್ರ ರೂಪದಲ್ಲಿ ನಿಂತು || ಚಿತ್ರ ಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು ||೧|| ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ್ನ ಸೇವೆ || ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು ||೨|| ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ ಶರ್ವವಂದ್ಯನಾದ ಪುರಂದರ ವಿಠಲನ್ನ ಸೇವಿಸುವಳು ||೩|| Enu dhanyaLO lakumi eMtha mAnyaLO ||pa|| sAnurAgadiMda hariya tAne sEve mADutihaLu ||apa||   Catra cAmara vyajana par^yaMka pAtra rUpadalli niMtu || citra caritanAda hariya nitya sEve mADutihaLu ||1||   kOTi kOTi BRutyariralu hATakAMbaranna sEve || sATiyillade mADi pUrNa nOTadiMda suKisutihaLu ||2||   sarvasthaLadi vyAptanAda sarvadOSha rahitanAda SarvavaMdyanAda puraMdara viThalanna sEvisuvaLu ||3||

ಗೋಪಾಲದಾಸರ ದಿವ್ಯ ಚರಣ | ಬಾದರಾಯಣ ವಿಠಲ | Gopala Dasara Divya | Badarayana Vithala

Image
ಸಾಹಿತ್ಯ : ಶ್ರೀ ಬಾದರಾಯಣ ವಿಠಲ ದಾಸರು  Kruti:    Sri Badarayana vittala Dasaru ಗೋಪಾಲದಾಸರ ದಿವ್ಯ ಚರಣಗಳು ಕಾಪಾಡಲೆನ್ನ ಸತತ ||ಪ|| ತಾಪಸೋತ್ತಮ ವಿಜಯರಾಯರ ಕೃಪಾಜಾಹ್ನವಿ ಪ್ರವಾಹದೊಳು  ತೇಲಿ ಶೋಭಿಸುತ್ತಿರುವ ||ಅಪ|| ಇವರ ಪೂಜೆಯೇ ನಮ್ಮ ವಿಜಯರಾಯರ ಪೂಜೆ ಇವರ ದಯವೆ ವಿಜಯರಾಯರ ದಯವು ಇವರ ಕೊಂಡಾಡುವುದೇ ವಿಜಯರಾಯರ ಸ್ತೋತ್ರ ಇವರೇ ವಿಜಯರಾಯರ ಮುಖ್ಯ ಪ್ರತಿಮಾ ||೧|| ವೈರಾಗ್ಯ ಹರಿಭಕ್ತಿ ವಿಜ್ಞಾನಗಳ ಕೊಟ್ಟು ಘೋರ ದುರಿತಗಳೋಡಿಸಿ ಶ್ರೀರಮಣನ ಪದ ತೋರುವರು ಬಿಡದೆ ಈಸೂರಿಗಳ ನಂಬಿದವ ಧನ್ಯ ಮಾನ್ಯ ||೨|| ವರದ ಗೋಪಾಲ ಗುರುಗೋಪಾಲ ಶ್ರೀರಂಗ ಒಲಿದ ದಾಸರು ಈ ಮಹಾ ಕರುಣಾಳುಗಳ ನಂಬಿ ಹರಿಭಕುತರೆನಿಸಿದರು ಮರುದೀಶ ಬಾದರಾಯಣ ವಿಠಲನ ಪ್ರೀಯಾ ||೩||  gOpaaladaasara divya caraNagaLu kaapaaDalenna satata ||pa|| taapasOttama vijayaraayara kRupaajaahnavi pravaahadoLu  tEli shObhisuttiruva ||apa|| ivara pUjeyE namma vijayaraayara pUje ivara dayave vijayaraayara dayavu ivara koMDaaDuvudE vijayaraayara stOtra ivarE vijayaraayara muKya pratimaa ||1|| vairaagya haribhakti vij~jaanagaLa koTTu GOra duritagaLODisi shrIramaNana pada tOruvaru biDade IsUrigaLa naMbidava dhanya maanya ||2|| varada gO...

ಗಜಮುಖ ವಂದಿಸುವೆ | ಹಯವದನ | Gajamukha Vandisuve | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಗಜಮುಖ ವಂದಿಸುವೆ ಕರುಣಿಸಿ ಕಾಯೋ || ಪ || ಗಜಮುಖ ವಂದಿಪೆ ಗಜಗೌರಿಯ ಪುತ್ರ  ಅಜನಪಿತನ ಮೊಮ್ಮಗನ ಮೋಹದ ಬಾಲಾ || ಅಪ || ನೀಲಕಂಠನ ಸುತ ಬಾಲ ಗಣೇಶನೇ|  ಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯಾ || ೧ || ಪರ್ವತನ ಪುತ್ರಿ ಪಾರ್ವತಿಯ ಕುಮಾರ | ಗರುವಿಯಾ ಚಂದ್ರಗೆ ಸ್ಥಿರ ಶಾಪ ಕೊಟ್ಟನೆ || ೨ || ಹರಿಹರರು ನಿನ್ನ ಚರಣ ಪೂಜೆಯ ಮಾಡಿ | ದುರುಳ ಕಂಟಕರನು ತರಿದು ಬಿಸುಡಿದರಯ್ಯ || ೩ || ಮತಿಗೆಟ್ಟ ರಾವಣ ನಿನ್ನ ಪೂಜಿಸದೆ | ಸೀತಾಪತಿ ಕರದಿಂದಲಿ ಹತನಾಗಿ ಪೋದನು || ೪ || ವಾರಿಜನಾಭ ಶ್ರೀ ಹಯವದನನ ಪದ | ಸೇರುವ ಮಾರ್ಗದ ದಾರಿಯ ತೋರಿಸೋ || ೫ || gajamuKa vaMdisuve karuNisi kAyO || pa || gajamuKa vaMdipe gajagauriya putra  ajanapitana mommagana mOhada bAlA || apa ||   nIlakaMThana suta bAla gaNESanE|  bAri bArige ninna Bajane mADuvenayyA || 1 ||   parvatana putri pArvatiya kumAra | garuviyA caMdrage sthira SApa koTTane || 2 ||   harihararu ninna caraNa pUjeya mADi | duruLa kaMTakaranu taridu bisuDidarayya || 3 ||   matigeTTa rAvaNa ninna pUjisade | sItApati karadiMdali hatanAgi pOdanu || 4 || ...

ದ್ರೌಪದಿ ವಸ್ತ್ರಾಪಹರಣ | ಪುರಂದರ ವಿಠಲ | Draupadi Vastrapaharana | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ದ್ರೌಪದಿ ವಸ್ತ್ರಾಪಹರಣ    ವಾಸುದೇವಾಯ ನಮೋ ||ಪ||  ವಾಸುದೇವಾಯ ನಮೋ ವಾಸುಕೀ ಶಯನಾಯ ವಾಸವಾದ್ಯಖಿಳ ಸುರನಮಿತ ಚರಣಾಂಭೋಜ  ಭೂಸುರ ಪ್ರಿಯ ಭಜಕ ಪೋಷಕನೆ ರಕ್ಷಿಪುದು ಅನಾಥ ಬಂಧೋ ||ಅಪ|| ಶುಂಡಾಲ ಪುರದೊಳಗೆ ದುರುಳ ದುರ್ಯೋಧನನು ಪಾಂಡು ನಂದನರೊಡನೆ ಕಪಟ ಜೂಜವನಾಡಿ  ಗಂಡರೈವರ ಮುಂದೆ ದ್ರುಪದ ಸುತೆಯಳ ಸೆರಗ ಲಂಡ ದುಶ್ಯಾಸನ ಪಿಡಿದು ಅಂಡಲೆದು  ಸೂರತಿಯ ಸೆಳೆಯುತಿರೆ ದ್ರೌಪದಿಯ ಕಂಡು ಮನದೊಳು ಬೆದರಿ ಪರಮಾತ್ಮ ಪರಿಪೂರ್ಣ ಪುಂಡರೀಕಾಕ್ಷ ರಕ್ಷಿಸು ಎಂದು ಮೊರೆಯಿಟ್ಟಳಂಡಜ ತುರಂಗಗಾಗ ||೧|| ಪತಿಗಳೈವರು ಸತ್ಯವ್ರತದಿ ಸುಮ್ಮನೆ ಇಹರು ಅತಿ ಕ್ಲೇಶಗೊಳುತಿಹರು  ವಿದುರ ಭೀಷ್ಮಾದಿಗಳು ಸುತರ ಮೇಲಣ ಮೋಹದಿಂದಂಜಿ ಸುಮ್ಮನಿಹ ಗತಲೋಚನದ ಮಾವನು  ಕುತಕದಲ್ಲಿಹರು ನೃಪ ಶಕುನಿ ಕರ್ಣಾದಿಗಳು ಹಿತವ ಚಿಂತಿಪರಾರು  ಈ ನೆರೆದ ಸಭೆಯೊಳಗೆ ಗತಿಯಿಲ್ಲದವರಿಗೆ ಸದ್ಗತಿ ನೀನೆ ಜಗದೊಳಗೆ ರತಿಪತಿಯ ಪಿತನೆ ಸಲಹೋ ||೨|| ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯೆ ಮೃತ್ಯುವಂತಳೆವನಿವ ಬಿಡಿಸ ಬಾರದೆ ತಾಯೆ  ಉತ್ತಮಳು ನೀನು ಎಲೆ ಭಾನುಮತಿ ನೆಗೆಹೆಣ್ಣೆ ಇತ್ತ ದಯಮಾಡಿ ನೋಡೆ  ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ ಪೆತ್ತುದಿಲ್ಲವೆ ಎನ್ನ ಪೋಲ್ವ ಪೆಣ್ಮಕ್ಕಳನು  ಹುತ್ತದೊಳು ಬಿದ್ದಂತ ಹಾವು ...

ಮಧ್ವರಾಯರ ನೆನೆದು ಶುದ್ಧರಾಗಿರೋ| ಪುರಂದರವಿಠಲ | Madhwarayara Nenedu | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಮಧ್ವರಾಯರ ನೆನೆದು ಶುದ್ಧರಾಗಿರೋ ||ಪ|| ಪೊದ್ದಿ ವೈಷ್ಣವ ಮತವ ಭವಾಬ್ಧಿ ದಾಟಿರೋ ||ಅಪ|| ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗ ಒದಗಿ ನಿತ್ಯ ಕರ್ಮಗಳನು ನಡೆಸುವಾಗ ಹೃದಯದಲ್ಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗ ಸದಮಲಾನಂದ ಹನುಮನನ್ನು ನೆನೆಯಿರೋ ||೧|| ಕಾಮವಿಲ್ಲದೆ ಹರಿಯ ಪೂಜೆ ವೈಶ್ವದೇವ ಮಾಡುವಾಗ ಪ್ರೇಮದಿ ವೈಷ್ಣವೋತ್ತಮರ ಅರ್ಚಿಸುವಾಗ ಆ ಮಹಾ ಭಕ್ಷ್ಯ ಭೋಜ್ಯ ಆರೋಗಣೆ ಮಾಡುವಾಗ ನೇಮದಿ ಕೌರವಾಂತಕ ಭೀಮಸೇನನ ನೆನೆಯಿರೋ ||೨|| ಕರಗಳನು ತೊಳೆದು ತೀರ್ಥ ತುಳಸಿ ದಳವೀಯುವಾಗ ಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗ ಸರ್ವರಂತರ್ಯಾಮಿ ನಮ್ಮ ಪರಮ ಗುರು ಮಧ್ವಾಂತರಾತ್ಮಕ ಸಿರಿ ಪುರಂದರ ವಿಠಲಗೆ ಸಮರ್ಪಣೆಯ ಮಾಡಿರೋ ||೩|| madhvarAyara nenedu SuddharAgirO ||pa|| poddi vaiShNava matava BavAbdhi dATirO ||apa||   udayadalli ELuvAga mudadi snAna mADuvAga odagi nitya karmagaLanu naDesuvAga hRudayadalli bIjAkShara maMtragaLanu japisuvAga sadamalAnaMda hanumanannu neneyirO ||1||   kAmavillade hariya pUje vaiSvadEva mADuvAga prEmadi vaiShNavOttamara arcisuvAga A mahA BakShya BOjya ArOgaNe mADuvAga nEmadi kauravAMtaka BImas...

ಜಯ ಭೀಮಸೇನ | ಹಯವದನ | Jaya Bhimasena | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಜಯ ಭೀಮಸೇನ ||ಪ|| ಜಯ ಭೀಮಸೇನ ದುರ್ಜನತಿಮಿರ ಮಾರ್ತಾಂಡ ಜಯ ಶಾಂತ ಉದ್ದಂಡ ಕದನಪ್ರಚಂಡ ||ಅಪ|| ಕಿಮ್ಮೀರ ಬಕ ಹಿಡಿಂಬ ಕೀಚಕಧ್ವಂಸ ದುರ್ಮತವನಚ್ಛೇದೋತ್ತಂಸ ||೧|| ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನ ದನುಜಗಜ ಪಂಚಾಸ್ಯನೆಂದೆನಿಸಿದ ಘನ್ನ ||೨|| ದ್ರೌಪದೀಪ್ರಿಯ ಸಕಲವಿದ್ಯಾಪ್ರದೀಪ ಪಾಪಹರ ಹಯವದನಪದಕಂಜ ಮಧುಪ ||೩||  jaya bhImasEna ||pa|| jaya bhImasEna durjanatimira maartaaMDa jaya shaaMta uddaMDa kadanaprachaMDa ||apa|| kimmIra baka hiDiMba kIchakadhwaMsa durmatavanachCEdOttaMsa ||1|| anuja sEnaasahita kalidhaartaraaShTranna danujagaja paMchaasyaneMdenisida ghanna ||2|| draupadIpriya sakalavidyaapradIpa paapahara hayavadanapadakaMja madhupa ||3|| 

ಸ್ವಾಮಿ ಮುಖ್ಯಪ್ರಾಣ | ಪುರಂದರವಿಠಲ | Swamy Mukhyaprana | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲಗಾಣ  ಹಿಡಿದ್ಯೋ ರಾಮರ ಚರಣ ನೀ ಹೌದ್ಹೌದೋ ಜಗತ್ರಾಣ ||ಪ|| ಸಂಜೀವನ ಪರ್ವತವ ನೀನಂಜದೆ ತಂದ್ಯೋ ದೇವ ಅಂಜನೆಸುತ ಸದಾಕಾವ ಹೃತ್ಕಂಜವಾಸ ಸರ್ವಜೀವ ||೧|| ಏಕಾದಶೆಯ ರುದ್ರ ನೀ ಒಯ್ದ್ಯೋ ರಾಮರ ಮುದ್ರಾ  ಸಕಲ ವಿದ್ಯಾಸಮುದ್ರ ನೀ ಹೌದ್ಹೌದೋ ಬಲಭದ್ರ ||೨|| ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು ಯಂತ್ರೋದ್ಧಾರಕನೆಂದು ಪುರಂದರ ವಿಠಲ ಸಲಹೆಂದು ||೩|| svaami mukhyapraaNa ninna marevara gaMTalagaaNa  hiDidyO raamara caraNa nI haud~haudO jagatraaNa ||pa|| saMjIvana parvatava nInaMjade taMdyO dEva aMjanesuta sadaakaava hRutkaMjavaasa sarvajIva ||1|| Ekaadasheya rudra nI oydyO raamara mudraa  sakala vidyaasamudra nI haud~haudO balabhadra ||2|| vaikuMThadiMda baMdu nI paMpaakShEtradi niMdu yaMtrOddhaarakaneMdu puraMdara viThala salaheMdu ||3||

ಶಿವ ದರುಶನ ನಮಗಾಯ್ತು | ಪುರಂದರವಿಠಲ| Shiva Darushana Namagaytu | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಶಿವ ದರುಶನ ನಮಗಾಯ್ತು ಕೇಳಿ ಶಿವರಾತ್ರಿಯ ಜಾಗರಣೆಯಲ್ಲಿ ||ಪ|| ಪಾತಾಳ ಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲವು ಅನುದಿನವು ||೧|| ಬೇಡಿದ ವರಗಳ ಕೊಡುವನು ತಾಯಿ | ಬ್ರಹ್ಮನ ರಾಣಿಯ ನೋಡುವನು || ಆಡುತ ಪಾಡುತ ಏರುತ ಬಸವನ ಆನಂದದಲಿ ನಲಿದಾಡುವನು ||೨|| ಶಿಖರದಿ ಮೆರೆವ ಗಂಗಾಧರನ ಶರಣಾಗತ ವತ್ಸಲನ | ಹರನನು ಕಂಡೆನು ಪುರಂದರ ವಿಠಲನ ಹರಿನಾರಾಯಣ ಧ್ಯಾನದಲಿ ||೩|| Siva daruSana namagAytu kELi SivarAtriya jAgaraNeyalli ||pa||   pAtALa gaMgeya snAnava mADalu pAtakavella parihAravu jyOtirliMgana dhyAnava mADalu dyUtagaLillavu anudinavu ||1||   bEDida varagaLa koDuvanu tAyi | brahmana rANiya nODuvanu || ADuta pADuta Eruta basavana AnaMdadali nalidADuvanu ||2||   SiKaradi mereva gaMgAdharana SaraNAgata vatsalana | harananu kaMDenu puraMdara viThalana harinArAyaNa dhyAnadali ||3||

ಕುಣಿಯುತ ನಲಿಯುತ ಬಾ ಶಂಕರ | ವರ ಕಮಲೇಶ | Kuniyuta Naliyuta Ba Shankara | Vara Kamalesha

Image
ಸಾಹಿತ್ಯ : ಶ್ರೀ ವರ ಕಮಲೇಶ ದಾಸರು  Kruti:Sri Vara Kamalesha Dasaru ಕುಣಿಯುತ ನಲಿಯುತ ಬಾ ಶಂಕರ | ಮಣಿಯುವೆ ನಿನ್ನಡಿಗೆ ಅನುದಿನ ಸ್ಮರಹರ ||ಪ|| ಢಣ ಢಣ ಢಣ ಎಂದು ಡಮರುಗ ಧ್ವನಿಸಲು ಠಣ ಠಣ ಠಣ ಎಂದು ವೃಷಭವು ನಲಿಯೇ ಝಣ ತಕ ತಕ ಝಣ ತಾಕಿಟ ತಕಕಿಟ  ಝಣ ಎಂದು ನಂದಿ ಮೃದಂಗವ ಬಾರಿಸಲು ||೧|| ಹರ ಹರ ಹರ ಎಂದು ಗಣಗಳು ಸ್ತುತಿಸಲು ಪೊರೆಯೆಂದಡಿ ವಿಭು ಗಂಗೆಯರು ನಮಿಸೆ || ಸರಿಗಮ ಪದನಿಸ ಸ್ವರಗಳ ಪಾಡುತ | ತುಂಬುರು ನಾರದರು ಗಾನವ ಮಾಡಲು ||೨|| ವರ ಕಮಲೇಶನ ಚರಿತೆಯು ಜಗದೊಳು | ಪರಿಪರಿ ಭಾವದಿ ನರ್ತಿಸಿ ತೋರುತ || ಪೊರೆಯುತ ಭಕುತರ ವರವೀಯುತ ಬಾ | ಗಿರಿಜಾಲಂಗಿತ ನಾಟ್ಯಾಚಾರ್ಯ ||೩|| kuNiyuta naliyuta bA SaMkara | maNiyuve ninnaDige anudina smarahara ||pa||   DhaNa DhaNa DhaNa eMdu Damaruga dhvanisalu ThaNa ThaNa ThaNa eMdu vRuShaBavu naliyE JaNa taka taka JaNa tAkiTa takakiTa  JaNa eMdu naMdi mRudaMgava bArisalu ||1||   hara hara hara eMdu gaNagaLu stutisalu poreyeMdaDi viBu gaMgeyaru namise || sarigama padanisa svaragaLa pADuta | tuMburu nAradaru gAnava mADalu ||2||   vara kamalESana cariteyu jagadoLu | paripari BAvadi nartisi tOruta || poreyuta Bakutara varavIyuta b...

ಏನ ಪೇಳಲೆ ಗೋಪಿ | ಪುರಂದರ ವಿಠಲ | Ena Pelale Gopi | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ | ಮಾನ ತಪ್ಪಿ ಬಂದ ಮನೆಯೊಳಗೆ ||ಪ|| ಕೊಡ ಹಾಲು ಕುಡಿದನೆ ಗಡಿಗೆಯನೊಡೆದನೆ | ಅಡಗಿದ್ದನೆ ದೊಡ್ಡ ಕೊಡದೊಳಗೆ || ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ | ಬಡವರ ಮಗನೇನೆ ಹೊಡೆಯಲಿಕ್ಕೆ ||೧|| ಅಳಿಯನ ವೇಷದಿ ಮಗಳ ಕರೆಯ ಬಂದ | ಕಲಹ ಮಾಡಿ ತಾ ಕಳಿಸೆಂದ || ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ | ಗಿಳಿಯಂಥ ಹೆಣ್ಣಿನ ಕೆಡಿಸಿದನೆ ||೨|| ಇಷ್ಟೊಂದು ಸಿಟ್ಟೇಕೆ ಚಿನ್ನ ಕೃಷ್ಣನ  ಮೇಲೆ ಹುಟ್ಟಿಸಬೇಡಿರೆ ಅನ್ಯಾಯವ || ಸೃಷ್ಟಿಗೊಡೆಯ ನಮ್ಮ ಪುರಂದರ ವಿಠಲನ ದೃಷ್ಟಿಸಿ ನೋಡಿರೆ ತೊಟ್ಟಿಲಲಿಹನು ||೩|| Ena pELale gOpi ninna magana jAla | mAna tappi baMda maneyoLage ||pa||   koDa hAlu kuDidane gaDigeyanoDedane | aDagiddane doDDa koDadoLage || huDuga sikkidaneMdu hoDeyalu hOdare | baDavara maganEne hoDeyalikke ||1||   aLiyana vEShadi magaLa kareya baMda | kalaha mADi tA kaLiseMda || olumeyiMdali tiMgaLeraDiTTukoMDare | giLiyaMtha heNNina keDisidane ||2||   iShToMdu siTTEke cinna kRuShNana  mEle huTTisabEDire anyAyava || sRuShTigoDeya namma puraMdara viTh...

ಬಾರೋ ಮನೆಗೆ ಗೋವಿಂದ | ರಂಗವಿಠಲ | Baaro Manege Govinda | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ ತೋರೋ ಎನಗೆ ಮುಕುಂದ | ನಲಿದಾಡು ಮನದಲಿ ಮಾರಪಿತ ಆನಂದ ಆನಂದ ಕಂದ || ಪ || ಚಾರು ತರ ಶರೀರ ಕರುಣವಾರಿನಿಧಿ ಭವ ಘೋರನಾಶನ|  ನೀರಜಾಸನ ವಂದ್ಯ ನಿರ್ಜರ ಸಾರ ಸದ್ಗುಣ ಹೇ ರಮಾಪತೇ || ಅಪ || ನೋಡು ದಯದಿಂದೆನ್ನ ಕರಪದುಮ ಶಿರದಲಿ ನೀಡು ಭಕ್ತ ಪ್ರಸನ್ನ  ನಲಿದಾಡು ಮನದಲಿ ಬೇಡಿಕೊಂಬೆನು ನಿನ್ನ ಆನಂದ ಘನ್ನ |  ಮಾಡದಿರು ಅನುಮಾನವನು ಕೊಂಡಾಡುವೆನು ತವ ಮಹಿಮೆಗಳನು| ಜೋಡಿಸುವೆ ಕರಗಳನು ಚರಣಕೆ ಕೂಡಿಸೋ ತವ ದಾಸ ಜನರೊಳು || ೧ || ಹೇಸಿ ವಿಷಯಗಳಲ್ಲಿ ತೊಳಲಾಡುತ ಬಲು ಕ್ಲೇಶ ಪಡುವುದ ಬಲ್ಲಿದನ ಯುವತಿಗಳ ಸುಖಲೇಸು ಎಂಬುದ ಕೊಲ್ಲಿ ಆಸೆ ಬಿಡಿಸಿಲ್ಲಿ|  ಏಸು ಜನ್ಮದ ದೋಷದಿಂದಲಿ ಈಸುವೆನು ಇದರೊಳಗೆ ಎಂದಿಗೂ|  ಮೋಸವಾಯಿತು ಆದುದಾಗಲಿ ಶ್ರೀಶ ನೀ ಕೈ ಬಿಡದೆ ರಕ್ಷಿಸು || ೨ || ನೀನೇ ಗತಿ ಎನಗಿಂದು ಉದ್ಧರಿಸೋ ಬೇಗನೇ ದೀನ ಜನರಿಗೆ ಬಂಧು |  ನಾ ನಿನ್ನ ಸೇವಕ ಶ್ರೀನಿವಾಸ ಎಂದೆಂದು ಕಾರುಣ್ಯ ಸಿಂಧು |  ಪ್ರಾಣಪತಿ ಹೃದಯಾಬ್ಜ ಮಂಟಪ ಸ್ಥಾನದೊಳಗಭಿ ವ್ಯಾಪ್ತ ಚಿನ್ಮಯ | ಧ್ಯಾನ ಗೋಚರನಾಗು ಕಣ್ಣಿಗೆ ಕಾಣುವೆ ಶ್ರೀ ರಂಗವಿಠಲ || ೩ || bArO manege gOviMda ninnaMGri kamalava tOrO enage mukuMda | nalidADu manadali mArapita AnaMda AnaMda kaMda || pa |...

ರಂಗನಾಥನ ನೋಡುವ ಬನ್ನಿ | ರಂಗ ವಿಠಲ | Ranganathana Noduva Banni | Ranga Vithala

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ರಂಗನಾಥನ ನೋಡುವ ಬನ್ನಿ ||ಪ|| ಶ್ರೀರಂಗನ ದಿವ್ಯ ವಿಮಾನದಲ್ಲಿಹನ ||ಅಪ|| ರಂಗನಾಥ ಶ್ರೀ ರಂಗನಾಥ ಕಮನೀಯಗಾತ್ರನ ಕರುಣಾಂತರಂಗನ ಕಾಮಿತಾರ್ಥವೀವ ಕಲ್ಪವೃಕ್ಷನ ಕಮಲದಳನೇತ್ರನ ಕಸ್ತೂರಿರಂಗನ ಕಾಮಧೇನು ಕಾವೇರಿರಂಗನ ||೧|| ವಾಸುಕಿಶಯನನ ವಾರಿಧಿನಿಲಯನ ವಾಸುದೇವ ವಾರಿಜನಾಭನ ವಾಸವಾದಿ ಭಕ್ತ ಹೃದಯಾಂಬುಜದಲ್ಲಿ ವಾಸವಾಗಿರುತಿಹ ವಸುದೇವಸುತನ ||೨|| ಮಂಗಳಗಾತ್ರನ ಮಂಜುಳಭಾಷನ ಗಂಗಾಜನಕ ಅಜಜನಕನ ಸಂಗೀತಲೋಲನ ಸಾಧುಸಮ್ಮತನ ರಂಗವಿಠಲ ರಾಜೀವನೇತ್ರನ||೩|| raMganaathana nODuva banni ||pa|| shrIraMgana divya vimaanadallihana ||apa|| raMganaatha shrI raMganaatha kamanIyagaatrana karuNaaMtaraMgana kaamitaarthavIva kalpavRukShana kamaladaLanEtrana kastUriraMgana kaamadhEnu kaavEriraMgana ||1|| vaasukishayanana vaaridhinilayana vaasudEva vaarijanaabhana vaasavaadi bhakta hRudayaaMbujadalli vaasavaagirutiha vasudEvasutana ||2|| maMgaLagaatrana maMjuLabhaaShana gaMgaajanaka ajajanakana saMgeetalOlana saadhusammatana raMgaviThala raajeevanEtrana||3||

ಮರುದಂಶ ಮಧ್ವಮುನಿರನ್ನ | ಹಯವದನ | Marudamsha Madhwamuni | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮರುದಂಶ ಮಧ್ವಮುನಿರನ್ನ ನಿನಗೆ ಸರಿಗಾಣೆ ಜಗದೊಳಗೆ ಸರ್ವರೊಳು ಪೂರ್ಣ ||ಪ|| ಹಿಂದೆ ರಾಮರು ಮುಂದೆ ಬಂಟನಾಗಿ ನೀ ನಿಂದೆ ಚಂದ್ರದೋಣದ ಗಿರಿಯ ತಂದೆ ದನುಜರ ಕೊಂದೆ ಎಂದೆಂದಿಗಳಿವಿಲ್ಲದ ಬ್ರಹ್ಮ ಪದವಿಗೆ ಸಂದೆ ಇಂದ್ರಾದಿ ಸುರರುಗಳ ತಂದೆ ಸ್ವಾಮಿ ಇಂದೆಲ್ಲರಿಗೆ ನೀನು ಗುರುವೆನಿಸಿ ನಿಂದೆ ||೧|| ಕೌರವಬಲವ ತರಿದೆ ಕೀಚಕನ ಕುಲವ ಮುರಿದೆ ಓರ್ವನೆ ಬೇಸರದೆ ಷಡ್ರಥಿಕರನು ಗೆಲಿದೆ ಉರ್ವಿಯೊಳು ಭುಜಬಲದಿ ಭೀಮನೆನಿಸಿ ಮೆರೆದೆ ಹರಿಯ ಕಿಂಕರರ ಪೊರೆದೆ ಈಗ ಸರ್ವವನು ತೊರೆದು ಶಾಸ್ತ್ರಾಮೃತವಗರೆದೆ ||೨|| ದುರುಳವಾದಿಗಳೆನಿಪ ಘನ ತಾಮಸಕೆ ದಿನಪ ಸಿರಿಯರಸ ಹಯವದನ ಪದಕಂಜಯುಗ ಮಧುಪ ಗುರುಮಧ್ವಮುನಿಪ ನಿರ್ಲೇಪ ಶುದ್ಧಸ್ಥಾಪ ವರ ವಿದ್ಯಾ ಪ್ರತಾಪ ಭಾಪುರೆ ಪರಮಪಾವನರೂಪ ಭಳಿರೆ ಪ್ರತಾಪ ||೩||    marudaMsha madhwamuniranna ninage sarigaaNe jagadoLage sarvaroLu poorNa ||pa|| hiMde raamaru muMde baMTanAgi nI niMde chaMdradONada giriya taMde danujara koMde eMdeMdigaLivillada brahma padavige saMde iMdrAdi surarugaLa taMde swAmi iMdellarige nInu guruvenisi niMde ||1|| kouravabalava taride kIchakana kulava muride Orvane bEsarade ShaDrathikaranu gelide urviyoLu bhujabaladi bh...

ಬಿಡದೆ ಭಜಿಸಿ ಬೊಮ್ಮ | ಹಯವದನ | Bidade Bhajisi Bomma | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಿಡದೆ ಭಜಿಸಿ ಬೊಮ್ಮ ಮೃಡ ಮುಖ್ಯ ಸುರರಿಗೆ ಒಡೆಯನೆನಿಪ ಮುದ್ದು ಉಡುಪಿಯ ಕೃಷ್ಣ ||ಪ|| ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ- ರಡಿಗಡಿಗವರ ವಾಂಛಿತ ವಸ್ತುವ ಕಡೆದು ಕೊಡುವೆನೆಂದು ಕಡೆಗೋಲ ನೇಣನೆ ಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ ||೧|| ಹರಿಸರ್ವೋತ್ತಮನೆಂಬೊ ಪರಮ ಸಿದ್ಧಾಂತಕ್ಕೆ ಮ- ಚ್ಚರಿಸುವ ಕುಮತದ ಕುಜನರ ಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದು ವರಪಾಶದಂಡಧಾರಿಯಾಗಿ ತೋರಿಪ್ಪನ ||೨|| ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬುಧ ನಿಕರಕ್ಕೆ ಪೇಳಲು ದ್ವಾರಕಾಪುರಿಯಿಂ ಸುಖತೀರ್ಥಮುನಿಗೆ ಸುಖಕರನಾಗಿ ಬಂದ ಅಕುಟಿಲ ಕೃಷ್ಣ ಹಯವದನರಾಯನ ||೩|| biDade bhajisi bomma mRuDa mukhya surarige oDeyanenipa muddu uDupiya kRuShNa ||pa|| poDaviyoLage tanna aDigaLa dhEnipa- raDigaDigavara vaaMCita vastuva kaDedu koDuveneMdu kaDegOla nENane piDidiha siriyaraa dRuDhake mechchidana ||1|| harisarvOttamaneMbo parama siddhaaMtakke ma- chcharisuva kumatada kujanara bharadi baMdhisi bannaMbaDidu shikShipeneMdu varapaashadaMDadhaariyaagi tOrippana ||2|| bhaktavatsalaneMbo sulabhOktiyanu budha nikarakke pELalu dwaarakaapuriyiM sukhatIrthamunige sukh...

ಬಾರೆ ಭಾಗ್ಯದ ನಿಧಿಯೇ | ಶ್ಯಾಮಸುಂದರ ರಾಣಿ | Baare Bhagyada Nidhiye | Shyamasundara Rani

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು (ಶ್ಯಾಮಸುಂದರ ರಾಣಿ) Kruti: Sri Shyamasundara Dasaru (Shyamasundara Rani) ಬಾರೆ ಭಾಗ್ಯದ ನಿಧಿಯೇ ಬಾರೇ ಶ್ರೀ ಜಾನಕಿಯೇ || ಪ || ಬಾರೆ ಬಾರೆ ಚಕೋರ ಸಖಾಗ್ರಜೆ ಸೇರಿದೆ ತವಪದ ವಾರಿಜ ನಿಲಯೇ || ಅಪ || ಕೃತಿ ಶಾಂತಿ ಜಯಮಾಯೆ ಕ್ಷಿತಿಜೆ ಕೋಮಲ ಕಾಯೆ, ಶಿತಕಳೆವರ ವಿಧಿ ಶತಕೃತು ಸುಮನಸ ತತಿನುತೆ ಪಾವನೆ ರತಿಪತಿ ತಾಯೇ || ೧ || ಮಂಗಳೆ ಮುದಭರಿತೆ ತಿಂಗಳ ಮುಖಿ ಸೀತೆ ಇಂಗಡಲಜೆ ಕೃಪಾಂಗಿಯೇ ಎನ್ನಂತರಂಗದಿ ಮಾನವ ಸಿಂಗನ ತೋರೇ || ೨ || ಶ್ಯಾಮಸುಂದರ ರಾಣಿ ವಾಮಾಕ್ಷಿ ಕಲ್ಯಾಣಿ ಕಾಮಿನಿಮಣಿ  ಸತ್ಯಭಾಮೆ ರುಕ್ಮಿಣಿ ಗೋಮಿನಿ ರಮೆ ಶುಭನಾಮೆ ಲಲಾಮೇ || ೩ || bAre BAgyada nidhiyE bArE SrI jAnakiyE || pa || bAre bAre cakOra saKAgraje sEride tavapada vArija nilayE || apa ||   kRuti shaaMti jayamAye kShitije kOmala kAye, SitakaLevara vidhi SatakRutu sumanasa tatinute pAvane ratipati tAyE || 1 || maMgaLe mudaBarite tiMgaLa muKi sIte iMgaDalaje kRupAMgiyE ennaMtaraMgadi mAnava siMgana tOrE || 2 || SyAmasuMdara rANi vAmAkShi kalyANi kAminimaNi  satyaBAme rukmiNi gOmini rame SuBanAme lalAmE || 3 ||

ರಾಘವೇಂದ್ರ ತೀರ್ಥನೀತಾ | ಮಧ್ವೇಶ ವಿಠ್ಠಲ | Raghavendra Teerthaneeta | Madhwesha Vithala

Image
ಸಾಹಿತ್ಯ : ಶ್ರೀ ಮಧ್ವೇಶ ವಿಠ್ಠಲ ದಾಸರು  Kruti: Sri Madhwesha Vithala Dasaru   ರಾಘವೇಂದ್ರ ತೀರ್ಥನೀತಾ | ರಾಜಿಸುವಾತಾ ವಿರಾಜಿಸುವಾತಾ | ಗುರು ರಾಘವೇಂದ್ರ ತೀರ್ಥನೀತಾ ||ಪ|| ಬಣ್ಣಬಣ್ಣದಿಂದ ಬಹಳ ಭೋದಿಸುವಾತಾ | ನಮ್ಮ ಸಣ್ಣ ದೊಡ್ಡಾಭೀಷ್ಟಗಳನು ಸಾಧಿಸುವಾತಾ || ಪುಣ್ಯವಂತರಿಂದ ಬಹಳ ಪೂಜೆಗೊಂಬಾತಾ | ನಮಗೆ ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ ||೧|| ಕಾಮ ಕ್ರೋದಾಧಿಗಳನ್ನು ಕಾಲಿಲೊದ್ದಾತ | ಈತ ವ್ಯೋಮಕೇಶನಂತೆ ನಾಲ್ಕು ವೇದ ವಿಖ್ಯಾತ || ಭೂಮಿಯೊಳ್ ದುರ್ವಾದಿಗಳೆಲ್ಲ ದೂರಿಗೆದ್ದಾತ | ಶ್ರೀ ಯೋಗೀಂದ್ರ ತೀರ್ಥರೆ ಶಿಷ್ಯನೆಂಬಾತ ||೨|| ಸಿದ್ಧ ವಿದ್ಯೆಗಳಲಿ ಬಹು ಪ್ರಸಿದ್ಧನಾದಾತಾ | ನಮಗೆ ಮಧ್ವ ಶಾಸ್ತ್ರಗಳನ್ನೆಲ್ಲಾ ಹೇಳಿಕೊಟ್ಟಾತಾ || ಮಧ್ವೇಶ ವಿಠ್ಠಲನ ಧ್ಯಾನದಲ್ಲಿರುವ | ತುಂಗಭದ್ರ ತೀರದಲ್ಲಿ ತಾನು ವಾಸವಾದಾತಾ ||೩|| rAGavEMdra tIrthanItA | rAjisuvAtA virAjisuvAtA | guru rAGavEMdra tIrthanItA ||pa||   baNNabaNNadiMda bahaLa BOdisuvAtA | namma saNNa doDDABIShTagaLanu sAdhisuvAtA || puNyavaMtariMda bahaLa pUjegoMbAtA | namage kaNNa habbavAguvaMte kANisuvAtA ||1||   kAma krOdAdhigaLannu kAliloddAta | Ita vyOmakESanaMte nAlku vEda viKyAta || BUmiyoL durvAdigaLella dUrigeddAta | SrI yOgIMdra tIrthare ...

ಕಂಡೆ ಕಂಡೆನು ಕೃಷ್ಣ ನಿನ್ನಯ | ಹಯವದನ | Kande Kandenu Krishna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯ ಮಂಗಳ ಮೂರ್ತಿಯ ಕಂಡು ಬದುಕಿದೆ ಇಂದು ನಾನು ಕರುಣಿಸೋ ಎನ್ನೊಡೆಯನೇ ||ಪ|| ಉಟ್ಟದಟ್ಟಿಯು ಪಿಡಿದ ವಂಕಿಯು ತೊಟ್ಟ ಕೌಸ್ತುಭ ಭೂಷಣ | ಮೆಟ್ಟಿದ ನವರತ್ನದ್ಹಾವಿಗೆ ಇಟ್ಟ ಕಸ್ತೂರಿ ತಿಲಕವು ||೧|| ಮಂದಹಾಸವು ದಂತಪಂಕ್ತಿಯು ಚೆಲುವ ಕಡೆಗಣ್ಣ ನೋಟವು ಅಂದವಾದ ಕುರುಳು ಕೂದಲು ಮುದ್ದು ಸುರಿಯುವ ಮುಖವನಾ ||೨|| ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿ ಚೆಲ್ವ ಕಂಕಣ ಕೈಯಲಿ || ಗೊಲ್ಲ ಸತಿಯರ ಕುಚಗಳಲ್ಲಿ ಝಲ್ಲು ಝಲ್ಲೆಂದು ನಲಿವನಾ ||೩|| ಸುರರು ಪುಷ್ಪದ ವೃಷ್ಠಿ ಕರೆಯಲು ಅಸುರರೆಲ್ಲರು ಓಡಲು || ಕ್ರೂರ ಕಾಳಿಯ ಫಣಗಳಲ್ಲಿ ಧೀರ ನಲಿ ನಲಿದಾಡಲು ||೪|| ಇನ್ನು ಎನ್ನ ಬಂಧ ತೀರಿತು ಇನ್ನು ಎನ್ನ ಕ್ಲೇಶ ಹೋಯಿತು ಇನ್ನು ಅನ್ಯರ ಭಜಿಸಲ್ಯಾಕೆ ಮನ್ನಿಸೋ ಹಯವದನನೆ ||೫|| kaMDe kaMDenu kRuShNa ninnaya divya maMgaLa mUrtiya kaMDu badukide iMdu nAnu karuNisO ennoDeyanE ||pa||   uTTadaTTiyu piDida vaMkiyu toTTa kaustuBa BUShaNa | meTTida navaratnad~hAvige iTTa kastUri tilakavu ||1||   maMdahAsavu daMtapaMktiyu celuva kaDegaNNa nOTavu aMdavAda kuruLu kUdalu muddu suriyuva muKavanA ||2||   molle mallige daMDe koraLali celva kaMkaNa ka...

ವಾಣಿ ಪರಮ ಕಲ್ಯಾಣಿ | ಹಯವದನ | Vani Parama Kalyani | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ವಾಣಿ ಪರಮ ಕಲ್ಯಾಣಿ  ನಮೋ ನಮೋ ಅಜನ ರಾಣಿ ಪಂಕಜಪಾಣಿ ||ಪ|| ಭಳಿರೆ ಭಳಿರೆ ಅಂಬೆ ಭಕ್ತಜನ ಸುಖದಂಬೆ  ಸುಳಿದಾಡು ಶುಭ ನಿತಂಬೆ ಅಮ್ಮ ನಿಮ್ಮ ||  ಹೊಳೆ ಹೊಳೆವ ಮುಖ ಮುಕುರಬಿಂಬೆ  ಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿ ಬೊಂಬೆ ||೧|| ಶರಣು ಶರಣೆಲೆ ದೇವಿ ಸ್ಮರಣೆ ಮಾತ್ರದಿ ಕಾಯ್ವೆ  ಚರಣದಂದುಗೆಯ ಠೀವಿ ನಳಿನಳಿಸುವ ಆಭರಣಗಳನಿಟ್ಟು  ಸುಖವನೀವೆ ಧರೆಯೊಳಗೆ ಹರಿಣಾಕ್ಷೀ ನೀ ಸಲಹೆ ವಾಗ್ದೇವಿ ||೨|| ಜಯ ಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆ  ದಯಮಾಡು ಧವಳಗೀತೆ ಸತತ ಶ್ರೀ ಹಯವದನ ಪದಕೆ  ಪ್ರೀತೆ ಇಳೆಯೊಳಗೆ ನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ ||೩|| vaaNi parama kalyANi  namO namO ajana rANi paMkajapANi ||pa|| BaLire BaLire aMbe Baktajana suKadaMbe  suLidADu SuBa nitaMbe amma nimma ||  hoLe hoLeva muKa mukurabiMbe  iLeyoLage sarigANe SAradAMbe putthaLi boMbe ||1|| SaraNu SaraNele dEvi smaraNe mAtradi kAyve  charaNadaMdugeya ThIvi naLinaLisuva ABaraNagaLaniTTu  suKavanIve dhareyoLage hariNAkShI nI salahe vAgdEvi ||2|| jaya jayatu jaganmAte jagadoLage praKyAte...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru