ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗಾಡಿಕಾರ ಶ್ರೀಕೃಷ್ಣ | ಹಯವದನ | Gadikara Sri Krishna | Hayavadana


 
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಗಾಡಿಕಾರ ಶ್ರೀಕೃಷ್ಣ ರನ್ನ ಬಿಡದಿರೋ ಎನ್ನ || ಪ ||
ಬಡವರ ರಕ್ಷಿಪನ್ನ ಅಡಿಗೆರಗುವೆ ನಿನ್ನ || ಅಪ ||

ಕಡಲ ಮಗಳ ಗಂಡ ಒಡಲೊಳು ತೋರ್ದಜಾಂಡ
ಪಿಡಿದ ದಂಡ ದೋರ್ದಂಡ ಬೇಡಿದಿಷ್ಟದಾನ ಶೌಂಡ || ೧ ||

ಶರಧಿ ಮಧ್ಯದಿ ಪುರವರ ನಿರ್ಮಿಸಿದ ಧೀರ
ಈರೇಳು ಭುವನೋದ್ಧಾರ ನೀರದ ಶ್ಯಾಮಲಾಕಾರ || ೨ ||

ಮಂದಸ್ಮಿತ ಮುಖದಿಂದ ಬಂದು ಉಡುಪಿಲಿ ನಿಂದ
ನಂದನ ಕಂದ ಮುಕುಂದ ವೃಂದಾರಕೇಂದ್ರ ಗೋವಿಂದ || ೩ ||

ಭಾವಗೊಲಿದ ಅಜೋದ್ಭವ ಭವ ಸಂಜಾತರ ಕಾವ
ಭವಾಬ್ಧಿ ತಾರಕದೇವ ಭಾವಿಸುವರ ಸಂಜೀವ || ೪ ||

ಮಧ್ವಮುನಿಪನೊಡೆಯ ಶುದ್ಧಯತಿಗಣಪ್ರಿಯ
ಶುದ್ಧವಾದ ಆಗಮಜ್ಞೇಯ ಮುದ್ದು ಹಯವದನರಾಯ || ೫ ||

gaaDikaara shrIkRuShNa ranna biDadirO enna || pa ||
baDavara rakShipanna aDigeraguve ninna || apa ||

kaDala magaLa gaMDa oDaloLu tOrdajaaMDa
piDida daMDa dOrdaMDa bEDidiShTadaana shouMDa || 1 ||

sharadhi madhyadi puravara nirmisida dhIra
IrELu bhuvanOddhaara nIrada shyaamalaakaara || 2 ||

maMdasmita muKadiMda baMdu uDupili niMda
naMdana kaMda mukuMda vRuMdaarakEMdra gOviMda || 3 ||

bhaavagolida ajOdbhava bhava saMjaatara kaava
bhavaabdhi taarakadEva bhaavisuvara saMjIva || 4 ||

madhvamunipanoDeya shuddhayatigaNapriya
shuddhavaada Agamaj~jEya muddu hayavadanaraaya || 5 ||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru