ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹಕ್ಕಿಯ ಹೆಗಲೇರಿ ಬಂದವಗೆ | ಪ್ರಸನ್ನ ವೆಂಕಟ | Hakkiya Hegaleri Bandavage | Prasanna Venkata


ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು 
Kruti:Sri Prasanna Venkata Dasaru


ಹಕ್ಕಿಯ ಹೆಗಲೇರಿ ಬಂದವಗೆ ನೋ
ಡಕ್ಕ ಮನಸೋತೆ ನಾನವಗೆ || ಪ ||

ಸತ್ರಾಜಿತನ ಮಗಳೆತ್ತಿದ ಉ
ನ್ಮತ್ತ ನರಕನೊಳು ತಾ ಕಾದಿದ
ಮತ್ತೆ ಕೆಡಹಿದ ಅವನಂಗವ
ಸತಿಗಿತ್ತನು ತಾ ಆಲಿಂಗನವ || ೧ ||

ಹದಿನಾರು ಸಾವಿರ ನಾರಿಯರ ಸೆರೆ
ಮುದದಿಂದ ಬಿಡಿಸಿ ಮನೋಹರ
ಅದಿತಿಯ ಕುಂಡಲ ಕಳಸಿದಾ ಹರ
ವಿಧಿಸುರ ನೃಪರನು ಸಲಹಿದ || ೨ ||

ಉತ್ತಮ ಪ್ರಾಗ್ಜೋತಿಷ ಪುರವ ಭಗ
ದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀ -
ಮೂರ್ತಿಯ ಪಾದವ ಹೊಂದಿದೆ || ೩ ||

ನರಕ ಚತುರ್ದಶಿ ಪರ್ವದ ದಿನ 
ಹರುಷಾದಿ ಪ್ರಕಟಾದನು ದೇವ
ಶರಣಾಗತಜನ ವತ್ಸಲ ರಂಗ
ಪರಮ ಭಾಗವತರ ಪ್ರತಿಪಾಲಾ || ೪ ||

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ -
ನಗರದ ಅರಸನ ಕೀರ್ತಿಯ
ಜಗದೀಶ ಪ್ರಸನ್ವೆಂಕಟೇಶನ ಭಕ್ತ
ರಘಹಾರಿ ರವಿಕೋಟಿ ಪ್ರಕಾಶನ || ೫ ||

hakkiya hegalEri baMdavage nO
Dakka manasOte nAnavage || pa ||

satrAjitana magaLettida u
nmatta narakanoLu tA kAdida
matte keDahida avanaMgava
satigittanu tA AliMganava || 1 ||

hadinAru sAvira nAriyara sere
mudadiMda biDisi manOhara
aditiya kuMDala kaLasidA hara
vidhisura nRuparanu salahida || 2 ||

uttama prAgjOtiSha purava Baga
dattage koTTa varABayava
karta kRuShNayyana naMbide SrI -
mUrtiya pAdava hoMdide || 3 ||

naraka caturdaSi parvada dina
haruShAdi prakaTAdanu dEva
SaraNAgatajana vatsala raMga
parama BAgavatara pratipAlA || 4 ||

hogaLi kRuShNayyana mahimeya mukti -
nagarada arasana kIrtiya
jagadISa prasanveMkaTESana Bakta
raGahAri ravikOTi prakASana || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru