ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಭಳಿರೆ ಭಳಿರೆ ನಾರಸಿಂಹ |ವಿಜಯದಾಸರು | Bhalire Bhalire Narasimha | Vijaya Vithala


 

ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಭಳಿರೆ ಭಳಿರೆ ನಾರಸಿಂಹ ಮಹಾಸಿಂಹ ||ಪ|| 
ಮಲಾಮಲಾ ಮಲತವರ ವೈರಿ ಉರಿಮಾರಿ ||ಅಪ||

ನಗ ನಗ ನಗಗಳಲ್ಲಾಡೆ ಚತುರ್ದಶ|
ಜಗ ಜಗ ಜಗವೆಲ್ಲ ಕಂಪಿಸಿ ಕೆಂಪಾಗೆ | 
ಹಗೆ ಹಗೆ ಹಗೆ ಬಲವ ದಶಗೆಡಿಸಿ ರೋಷಗಿಡಿ| 
ಉಗು ಉಗು ಉಗುಳುತ್ತ ಬಂದ ನರಸಿಂಹ || ೧ ||

ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ| 
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ| 
ನೆಗೆ ನೆಗೆ ನೆಗೆ ನೆಗೆದು ಕುಪ್ಪಳಿಸಿ ಅಸುರನ್ನ 
ಮಗು ಮಗು ಮಗು ಬೇಡಿಕೊಂಡ ನರಸಿಂಹ || ೨ ||

ಉಗು ಉಗು ಉಗುರಿಂದ ಕ್ರೂರನ್ನ ಹೇರೊಡಲ | 
ಬಗೆ ಬಗೆ ಬಗೆ ಬಗೆದು ರಕುತವನ್ನು | 
ಉಗಿ ಉಗಿ ಉಗಿ ಉಗಿದು ಚೆಲ್ಲಿ ಕೊರಳಿಗೆ ಕರುಳ| 
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ || ೩ ||

ಯುಗ ಯುಗ ಯುಗದೊಳಗೆ ಪ್ರಣತಾರ್ಥಿ ಹರನೆಂದು| 
ಝಗ ಝಗ ಝಗ ಝಗಿಪ ಮಕುಟ ತೂಗೆ| 
ನಗು ನಗು ನಗು ನಗುತ ಸುರರು ಗಗನದಿ ನೆರೆದು| 
ಮಿಗಿ ಮಿಗಿ ಮಿಗಿಲೆನೆ ನಾರಸಿಂಹ || ೪ ||

ಒಂದೊಂದೊಂದೊಂದು ಮುನಿಗಳಿಗೆ ಒಲಿದು|
ಅಂದಂದಂದಂದಿ ಗಾಯತ ಒಲಿದು 
ಅಂದಂದವ ಕಾವ ಚೋಳಂಗಿರಿ 
ಮಂದಿರನೆ ವಿಜಯ ವಿಠಲ ನಾರಸಿಂಹ || ೫ || 

BaLire BaLire nArasiMha mahAsiMha ||pa|| 
malAmalA malatavara vairi urimAri ||apa||

naga naga nagagaLallADe caturdaSa|
jaga jaga jagavella kaMpisi keMpAge | 
hage hage hage balava daSageDisi rOShagiDi| 
ugu ugu uguLutta baMda narasiMha || 1 ||

bigi bigi bigidu hubbugaMTane hAki| 
hoge hoge hoge sutti sarvaraMje| 
nege nege nege negedu kuppaLisi asuranna 
magu magu magu bEDikoMDa narasiMha || 2 ||

ugu ugu uguriMda krUranna hEroDala | 
bage bage bage bagedu rakutavannu | 
ugi ugi ugi ugidu celli koraLige karuLa| 
tege tege tege tegedu iTTa narasiMha || 3 ||

yuga yuga yugadoLage praNatArthi haraneMdu| 
Jaga Jaga Jaga Jagipa makuTa tUge| 
nagu nagu nagu naguta suraru gaganadi neredu| 
migi migi migilene nArasiMha || 4 ||

oMdoMdoMdoMdu munigaLige olidu|
aMdaMdaMdaMdi gAyata olidu 
aMdaMdava kAva chOLaMgiri 
maMdirane vijaya viThala nArasiMha || 5 || 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru