ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಲಘು ವಾಯು ಸ್ತುತಿ | ವಾದಿರಾಜರು | Sri Laghu Vaayu Stuti | Vadirajaru | Pranadevara Stotra


 
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರೀ ಮದ್ವಾದಿರಾಜ ತೀರ್ಥ ವಿರಚಿತ ಲಘು ವಾಯು ಸ್ತುತಿಃ 


ಶ್ರೀಮದ್ವಿಷ್ಣ್ವಾಜ್ಞದಿಂದ ಜನಿಸಿ ಪವನನು ಕೇಸರೀ ಕ್ಷೇತ್ರದಲ್ಲಿ
ಕಂಜಾಕ್ಷೀ ಸೀತೆಗಾಗಿ ಲವಣಜಲಧಿಯಂ ಲಂಘಿಸಿ ಲಂಕೆಯಲ್ಲಿ |
ಇದ್ದಂಥಾ ರಾವಣನ್ನು ರಘುಪನ ಕರದಿ ನಿಂಗಿಸಿ ಭೂಮಿಯಿಂದ
ಕೂಡಿದ್ದಾ ರಾಘವನ್ನು  ಭಜಿಸಿ ಮೆರೆದಿ ಕಿಂಪೂರುಷಾ ಖಂಡದಲ್ಲಿ   ||೧||

ಆ ವಾಯು ಭೀಮನಾಗಿ ಸುರವರ ಬಲದಿಂ ಕೊಬ್ಬಿದಾ ಮಾಗದನ್ನು 
ಕಿರ್ಮೀರಂ ಕೀಚಕನ್ನು ಬಕಮುಖಖಲರಂ ದುಷ್ಟದುರ್ಯೋಧನನ್ನು |
ಕೊಂದು ರಾಜಾಶ್ವಮೇಧ ಪ್ರಮುಖಮಖಗಳಂ ಮಾಡಿ ಕೃಷ್ಣಾರ್ಪಣೆಂದು 
ರಾಜಾಧೀರಾಜನಾಗಿ ಸುಜನರಪತಿಯು ಮೆರದನು ಸಾಧು ಬಂಧು    ||೨||

ಪ್ರಾಗ್ ಜನ್ಮದ್ವೇಷದಿಂದ ಕಲಿಯಲಿ ಮಣಿಮಾನ್ ಸಂಕರಾಚಾರ್ಯನಾಗಿ
ಬ್ರಹ್ಮಾಹಂ ನಿರ್ಗುಣೋಹಂ ವಿತಥ ವಚನದಿಂ ಎಲ್ಲರಂ ಕೆಡಿಸಲಾಗಿ |
ಅಜ್ಞಾನಾಖ್ಯಾನದಿಂದ  ಸುಜನರ ಮತಿಯು ಮ್ಲಾನವಂ ಪೊಂದಿರಲ್ಲು
ಶ್ರೀಶಾಜ್ಞಾ ಶಿರದಿ ವಹಿಸಿ ಕುರುಕುಲ ಪತಿಯೂ  ಆದನೂ ಮಧ್ವಸೂರ್ಯಾ  ||೩||

ಸರ್ವಜ್ಞ ಶ್ರೀಶನೇವೇ ವಿಧಿಭವಮುಖರು  ಶ್ರೀಹರಿ ದಾಸರೇವೇ
ಸತ್ಯವೇ ಈಜಗತ್ತು ಜನವು ತ್ರಿವಿಧವು ನಿತ್ಯ ಪಂಚಪ್ರಭೇದ |
ಈಶಾಧೀನೇವೇ ಸರ್ವಶ್ರುತಿಗಿದನುಗುಣಾ ಅಂದದೇವೇ ಪ್ರಮಾಣಾ  
ಹೀಗೆಂದು ಮಧ್ವಸೂರ್ಯ ತಿಳಿಸಿ ಸುಜನಕೆ ಇತ್ತನು ದಿವ್ಯಮೋದಾ   ||೪||

ಕೇಳೋ ದುರ್ಮಾಯವಾದೀ  ಸಕಲ ಸುರಪನು ಎಂದಿಗಲ್ಪಜ್ಞನಲ್ಲ 
ಜಿಜ್ಞಾಸ್ಯ ಬ್ರಹ್ಮನಾರಾಯಣ  ಸಕಲಜಗತ್ಪರಿಮಿತಿಯನ್ನು ಬಲ್ಲ |
ನೀನರಿಯೋ ನಿನ್ನ ನಾರಿ ಹಗಲು ಇರುಳಲಿ ಜಾರವಾಮಾಡುವೋದು 
ಬ್ರಹ್ಮಾಹಂ ನಿರ್ಗುಣೆಂಬೋ ವಿತಥ ವಚನವಂ ಹ್ಯಾಂಗೆ ನೀ ಆಡುವೋದು  ||೫|| 

ಮಾಯಾವಾದಿಗೆ ಮಾನಹೀನಜನಕೆ ಶುದ್ಧಿಲ್ಲದಾ ಪಾಪಿಗೆ  
ಮಾಯೀ ಸಂಕರಗೆ ಸಮೀರನಗದಾ ಪೆಟ್ಟಿಂದಲೇ ಮುಕ್ತಿಯು |
ನಿತ್ಯಂಧಂತಮ ಅಹುದೆಂದು ತಿಳಿದು ಅಜ್ಞಾನವಂ ವರ್ಜಿಸಿ
ಶ್ರೀಮುದ್ರಾಸಹ ಗೋಪೀಚಂದನವನು ದೇಹಂಗಳಲ್ಯರ್ಚಿಸಿ  ||೬||

Sri Madwadiraja Teertha Virachita Laghu Vaayu Stutihi

shrimadvishhNvaajnjadimda janisi pavananu kesari kshhethradalli 
kamjaakshhi sithegaagi lavaNajaladhiyam lamghisi lamkeyalli | 
iddamthhaa raavaNannu raghupana karadi nimgisi bhumiyimda 
kuDiddaa raaghavannu bhajisi meredi kimpurushhaa khamDadalli ||1|| 

aaa vaayu bhimanaagi suravara baladim kobbidaa maagadannu 
kirmiram kichakannu bakamukhakhalaram dushhTaduryodhanannu | 
komdu raajaashvamedha pramukhamakhagaLam maaDi krrishhNaarpaNemdu 
raajaadhiraajanaagi sujanarapathiyu meradanu saadhu bamdhu ||2|| 

praag janmadveshhadimda kaliyali maNimaan samkaraachaaryanaagi 
brahmaaham nirguNoham vithathha vachanadim ellaram keDisalaagi | 
ajnjaanaakhyaanadimda sujanara mathiyu mlaanavam pomdirallu 
shrishaajnjaa shiradi vahisi kurukula pathiyu aadanu madhvasuryaa ||3|| 

sarvajnja shrishaneve vidhibhavamukharu shrihari daasareve 
sathyave ijagaththu janavu thrividhavu nithya pamchaprabheda |
ishaadhineve sarvashruthigidanuguNaa amdadeve pramaaNaa 
higemdu madhvasurya thiLisi sujanake iththanu divyamodaa ||4|| 

keLo durmaayavaadi sakala surapanu eamdigalpajnjanalla 
jijnjaasya brahmanaaraayaNa sakalajagathparimithiyannu balla | 
ninariyo ninna naari hagalu iruLali jaaravaamaaDuvodu 
brahmaaham nirguNembo vithathha vachanavam hyaamge ni aaDuvodu ||5|| 

maayaavaadige maanahinajanake shuddhilladaa paapige 
maayi samkarage samiranagadaa peTTimdale mukthiyu | 
nithyamdhamthama ahudemdu thiLidu ajnjaanavam varjisi 
shrimudraasaha gopichamdanavanu dehamgaLalyarchisi ||6||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru