ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎನ್ನ ಬಿನ್ನಪ ಕೇಳೊ ಧನ್ವಂತ್ರಿ | ಗೋಪಾಲ ವಿಠಲ | Enna Binnapa Kelo Dhanvantri | Gopala Vithala


ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala dasaru (Gopala vittala)


ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಮೋಚನ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ || ಪ. ||

ಆರೋಗ್ಯ ಆಯುಷ್ಯ ಐಶ್ವರ್ಯವೆಂಬ ಈ ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರಣವಾಗಿಪ್ಪವೊ
ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ 
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸೊ ಸ್ವಾಮಿ || ೧ ||

ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆ 
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವೊ
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೆ ಸಲಹೋ ಸ್ವಾಮಿ || ೨ ||

ಅನ್ಯರನು ಭಜಿಸದಲೆ ನಿನ್ನನೆ ಸ್ಮರಿಸುತ್ತ ನಿನ್ನ ಚಿಹ್ನೆಗಳನ್ನೇ ಧರಿಸಿ 
ನಿನ್ನ ನಾಮೋಚ್ಛರಿಸಿ ನಿನ್ನವರವನೆನಿಸಿ ನಿನ್ನಿಂದ ಉಪಜೀವಿಸಿ 
ಅನ್ನ ಆರೋಗ್ಯವು ಅಲ್ಪವು ಆಗೆ ಅನ್ಯರಿಗೆ ಇನ್ನು ಆಲ್ಪರಿಯಬೇಕೇ
ನಿನ್ನ ಸಂಕಲ್ಪ ಭಕುತರನ್ನು ಪೋಷಿಪೆನೆಂದು ಘನ್ನ ಬಿರುದನ್ನ ಉಳುಹೊ ಸ್ವಾಮಿ || ೩ ||

ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೆ ಔಷಧವು ನೀನೇ
ಹೇ ದೇವ ನಿನ್ನ ಕರಕಮಲದಿಂ ಸುಧೆಗರೆದು ಸಾಧುಗಳ ಪಾಲಿಸುವ ನೀನೇ 
ಮೋದ ಬಡಿಸುವಿ ನಿನ್ನ ಸಾಧಿಸುವವರಿಗೆ ಶುಭೋದಯಂಗಳ ನೀಡಿ
ಆದರಿಸಿ ಅವಗೆ ತವ ಪಾದ ಧ್ಯಾನವನಿತ್ತು ಸಾಧುಗಳೊಳಗಿರಿಸಿ ಮೋದಕೊಡು ಸರ್ವದಾ || ೪ ||

ನಿನ್ನವರಲಿ ಇವಗೆ ಇನ್ನು ರತಿಯನು ಕೊಡು ನಿನ್ನವನೆಂದು ಅರಿದು
ನಿನ್ನ ಪ್ರಾರ್ಥಿಸಿದೆ ನಾ ಅನ್ಯರಿಗೆ ಆಲ್ಪರಿಯೆ ಎನ್ನ ಪಾಲಿಸುವ ದೊರೆಯೇ
ಎನ್ನ ಮಾತಲ್ಲ ಇದು ಎನ್ನ ಹಿರಿಯರ ಮಾತು ಮನ್ನಿಸಬೇಕೋ ಕರುಣಿ
ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸಯ್ಯ ಪ್ರಭುವೆ || ೫ ||

enna binnapa kELo dhanvaMtri dayamADo saNNavanu iva kEvala
bannabaDisuva rOgavannu mOchana mADi cennAgi pAlisuvudu karuNi || pa. ||

ArOgya AyuShya aiSvaryaveMba I mUruvidha vastugaLu
nArAyaNana BajakarAdavara sAdhanake pUraNavAgippavo
GOra vyaBicAra paraniMde para vittApahAra mADida dOShadi 
daridrarAguvaru mUru vidhadiMdali kAraNanu nIne duShkarma parihariso svaami || 1 ||

vasumatiya mElinnu asura janare bahaLa vaSavalla kaliya bAdhe 
bisiliMda pIDitavAda sasigaLaMte shishugaLu nAvippevo
asurAri ninna karuNAmRutada maLegaredu kuSaladi pAlisuvudu
kesariMda kesaru toLedaMte karmada pathavu asunAtha hariye salahO svAmi || 2 ||

anyaranu Bajisadale ninnane smarisutta ninna cihnegaLannE dharisi 
ninna nAmOcCarisi ninnavaravanenisi ninniMda upajIvisi 
anna ArOgyavu alpavu Age anyarige innu AlpariyabEkE
ninna saMkalpa Bakutarannu pOShipeneMdu Ganna birudanna uLuho svaami || 3 ||

AdivyAdhigaLu unmAda viBrama nAnA bAdhege auShadhavu nInE
hE dEva ninna karakamaladiM sudhegaredu sAdhugaLa paalisuva nInE 
mOda baDisuvi ninna sAdhisuvavarige SuBOdayaMgaLa nIDi
Adarisi avage tava pAda dhyAnavanittu sAdhugaLoLagirisi mOdakoDu sarvadA || 4 ||

ninnavarali ivage innu ratiyanu koDu ninnavaneMdu aridu
ninna prArthiside naa anyarige Alpariye enna pAlisuva doreyE
enna mAtalla idu enna hiriyara mAtu mannisabEkO karuNi
anaMta guNapUrNa gOpAlaviThala innidane pAlisayya prabhuve || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru