ದೇವತಾ ತಾರತಮ್ಯದ ಹಾಡು
ಶರಣು ಶರಣೂ || ಪ ||
ಮಹದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನು
ಸಾಧುಮಾತೆಯ ಶಾಪವನ್ನು ಕೈಗೊಂಡು
ಆದಿಪೂಜೆಗೆ ಅಭಿಮಾನಿದೇವತೆಯಾದಿ
ಮಾಧವ ನಮ್ಮ ಹಯವದನನ್ನ ಪ್ರಿಯ || ೧ ||
ಹಿಮಗಿರಿಗೆ ಮಗಳಾಗಿ ಜನಿಸಿ ತಪವನುಗೈದು
ಕಮಲಸಂಭವಸುತನ ಒಲಿಸಬೇಕೆಂದು
ರಮಣಿ ರಾಮಮಂತ್ರ ದಿನಸಹಸ್ರವು ಜಪಿಸೆ
ಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ || ೨ ||
ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿ
ಕಡು ಘೋರ ತಪಗೈಯೆ ಮನ್ಮಥನು ಬರಲು
ಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿ
ಕಡಲೊಡೆಯ ನಮ್ಮ ಹಯವದನನ್ನ ಪ್ರಿಯ || ೩ ||
ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲು
ತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲು
ಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರ
ಅಚ್ಯುತ ನಮ್ಮ ಹಯವದನನ್ನ ಪ್ರಿಯೆ || ೪ ||
ಈರೇಳು ಲೋಕದ ಜನರ ನಾಲಿಗೆಯಲ್ಲಿ
ಬೀಜವನು ಬಿತ್ತಿ ಅನ್ನವ ಕೊಡುವ ತಾಯೆ
ವಾರಿಜ ಸಂಭವನ ಹಿರಿಯ ಪಟ್ಟದ ರಾಣಿ
ನೀರಜಾಕ್ಷ ನಮ್ಮ ಹಯವದನನ್ನ ಪ್ರಿಯೆ || ೫ ||
ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನು
ತ್ರೇತೆಯಲಿ ರಾಮರ ಸೇವೆಯನು ಮಾಡಿ
ಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀ
ಶ್ರೀಪತಿ ಹಯವದನ ದೂತ ಪ್ರಖ್ಯಾತ || ೬ ||
ಜನನಿ ಹುಟ್ಟಿದ ನಾಳದಲ್ಲಿ ಜನಿಸಿದಿ ನೀನು
ಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದು
ಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲು
ವನಜಾಕ್ಷ ನಮ್ಮ ಹಯವದನನ್ನ ಪ್ರಿಯ || ೭ ||
ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದು
ಪದ್ಮಾಕ್ಷನ ರಥಕೆ ಕೈ ನೀಡಿ ಬಂದೆ
ಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳು
ಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ || ೮ ||
ಅನಂತ ನಾಟಕಾನಂತ ಸೂತ್ರಧಾರಿ
ಅನಂತ ಚರಿತ ನಿತ್ಯಾನಂದಭರಿತ
ಅನಂತಾಸನ ಶ್ವೇತದ್ವೀಪ ವೈಕುಂಠ
ಅನಂತಗುಣಭರಿತ ಹಯವದನ ಚರಿತ || ೯ ||
ಚರಣು ಮತ್ಸ್ಯ ಕೂರ್ಮ ವರಾಹ ನಾರಸಿಂಹ
ಶರಣು ವಾಮನ ಭಾರ್ಗವ ರಾಮಚಂದ್ರ
ಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆ
ಶರಣು ಹಯವದನನ್ನ ಚರಣಗಳ ನುತಿಪೆ || ೧೦ ||
sharaNu sharaNU || pa ||
mahadEvaraa garbhadali udbhavisidiyo nInu
saadhumaateya shaapavannu kaigoMDu
AdipUjege abhimaanidEvateyaadi
maadhava namma hayavadananna priya || 1 ||
himagirige magaLaagi janisi tapavanugaidu
kamalasaMbhavasutana olisabEkeMdu
ramaNi raamamaMtra dinasahasravu japise
kamalaakShanemma hayavadananna priye || 2 ||
maDadi hOdaagrahake jaDeya kittappaLisi
kaDu ghOra tapagaiye manmathanu baralu
kiDigaNNinali avana bhasmavanu maaDidi
kaDaloDeya namma hayavadananna priya || 3 ||
matsyadEshake pOgi manada ciMteyaliralu
tucCarakkasanu nimmanu piDiya baralu
cittadollabhag~hELi koccisidi avana shira
achyuta namma hayavadananna priye || 4 ||
IrELu lOkada janara naaligeyalli
bIjavanu bitti annava koDuva taaye
vaarija saMbhavana hiriya paTTada raaNi
nIrajaakSha namma hayavadananna priye || 5 ||
kEsariya garbhadali udbhavisidiyo nInu
trEteyali raamara sEveyanu maaDi
bhUtaLadoLu bhIma kaDege yatiyaagi nI
shrIpati hayavadana dUta praKyaata || 6 ||
janani huTTida naaLadalli janisidi nInu
janara sRuShTi sthitige kaaraNaneMdu
animiSharellarU stutisi koMDaaDalu
vanajaakSha namma hayavadananna priya || 7 ||
padmadalludbhavisi raamara kaihiDidu
padmaakShana rathake kai nIDi baMde
padmaavati eMdu Kyaati mUrlOkadoLu
padmaakSha namma hayavadananna priye || 8 ||
anaMta naaTakaanaMta sUtradhaari
anaMta carita nityaanaMdabharita
anaMtaasana shvEtadvIpa vaikuMTha
anaMtaguNabharita hayavadana charita || 9 ||
charaNu matsya kUrma varaaha naarasiMha
sharaNu vaamana bhaargava raamacaMdra
sharaNu kRuShNa bouddha kalkyasvarUpane
sharaNu hayavadananna charaNagaLa nutipe || 10 ||