ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರಯ್ಯ ಬಾ ಬಾ | ಗೋಪಾಲ ದಾಸರು | Barayya Baa Baa | Gopala Vittala


 

ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala dasaru (Gopala vittala)


ಬಾರಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ
ಮಾರ ಜನಕ ಮುಕುತರೊಡೆಯ ದೇವಯ್ಯ ಜೀಯ || ಪ ||

ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ
ವಾರಿಜಝಾಂಡದ ಕಾರಣ ದೊರೆಯೆ || ಅಪ ||

ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕಾರುಣ್ಯಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿ
ವೃಂದ ಬಂದು ನಿಂದು ಧೀಂ ಧೀಂ ಧೀಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ || ೧ ||

ಜಗತ್‌ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕವ ಲಘುವಾಗಿ ಧರಿಸಿದ ಮುಕುಂದ
ಭಕ್ತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹೋರಗಗಿರಿವಾಸ || ೨ ||

ತಡಮಾಡ ಬೇಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು 
ಅಡಿಗಳನಿಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದಡದಡನೆ ಬಂದು
ಹಿಡಿದ ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡನೆ ಬೇಗ || ೩ ||

bArayya bA bA Bakutara priya SrInivAsa rAya
mAra janaka mukutaroDeya dEvayya jIya || pa ||

vArijalayapate vArijanABane
vArijaBavapita vArijanEtrane
vArijamitra apArapraBAvane
vArijaJAMDada kAraNa doreye || apa ||

syaMdanavEribappa raMga dEvOttuMga
naMda naMdana arimadaBaMga kAruNyapAMga
siMdhuSayana suMdarAMga hE nArasiMga
kaMda viriMciyu naMdivAhana amarEMdra
sanaka sanaMdanAdi muni
vRuMda baMdu niMdu dhIM dhIM dhIM dhimikeMdu
niMdADalu AnaMdadi manake || 1 ||

jagatjanmAdi karta gOviMda
udaradi lOkava laGuvAgi dharisida mukuMda
Baktara manake Jaga Jagisuta poLevAnaMda nigamAvaLiyiMda
agaNita munigaNa naga Kaga mRuga SaSi
gagana maNyAdyaru sogasAgi bage bage
pogaLutali bEga jigijigidADalu
muguLunageya mahOragagirivAsa || 2 ||

taDamADa bEDavo hE nalla
vAku lAlisu ennoDeya gOpAla viThThala
dEva parAku 
aDigaLaniDu Baktavatsala SrI lakuminalla
maDuvinoLage gaja moreyiDalAkShaNa
maDadige hELade daDadaDane baMdu
hiDida nakrana bAya kaDidu biDisidane
saDagaradali ramepoDaviyoDane bEga || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru