ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೇಶವ ನಾಮ | ಈಶ ನಿನ್ನ ಚರಣ | ಕನಕದಾಸರು | Keshava Nama | Esha Ninna Charana | Kanakadasaru


ಸಾಹಿತ್ಯ : ಶ್ರೀ ಕನಕದಾಸರು (ಕಾಗಿನೆಲೆ ಆದಿಕೇಶವ)
Kruti: Sri Kanakadasaru (Kaginele Adikeshava) 


ಕೇಶವ ನಾಮ 

ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು 
ದೋಷರಾಶಿ ನಾಶಮಾಡು ಶ್ರೀಶ ಕೇಶವ ||ಪ|| 

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ 
ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||೧|| 

ಶೋಧಿಸೆನ್ನ ಭವದ ಕಲುಷ| ಭೋಧಿಸಯ್ಯ ಜ್ಞಾನವೆನಗೆ 
ಬಾಧಿಸುವ ಯಮನಭಾದೆ ಬಿಡಿಸು ಮಾಧವ ||೨|| 

ಹಿಂದನೇಕ ಯೋನಿಗಳಲಿ ಬೆಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||೩|| 

ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ| 
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ||೪|| 

ಮೊದಲು ನಿನ್ನ ಪಾದಪೂಜೆ ಮುದದಿ ಮಾಡುವೆನು 
ನಾನು ಹೃದಯದಲ್ಲಿ ಅಡಗಿರಯ್ಯ ಮಧುಸೂದನ ||೫||

ಕವಿದುಕೊಂಡು ಇರುವ ಪಾಪ ಸವೆದು 
ಹೋಗುವಂತೆ ಮಾಡಿ ಯಮನ ಬಾಧೆಯನ್ನು ಬಿಡಿಸೋ ತ್ರಿವಿಕ್ರಮ||೬|| 

ಕಾಮಜನಕ ನಿನ್ನ ನಾಮ ಪ್ರೇಮದಿಂದ 
ಪಾಡುವಂತೆ ನೇಮ ಎನಗೆ ಪಾಲಿಸಯ್ಯ ಸ್ವಾಮಿ ವಾಮನ ||೭|| 

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ 
ಬರುವಂತೆ ಹೃದಯದಲ್ಲಿ ಸದನಮಾಡೋ ಮುದದಿ ಶ್ರೀಧರಾ ||೮|| 

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ 
ರಸಿಕನೆಂದು ಹುಸಿಗೆಹಾಕದಿರು ಎನ್ನ ಹೃಷಿಕೇಶನೇ ||೯|| 

ಅಬ್ಧಿಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ 
ಭವದಿ ಗೆದ್ದು ಪೋಪ ಬುದ್ಧಿ ತೋರೋ ಪದ್ಮನಾಭನೇ ||೧೦|| 

ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ 
ನುಡಿಸು ಶ್ರೀ ಮಹಾನುಭಾವನಾದ ದಾಮೋದರ ||೧೧|| 

ಪಂಕಜಾಕ್ಷ ನೀನೆಯನ್ನ ಮಂಕು ಬುದ್ದಿಯನ್ನ ಬಿಡಿಸಿ 
ಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ ||೧೨|| 

ಏಸು ಜನ್ಮ ಬಂದರೇನು ದಾಸನಾಗಲಿಲ್ಲ ನಾನು 
ಘಾಸಿ ಮಾಡದಿರು ಇನ್ನು ವಾಸುದೇವನೇ ||೧೩|| 

ಬುದ್ಧಿ ಶೂನ್ಯನಾಗಿ ನಿನಗೆ ಕದ್ದ ಕಳ್ಳನಾದೆ
ಎನ್ನ ತಿದ್ದಿ ಹೃದಯ ಶುದ್ಧಿ ಮಾಡೋ ಪ್ರದ್ಯುಮ್ನನೇ ||೧೪|| 

ಜನನಿ ಜನಕ ನೀನೆ ಎಂದು ನೆನೆವೆನಯ್ಯ 
ದೀನ ಬಂಧೋ ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೇ ||೧೫|| 

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು 
ಪ್ರೇಮ ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ||೧೬|| 

ಸಾಧು ಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು 
ಎನ್ನ ಭೇದ ಮಾಡದಿರು ಇನ್ನು ಅಧೋಕ್ಷಜ ||೧೭|| 

ಚಾರು ಚರಣ ತೋರಿ ಎನಗೆ ಪಾರುಗಾಣಿಸಯ್ಯ 
ಕೊನೆಗೆ ಭಾರ ಹಾಕಿರುವೆ ನಿನಗೆ ನಾರಸಿಂಹನೆ ||೧೮|| 

ಸಂಚಿತಾರ್ಥ ಪಾಪಗಳನು ಕಿಂಚಿತಾದ್ರು 
ಯಿಡದಂತೆ ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ ||೧೯|| 

ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು 
ಎನ್ನ ಹೀನಬುದ್ಧಿ ಬಿಡಿಸೋ ಮುನ್ನ ಜನಾರ್ದನ ||೨೦ || 

ಜಪ ತಪಾನುಷ್ಟಾನವನ್ನು ಒಪ್ಪುವಂತೆ ಮಾಡಲಿಲ್ಲ 
ತಪ್ಪು ಕೋಟಿ ಕ್ಷಮಿಸಬೇಕು ಉಪೇಂದ್ರನೆ ||೨೧|| 

ಮೊರೆಯಿಡುವೆನಯ್ಯ ನಿನಗೆ ಸೆರೆಯಬಿಡಿಸೊ ಭವದಿ 
ಎನಗೆ ಇರಿಸು ನಿನ್ನ ಭಕ್ತರೊಡನೆ ಪರಮಪುರುಷ ಶ್ರೀಹರಿ ||೨೨|| 

ಹುಟ್ಟಿಸಬೇಡಯ್ಯ ಇನ್ನು ಹುಟ್ಟಿಸಿದಕೆ ಪಾಲಿಸಿನ್ನು 
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ||೨೩|| 

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವರಿಗೆ 
ಅರ್ತಿಯಿಂದ ಸಲಹುವನು ಕರ್ತೃ ಕೇಶವ ||೨೪|| 

ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳಿದರೆ 
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ ||೨೫|| 

Keshava Nama


Isha ninna caraNa Bajane AseyiMda mADuvenu 
dOSharASi naashamADu SrIsha kEshava ||pa|| 

sharaNu hokkenayya enna maraNa samayadalli 
ninna charaNa smaraNe karuNisayya nArAyaNa ||1|| 
 
shOdhisenna Bavada kaluSha| BOdhisayya jnAnavenage 
bAdhisuva yamanaBAde biDisu mAdhava ||2|| 
 
hiMdanEka yOnigaLali beMdu baMdu noMde naanu
iMdu Bavada baMdha biDisO taMde gOviMda ||3|| 
 
BraShTanenisabEDa kRuShNa iShTu mAtra bEDikoMbe| 
shiShTaroDane iTTu kaShTa biDisu viShNuve ||4|| 
 
modalu ninna pAdapUje mudadi mADuvenu 
nAnu hRudayadalli aDagirayya madhusUdana ||5|| 
 
kavidukoMDu iruva pApa savedu 
hOguvaMte mADi yamana bAdheyannu biDisO trivikrama||6|| 
 
kAmajanaka ninna nAma prEmadiMda 
pADuvaMte nEma enage pAlisayya svAmi vAmana ||7|| 
 
madananayya ninna mahime vadanadalli 
baruvaMte hRudayadalli sadanamADO mudadi SrIdharA ||8|| 
 
husiyanADi hoTTe horeva viShayadalli 
rasikaneMdu husigehAkadiru enna hRuShikESanE ||9|| 
 
abdhiyoLage biddu nAnu oddu koMbenayya 
Bavadi geddu pOpa buddhi tOrO padmanABanE ||10|| 
 
kAma krOdha biDisi ninna nAma jihveyoLage 
nuDisu SrI mahAnuBAvanAda dAmOdara ||11|| 
 
paMkajAkSha nIneyanna maMku buddhiyanna biDisi 
kiMkaranna mADikoLLo saMkaruShaNa ||12|| 
 
Esu janma baMdarEnu dAsanAgalilla nAnu 
GAsi mADadiru innu vAsudEvanE ||13|| 

buddhi SUnyanAgi ninage kadda kaLLanAde
enna tiddi hRudaya Suddhi mADO pradyamnanE ||14|| 
 
janani janaka nIne eMdu nenevenayya 
dIna baMdhO enage mukti pAlisiMdu aniruddhanE ||15|| 
 
haruShadiMda ninna nAma smarisuvaMte mADu 
prEma irisu ninna caraNadalli puruShOttama||16|| 
 
sAdhu saMga koTTu ninna pAda Bajakanenisu 
enna BEda mADadiru innu adhOkShaja ||17|| 
 
cAru caraNa tOri enage pArugANisayya 
konege BAra hAkiruve ninage nArasiMhane ||18|| 
 
saMcitArtha pApagaLanu kiMcitAdru 
yiDadaMte muMcitAgi kaLeyabEku svAmi acyuta ||19|| 
 
j~jAna Bakti koTTu ninna dhyAnadalli iTTu 
enna hInabuddhi biDisO munna janArdana ||20|| 
 
japa tapAnuShTAnavannu oppuvaMte mADalilla 
tappu kOTi kShamisabEku upEMdrane ||21|| 
 
moreyiDuvenayya ninage sereyabiDiso Bavadi 
enage irisu ninna BaktaroDane paramapuruSha SrIhari ||22|| 
 
huTTisabEDayya innu huTTisidake pAlisinnu 
iShTu mAtra bEDikoMbe SrIkRuShNanE ||23|| 
 
satyavAda nAmagaLanu nityadalli paThisuvarige 
artiyiMda salahuvanu kartRu kESava ||24|| 
 
maretu biDade hariya nAma baredu Odi kELidare 
karedu mukti koDuva neleyAdikESava ||25||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru