ಪಾಂಚಜನ್ಯದ ಜತೆಗೆ ಕೈಯಲ್ಲಿ ಸುದರ್ಶನಂ
ಗಧೆಯ-ಕಮಲವ-ಶಾರ್ಙ್ಗನಂದಕಗಳಂ ಧರಿಸಿ
ಸತತವೂ ಜಗವನ್ನು ಪಾಲಿಸುವ ತಂದೆಯನು
ಶ್ರೀವಾಸುದೇವನನ್ನು ಸರ್ವದಾ ನಮಿಪೆಂ || ೧ ||
ಜಗದೆದೆಯೊಳವಿತಿರುವ ಎಲ್ಲೆಡೆಯು ತುಂಬಿರುವ
ಸಚ್ಚಿದಾನಂದಗಳೆ ಮೈವೆತ್ತ ಮೂರುತಿಯ
ತನ್ನೊಳಂತರವಿರದ ದೋಷಗಣದೂರನಾದ
ಒಬ್ಬನೇ ಒಬ್ಬನನ್ನು ನಾನು ನಮಿಪೆಂ || ೨ ||
ಬಹುರೂಪಗಳ ಧರಿಸಿ ಎಲ್ಲ ರೂಪಗಳಲ್ಲೂ
ಏಕರೂಪತೆಯಿಂದ ಮೆರೆವಂಥ ರೂಪಂ
ತಿಳಿಯಾದ ಬಗೆಯಾಳದ ಅರಿವಿಗೆಟುಕುವ ತತ್ತ್ವ
ಮೊದಲಿರದ ತುದಿಯಿರದ ನಿತ್ಯನಂ ನಮಿಪೆಂ || ೩ ||
ಕುಂದದೊಳು ಸುಂದರಂ ಚಂದದಲಿ ಚಂದಿರಂ
ಅಮೃತದ ದ್ರವದಂತೆ ತಣ್ಪು ಮೈಬಣ್ಣ
ಜ್ಞಾನ-ಪುಸ್ತಕ-ಚಕ್ರ-ಶಂಖ ಜಪಸರಯಿಂದ
ಆಯುಧಗಳಂ ಹಿಡಿದ ವಿಭುವನು ನಮಿಪೆಂ || ೪ ||
ಎಣೆಯಿರದ ಕಾಂತಿಯವನ ಎಲ್ಲರಂತರ್ಯಾಮಿ
ಸಾವಿರದ ಮುಪ್ಪಿರದ ಸುಖರೂಪನಾ ಸ್ವಾಮಿ
ವಾಯುದೇವನ ತಂದೆ ಎಲ್ಲೆಡೆಯೂ ತುಂಬಿರುವ
ಜಗದೊಡೆಯನನು ಸದಾ ನಮಿಸುತಿರುವೆಂ || ೫ ||
ತಾನು ತಾನೇ ಆಗಿ ತುಂಬಿ ತುಳುಕಾಡುತಿಹ
ಸಂತಸದ ಸೆಲೆಯಿಂದ ಮೂಜಗಕೆ ಸುಖಕರಂ
ಅಣುವಿಗಿಂತಣುತರಂ ನೀರಲ್ಲಿ ಪವಡಿಸಿದ
ನಿತ್ಯಮೂರುತಿಯಾದ ದೇವನಂ ನಮಿಪೆಂ || ೬ ||
ಸೂರ್ಯಮಂಡಲದಲ್ಲಿ ನಡುವೆ ನೆಲೆನಿಂತವಗೆ
ವರವನು ಅಭಯವನು ಕೈಗಳಿಂದೀವಗೆ
ಸೂರ್ಯದೇವನ ಬಗೆಗೂ ನಿಲುಕದತಿತೇಜನಿಗೆ
ಪಾಪ ಪರಿಹಾರ ನಾರಾಯಣಗೆ ನಮಿಪೆಂ || ೭ ||
ಎಲ್ಲೆಡೆಯೂ ತುಂಬಿಹನ ಎಲ್ಲದರ ಕಾರಣನ
ಈ ಎಲ್ಲ ಲೋಕಗಳ ಅಜ್ಜ ಮುತ್ತಜ್ಜನ
ಬಹುರೂಪವುಳ್ಳವನ ಹುಟ್ಟುಸಾವಿರದವನ
ವಿಶ್ವರೂಪನ ಜಗದನಾಯಕನ ನಮಿಪೆಂ || ೮ ||
ಕಾಲದೇಶಾಕಾಶ ಪವಮಾನ ಮುಂತಾದ
ನಿತ್ಯತತ್ತ್ವಗಳನ್ನು ಸಂಹರಿಪ ಶಕ್ತಿ
ಪ್ರಕೃತಿದೇವಿಯೊಳಿದ್ದು ಜಗವ ನಡೆಸುವ ಪುರುಷ
ಬ್ರಹ್ಮದೇವಗೂ ತಂದೆಯಾದವಗೆ ನಮಿಪೆಂ || ೯ ||
ಜಗವನು ಸೃಷ್ಟಿಸಿದ ಬ್ರಹ್ಮದೇವಗು ತಂದೆ
ಜಗವನು ಸಂಹರಿಪ ಶಂಕರನಿಗಜ್ಜ
ಅಮರರಿಗೆ ಮುತ್ತಜ್ಜ ರಮೆಯ ಕೈ ಹಿಡಿದಾತ
ಹುಟ್ಟು ಸಾವುಗಳಿರದ ದೇವನಿಗೆ ನಮಿಪೆಂ || ೧೦ ||
ಈ ಜಗದ ಒಂದೊಂದು ಕಣದಲ್ಲು ತುಂಬಿರುವ
ದೋಷದೂರಂ ನಿತ್ಯಂ ಅಮೃತಸ್ವರೂಪಂ
ಶಂಖ ಚಕ್ರಗಳನ್ನು ಅಭಯ ವರ ಮುದ್ರೆಗಳ
ಕೈಗಳಲಿ ಹೊತ್ತಿರುವ ಹರಿಯ ನಮಿಪೆಂ || ೧೧ ||
ತನ್ನೊಳವಿತಿರುವಂಥ ಅಮಿತ ಪ್ರತಾಪದಿಂ
ಎಲ್ಲ ದೋಷಗಳನ್ನು ಪರಿಹರಿಸಿಕೊಂಡವಗೆ
ಅರಿಗಳನು ತರಿದವಗೆ ಭಕ್ತರನು ಕರುಣಿಸುವ
ಪರಮ ಪ್ರಸನ್ನನಿಗೆ ನಾನು ನಮಿಪೆಂ || ೧೨ ||
ಹುಟ್ಟು ಸಾವುಗಳಿರದ ತಿಳಿವಿಗೆಟುಕದ ತತ್ತ್ವ
ಎಲ್ಲೆಡೆಯೂ ತುಂಬಿರುವ ಪರಮನಮೃತಾತ್ಮ
ಎಲ್ಲ ಲೋಕಗಳಲ್ಲೂ ಅನವರತ ನೆಲೆಸಿರುವ
ಜಗದಾದಿ ನಾಯಕಗೆ ನಾನು ನಮಿಪೆಂ || ೧೩ ||
ತುಂಬು ಸಂತಸದವಗೆ ನಾಶವೇ ಇರದಂಥ
ಶುದ್ಧನಿಗೆ ಶಾಂತನಿಗೆ ದೋಷದೂರನಿಗೆ
ಲೋಕ ಆಲೋಕಗಳ ಹಿತವ ಬಯಸುವಗೆ
ರಮೆಯ ಕೈ ಹಿಡಿದವಗೆ ನಾನು ನಮಿಪೆಂ || ೧೪ ||
ದಟ್ಟೈಸಿಕೊಂಡಿರುವ ಸಂತಸದ ಸೆಲೆಯಿಂದ
ತುಂಬಿರುವ ಪರದೈವಂ ಇಂದ್ರ ಅನುಜಾತಂ
ನಿತ್ಯ ನಿರ್ಮಲ ರೂಪಂ ಎಲ್ಲರಿಂದುತ್ತಮಂ
ವಾದಭೂಮಿಗೆ ಸಿಗದ ನಿತ್ಯ ತತ್ತ್ವಂ
ಲೋಕವನಲೋಕವನು ಕಾಪಾಡುತಿರುವಂಥ
ಲೀಲಾಮಯಂ ರಮೆಯ ರಮಣನಂ ನಮಿಪೆಂ || ೧೫ ||
paaMcajanyada jatege kaiyalli sudarshanaM
gadheya-kamalava-shaar~gganaMdakagaLaM dharisi
satatavU jagavannu paalisuva taMdeyanu
shrIvAsudEvanannu sarvadaa namipeM || 1 ||
jagadedeyoLavitiruva elleDeyu tuMbiruva
saccidaanaMdagaLe maivetta mUrutiya
tannoLaMtaravirada dOShagaNadUranaada
obbanE obbanannu naanu namipeM || 2 ||
bahurUpagaLa dharisi ella rUpagaLallU
EkarUpateyiMda merevaMtha rUpaM
tiLiyaada bageyaaLada arivigeTukuva tattva
modalirada tudiyirada nityanaM namipeM || 3 ||
kuMdadoLu suMdaraM caMdadali caMdiraM
amRutada dravadaMte taNpu maibaNNa
j~jaana-pustaka-cakra-shaMKa japasarayiMda
AyudhagaLaM hiDida vibhuvanu namipeM || 4 ||
eNeyirada kaaMtiyavana ellaraMtaryaami
saavirada muppirada suKarUpanaa svaami
vaayudEvana taMde elleDeyU tuMbiruva
jagadoDeyananu sadaa namisutiruveM || 5 ||
taanu taanE Agi tuMbi tuLukaaDutiha
saMtasada seleyiMda mUjagake suKakaraM
aNuvigiMtaNutaraM nIralli pavaDisida
nityamUrutiyaada dEvanaM namipeM || 6 ||
sUryamaMDaladalli naDuve neleniMtavage
varavanu abhayavanu kaigaLiMdIvage
sUryadEvana bagegU nilukadatitEjanige
paapa parihaara naaraayaNage namipeM || 7 ||
elleDeyU tuMbihana elladara kaaraNana
I ella lOkagaLa ajja muttajjana
bahurUpavuLLavana huTTusaaviradavana
vishvarUpana jagadanaayakana namipeM || 8 ||
kaaladEshaakaasha pavamaana muMtaada
nityatattvagaLannu saMharipa shakti
prakRutidEviyoLiddu jagava naDesuva puruSha
brahmadEvagU taMdeyaadavage namipeM || 9 ||
jagavanu sRuShTisida brahmadEvagu taMde
jagavanu saMharipa shaMkaranigajja
amararige muttajja rameya kai hiDidaata
huTTu saavugaLirada dEvanige namipeM || 10 ||
I jagada oMdoMdu kaNadallu tuMbiruva
dOShadUraM nityaM amRutasvarUpaM
shaMKa cakragaLannu abhaya vara mudregaLa
kaigaLali hottiruva hariya namipeM || 11 ||
tannoLavitiruvaMtha amita prataapadiM
ella dOShagaLannu pariharisikoMDavage
arigaLanu taridavage bhaktaranu karuNisuva
parama prasannanige naanu namipeM || 12 ||
huTTu saavugaLirada tiLivigeTukada tattva
elleDeyU tuMbiruva paramanamRutaatma
ella lOkagaLallU anavarata nelesiruva
jagadaadi naayakage naanu namipeM || 13 ||
tuMbu saMtasadavage naashavE iradaMtha
shuddhanige shaaMtanige dOShadUranige
lOka AlOkagaLa hitava bayasuvage
rameya kai hiDidavage naanu namipeM || 14 ||
daTTaisikoMDiruva saMtasada seleyiMda
tuMbiruva paradaivaM iMdra anujaataM
nitya nirmala rUpaM ellariMduttamaM
vaadabhUmige sigada nitya tattvaM
lOkavanalOkavanu kaapaaDutiruvaMtha
lIlaamayaM rameya ramaNanaM namipeM || 15 ||