ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದಾಸ ದಾಸ ದಾಸರ ಸಂಗ | ವಿಜಯವಿಠಲ | Dasa Dasa Dasara Sanga | Vijaya Vittala


 

ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ದಾಸ ದಾಸ ದಾಸರ ಸಂಗವ ಕೊಡು ದೋಷ ರಾಶಿಯಳಿದು ||ಪ||
ಶ್ರೀಶ ಸರ್ವೇಶ ಸುರೇಶ ಭಾಸುರ ಗುಣ ಗಣ ಭವ್ಯ ಶರೀರ ||ಅಪ||

ಚಿತ್ತ ನಿನ್ನ ಪಾದ ಸೇವೆಯೊಳಿರಲಿ ಚಿಂತೆ ಇತರ ಬಿಡಲಿ |
ಅಂತರಂಗದಲ್ಲಾನಂದಿಸಲಿ ಅಹಂ ಕೃತಿಯನು ಬಿಡಲಿ ||
ಸಂತತ ನಿನ್ನ ಪದ ಪಂಕಜ ಭಕ್ತರ |
ಪಂಥವ ಪಾಲಿಸೋ ಪರಮ ಪುರುಷ ಹರಿ ||೧||

ಅರಿಷಡ್ವರ್ಗಗಳಟವಿಯ ಖಂಡಿಸು ಆನಂದದಲ್ಲಿರಿಸು |
ದುರುಳರ ಸಂಗವ ದೂರ ಮಾಡಿಸು |
ದುರ್ಮತಿಯನು ಬಿಡಿಸೋ ಸರಸ ಸಂಭ್ರಮ ಸನ್ನುತ ಭಕುತರೊಳು |
ನಿರುತವು ನಿಲ್ಲಿಸೋ ನೀರಜಾಕ್ಷ ಹರಿ ||೨||

ತ್ರಿಜಗನ್ಮೋಹನಾಕಾರ ತ್ರಿ ಗುಣಾತೀತ ತೀರ್ಥಪಾದ ||
ಭಕುತರ ಪಾವನ ಭವನುತ ಚರಣ ಋಜುಗಣನುತಾಭರಣ ||
ವಿಜಯ ವಿಠಲಾಧೀಶ ವಿಶ್ವೇಶ್ವರ ಕುಜನ
ವಿಧಾರಣ ಕೋವಿದನುತ ಹರಿ ||೩||

dAsa dAsa dAsara saMgava koDu dOSha rASiyaLidu ||pa||
SrISa sarvESa surESa BAsura guNa gaNa Bavya SarIra ||apa||

citta ninna pAda sEveyoLirali ciMte itara biDali |
aMtaraMgadallAnaMdisali ahaM kRutiyanu biDali ||
saMtata ninna pada paMkaja Baktara |
paMthava pAlisO parama puruSha hari ||1||

ariShaDvargagaLaTaviya KaMDisu AnaMdadallirisu |
duruLara saMgava dUra mADisu |
durmatiyanu biDisO sarasa saMBrama sannuta BakutaroLu |
nirutavu nillisO nIrajAkSha hari ||2||

trijaganmOhanAkAra tri guNAtIta tIrthapAda ||
Bakutara pAvana Bavanuta caraNa RujugaNanutABaraNa ||
vijaya viThalAdhISa viSvESvara kujana
vidhAraNa kOvidanuta hari ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru