ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತಂದೆ ವಿಜಯರಾಯ | ಮೋಹನ ವಿಠಲ | Tande Vijayaraya | Mohana Vithala


 

ಸಾಹಿತ್ಯ : ಶ್ರೀ ಮೋಹನ ದಾಸರು
Kruti: Sri Mohana Dasaru


ತಂದೆ ವಿಜಯರಾಯ ನೀ ವ್ಯಾಳ್ಯಗೆ 
ಬಂದ್ಯೋ ವಿಜಯ ರಾಯ ||ಪ|| 

ಹಿಂದೇಸು ಜನುಮವೋ ಮುಂದೇಸು ಜನುಮವೋ, 
ಒಂದು ತಿಳಿಯೆ ನಾ ಎಂದೆಂದಿಗೂ ಎನ್ನ ||ಅ.ಪ.|| 

ಸೂರ್ಯನ ಸುತನಂತೆ, 
ಅಲ್ಲಿ ಮಹಾ ಶೌರ್ಯ ದೂತರಂತೆ || 
ಕಾರ್ಯಾಕಾರ್ಯವ ತಿಳಿಯದೆ ತಮ್ಮ 
ಪರಿಚಾರ್ಯನೆಳೆಯುತಿರೆ ಭಾರ್ಯಳು ಮೊರೆಯಿಡೆ ||೧||

ಅದು ಧೈರ್ಯವ ನೋಡಿ, 
ಸುದತಿ ತನ್ನ ಹೃದಯ ಬದ್ದ ಮಾಡಿ 
ಮಧುಸೂದನನೇ ಮೋದ ತೀರ್ಥರೆಂದು 
ಒದರಿದಳ್ ಒದರಿದಳ್ ವಿಜಯ ರಾಯರೆಂದು ||೨|| 

ಕರಗಳನೇ ಕಟ್ಟಿ ಎಳೆಯುತಿರೆ 
ದೊರೆಗಳನೇ ಮುಟ್ಟಿ, 
ಸಿರಿ ಮೋಹನ ವಿಠಲನ ಪಾದವ ತೋರಿ 
ಧರೆಗೆ ತಂದುಬಿಟ್ಯೋ ಕರುಣಾಳುವೆ ಎನ್ನ ||೩||

taMde vijayarAya nI vyALyage 
baMdyO vijaya rAya ||pa|| 

hiMdEsu janumavO muMdEsu janumavO, 
oMdu tiLiye nA eMdeMdigU enna ||a.pa.|| 

sUryana sutanaMte, 
alli mahA shaurya dootaraMte || 
kAryAkAryava tiLiyade tamma 
paricAryaneLeyutire bhaaryaLu moreyiDe ||1||

adu dhairyava nODi, 
sudati tanna hRudaya badda mADi 
madhusUdananE mOda tIrthareMdu 
odaridaL odaridaL vijaya rAyareMdu ||2|| 
 
karagaLanE kaTTi eLeyutire 
doregaLanE muTTi, 
siri mOhana viThalana pAdava tOri 
dharege taMdubiTyO karuNALuve enna ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru