ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಂಬಿ ನೆಚ್ಚದಿರೋ ನರಲೋಕ | ವಿಜಯ ವಿಠಲ | Nambi Nechchadiro | Vijaya Vittala


 

ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ನಂಬಿ ನೆಚ್ಚದಿರೋ ನರಲೋಕ ಸ್ಥಿರವೆಂಬೋ ಅಂಬಲಿ ಪರಮಾನ್ನ ||ಪ||
ಹಂಬಲಿಸುತಿರೋ ಹರಿ ಲೋಕಾನಂದವೆಂಬೋ ಪೀಯೂಷಪಾನ ||ಅಪ||

ದುರುಳ ಜನರ ಸಂಗವೆಂಬೋದೆ ಎಂದಿಗೂ ನೊಣ ಬೆರೆಸಿದ ಊಟ ||
ಪರಮ ಭಾಗವತರ ಪದಸಂಗ ಎಂಬೋದೆ ಮಸ್ತಕಮಣಿ ಮುಕುಟ ||
ಮರೆಮೋಸಗೊಳಿಸುವ ಸತಿಸುತರೆಂಬೋರೆ ಕೇವಲ ಯಮಕಾಟ ||
ಪರತತ್ವನಾದ ಶ್ರೀ ಹರಿಯನ್ನೇ ಭಜಿಸೋದೆ ವೈಕುಂಠಕೆ ಓಟ ||೧||

ಅಲ್ಪ ಆಯುಷ್ಯವೆ ಈ ಶರೀರವು ಗಾಳಿಗಿಕ್ಕಿದ ದೀಪ ||
ಅಲ್ಪ ಸಂತೋಷನಾಗು ಅದು ನಿನಗೆ ನೋಡೋ ಹಾಲು ಸಕ್ಕರೆ ತುಪ್ಪ ||
ಬಲುಪಂಥ ಮಾಡದಿರು ಜನುಮ ಜನುಮಗಳಲಿ ಬಿಡದೀ ಸಂತಾಪ ||
ಸ್ವಲ್ಪ ಕಾಲಾದರೂ ಮಧ್ವ ಮತವೇ ಪೊಂದು ಭವವೇ ನಿರ್ಲೇಪ ||೨||

ಭಾವ ವಿರಕುತೀಯ ಧರಿಸದಿದ್ದರೆ ನೋಡು ಆಗುವುದು ಖೇದ ||
ಸಾವಿರಕ್ಕೊಂದೇ ಮಾತು ಹರಿದಾಸನೆನಿಸೋದೆ ಪರಿಪರಿಯಲಿ ಸ್ವಾದ ||
ದೇವಕೀಸುತ ನಮ್ಮ ವಿಜಯ ವಿಠಲನಂಘ್ರಿ ತೀರ್ಥಪ್ರಸಾದ ||
ಸೇವಿಸದ ನರ ನಿತ್ಯ ನರಕವಾಸಿ ಎನ್ನುತಲಿದೆ ವೇದ ||೩||

naMbi nechchadirO naralOka sthiraveMbO aMbali paramAnna ||pa||
haMbalisutirO hari lOkAnaMdaveMbO pIyooShapaana ||apa||

duruLa janara saMgaveMbOde eMdigU noNa beresida UTa ||
parama BAgavatara padasaMga eMbOde mastakamaNi mukuTa ||
maremOsagoLisuva satisutareMbOre kEvala yamakATa ||
paratatvanAda SrI hariyannE BajisOde vaikuMThake OTa ||1||

alpa AyuShyave I SarIravu gALigikkida dIpa ||
alpa saMtOShanaagu adu ninage nODO hAlu sakkare tuppa ||
balupaMtha mADadiru januma janumagaLali biDadI saMtApa ||
svalpa kAlAdarU madhva matavE poMdu BavavE nirlEpa ||2||

BAva virakutIya dharisadiddare nODu Aguvudu KEda ||
sAvirakkoMdE mAtu haridAsanenisOde paripariyali svAda ||
dEvakIsuta namma vijaya viThalanaMGri tIrthaprasAda ||
sEvisada nara nitya narakavAsi ennutalide vEda ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru