ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಂಬಿಗ ನಾ ನಿನ್ನ ನಂಬಿದೆ | ಪುರಂದರ ವಿಠಲ | Ambiga na ninna Nambide | Purandara Vittala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಅಂಬಿಗ ನಾ ನಿನ್ನ ನಂಬಿದೆ ಜಗ 
ದಂಬಾರಮಣ ನಿನ್ನ ನಂಬಿದೆ ||ಅಪ|| 

ತುಂಬಿದ ಹರಿಗೋಲು ಅಂಬಿಗ | 
ಅದಕ್ಕೊಂಭತ್ತು ಛಿದ್ರವು ಅಂಬಿಗ || 
ಸಂಭ್ರಮದಿಂದ ನೋಡಂಬಿಗ | 
ಅದರಿಂಬು ನೋಡಿ ನಡೆಸಂಬಿಗ ||೧|| 

ಹೊಳೆಯ ಭರವ ನೋಡಂಬಿಗ | 
ಅದಕೆ ಸೆಳೆವು ಘನವಯ್ಯ ಅಂಬಿಗ || 
ಸುಳಿಯೊಳು ಮುಳುಗಿದೆ ಅಂಬಿಗ | 
ಎನ್ನ ಸೆಳೆದೂ ಕೊಂಡೊಯ್ಯೋ ನೀನಂಬಿಗ ||೨||
ಆರು ತೆರೆಯ ನೋಡಂಬಿಗ | 
ಅದು ಮೀರಿ ಬರುತಲಿದೆ ಅಂಬಿಗ || 
ಯಾರಿಂದಲಾಗದು ಅಂಬಿಗ | 
ಅದ ನಿವಾರಿಸಿ ದಾಟಿಸೋ ಅಂಬಿಗ ||೩|| 

ಹತ್ತು ಬೊಬ್ಬುಳಿಗಳು ಅಂಬಿಗ | 
ಅದಕೆ ಮತ್ತೈದು ಮುತ್ತಿವೆ ಅಂಬಿಗ || 
ಮುತ್ತಿಗೆ ಒಳಗಾದೆ ಅಂಬಿಗ | 
ಎನ್ನನ್ನೆತ್ತಿ ಕೊಂಡೊಯ್ಯೋ ನೀನಂಬಿಗ ||೪|| 

ಸತ್ಯವೆಂಬುದೆ ಹುಟ್ಟಂಬಿಗ | 
ಸದಾ ಭಕ್ತಿಯೆಂಬುದೆ ಪಥವಂಬಿಗ | 
ನಿತ್ಯ ಮೂರುತಿ ಪುರಂದರ ವಿಠಲ 
ನಮ್ಮನ್ಮುಕ್ತಿ ಮಂಟಪಕ್ಕೊಯ್ಯೋ ಅಂಬಿಗ ||೫||

aMbiga nA ninna naMbide jaga 
daMbAramaNa ninna naMbide ||apa|| 
 
tuMbida harigOlu aMbiga | 
adakkoMBattu Cidravu aMbiga || 
saMBramadiMda nODaMbiga | 
adariMbu nODi naDesaMbiga ||1|| 
 
hoLeya Barava nODaMbiga | 
adake seLevu Ganavayya aMbiga || 
suLiyoLu muLugide aMbiga | 
enna seLedU koMDoyyO nInaMbiga ||2||
Aru tereya nODaMbiga | 
adu mIri barutalide aMbiga || 
yAriMdalAgadu aMbiga | 
ada nivArisi dATisO aMbiga ||3|| 
 
hattu bobbuLigaLu aMbiga | 
adake mattaidu muttive aMbiga || 
muttige oLagAde aMbiga | 
ennannetti koMDoyyO nInaMbiga ||4|| 
 
satyaveMbude huTTaMbiga | 
sadA BaktiyeMbude pathavaMbiga | 
nitya mUruti puraMdara viThala 
nammanmukti maMTapakkoyyO aMbiga ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru