ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಿಠ್ಠಲಾ ಪಿಡಿ ಎನ್ನ ಕೈಯ್ಯಾ | ಪ್ರಸನ್ವೇಂಕಟ | Vithala Pidi Enna Kaiyya | Prasanvenkata|


 ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು
Kruti:Sri Prasanna Venkata Dasaru


ಭಕ್ತವತ್ಸಲ ಪಂಢರೀರಾಯಾ ವಿಠ್ಠಲಾ ಹರಿ ವಿಠ್ಠಲಾ
ವಿಠ್ಠಲಾ ಪಿಡಿ ಎನ್ನ ಕೈಯ್ಯಾ || ಪ ||

ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನ
ಮುಟ್ಟಿ ಭಜಿಸಲು ಚಿತ್ತಗೊಟ್ಟು ಬಂದೆಯಾ ವಿಠಲಾ || ೧ ||

ಕೊಟ್ಟ ಮಾತಿಗೆ ಭಕ್ತರ ಕಟ್ಟಿನೊಳು ಸಿಲುಕಿ ಕಂ
ಗೆಟ್ಟೆಯ ಭವಾಬ್ಧಿಯಲ್ಲಿ ನಿನ್ನ ಗುಟ್ಟು ತೋರಯ್ಯ ವಿಠಲಾ || ೨ ||

ಬಿಟ್ಟು ಬರಲಾಗದೆ ನಿನಗೆ ಥಟ್ಟನೆ ನೀಡಲು ಚೆಲುವ
ಇಟ್ಟಿಗೆಯ ಮೇಲೆ ಅಂಘ್ರಿಪದ್ಮ ಇಟ್ಟು ನಿಂತೆಯ ವಿಠಲಾ || ೩ ||

ನೆಟ್ಟನೆ ವೇದವ ತಂದು ಬೆಟ್ಟ ಎತ್ತಿ ಇಳೆಯ ಪೊತ್ತಿ
ಸಿಟ್ಟು ತಾಳಿ ವಟುವೆ ಖಳರ ಸಿಟ್ಟಿಲ್ಯಳೆದೆಯಾ ವಿಠಲಾ || ೪ ||

ಕಟ್ಟಿ ಕಡಲಲಿ ಜಗಜಟ್ಟಿ ಗೋಪನಾಗಿ ಬುದ್ಧ 
ದಿಟ್ಟ ಕಲ್ಕ್ಯಾವತಾರತಾಳಿ ಪ್ರಸನ್ವೇಂಕಟ ಕೃಷ್ಣ ವಿಠಲಾ || ೫ ||

bhaktavatsala paMDharIraayaa viThThalaa hari viThThalaa
viThThalaa piDi enna kaiyyaa || pa ||

diTTa puMDalIka tanna puTTisidavara mana
muTTi bhajisalu chittagoTTu baMdeyaa viThalaa || 1 ||

koTTa maatige bhaktara kaTTinoLu siluki kaM
geTTeya bhavaabdhiyalli ninna guTTu tOrayya viThalaa || 2 ||

biTTu baralaagade ninage thaTTane nIDalu cheluva
iTTigeya mEle aMghripadma iTTu niMteya viThalaa || 3 ||

neTTane vEdava taMdu beTTa etti iLeya potti
siTTu taaLi vaTuve KaLara siTTilyaLedeyaa viThalaa || 4 ||

kaTTi kaDalali jagajaTTi gOpanaagi buddha 
diTTa kalkyaavataarataaLi prasanvEMkaTa kRuShNa viThalaa || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru